ಮೋದಿ ಪ್ರಧಾನಿಯಾದ ನಂತರ ಜನತೆ ಭಯದಲ್ಲಿ, ಶ್ರೀರಾಮುಲುವಿಗೆ ಇತಿಹಾಸ ಗೊತ್ತಿಲ್ಲ : ಸಿದ್ದರಾಮಯ್ಯ

ಮೋದಿ ಅವರು ಪ್ರಧಾನಿಯಾದ ನಂತರ ಮಾನವ ವಿರೋಧಿ ಕೆಲಸ ಹೆಚ್ಚಾಗುತ್ತಿದೆ. ಎಲ್ಲೆಡೆ ದ್ವೇಷ ರಾಜಕಾರಣ, ಹಿಂಸೆಯ ರಾಜಕಾರಣದಿಂದ ಜನ ಇಂದು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ದಲಿತರು, ಹಿಂದುಳಿದವರು,. ಅಲ್ಪಸಂಖ್ಯಾತರು, ರೈತರು, ಬಡವರು ಭಯದಲ್ಲಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. 
ಬಳ್ಳಾರಿ ಕಾಂಗ್ರೆಸ್ ಸಮಾವೇಶದಲ್ಲಿ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಮತ್ತಿತರರು
ಬಳ್ಳಾರಿ ಕಾಂಗ್ರೆಸ್ ಸಮಾವೇಶದಲ್ಲಿ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಮತ್ತಿತರರು

ಬಳ್ಳಾರಿ: ಮೋದಿ ಅವರು ಪ್ರಧಾನಿಯಾದ ನಂತರ ಮಾನವ ವಿರೋಧಿ ಕೆಲಸ ಹೆಚ್ಚಾಗುತ್ತಿದೆ. ಎಲ್ಲೆಡೆ ದ್ವೇಷ ರಾಜಕಾರಣ, ಹಿಂಸೆಯ ರಾಜಕಾರಣದಿಂದ ಜನ ಇಂದು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ದಲಿತರು, ಹಿಂದುಳಿದವರು,. ಅಲ್ಪಸಂಖ್ಯಾತರು, ರೈತರು, ಬಡವರು ಭಯದಲ್ಲಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. 

ಭಾರತ ಜೋಡೋ ಯಾತ್ರೆ ಭಾಗವಾಗಿ ಬಳ್ಳಾರಿಯಲ್ಲಿ ಶನಿವಾರ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಕುವೆಂಪು ಅವರು ಭಾರತ ಸರ್ವಜನಾಂಗದ ಶಾಂತಿಯ ತೋಟವಾಗಬೇಕು, ಎಲ್ಲ ಜನರು ಶಾಂತಿಯಿಂದ ಪ್ರೀತಿಯಿಂದ ಬದುಕುವಂತೆ ಪರಿಸ್ಥಿತಿ ನಿರ್ಮಾಣ ಆಗಬೇಕು ಎಂದಿದ್ದರು. ಆದರೆ ಆರ್ ಎಸ್ಎಸ್ ಹಾಗೂ ಸಂಘ ಪರಿವಾರದವರು ದೇಶದಲ್ಲಿ ಧರ್ಮದ ರಾಜಕಾರಣ ಮಾಡಿ ಅಶಾಂತಿ ಸೃಷ್ಟಿಸುವ ನೀಚ ಕೆಲಸ ಮಾಡುತ್ತಿದ್ದಾರೆ ಎಂದರು.

ಈ ಜಿಲ್ಲೆಯ ಮಂತ್ರಿ ರಾಮುಲು ಒಂದು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ದೇಶಕ್ಕೆ ಏನೂ ಮಾಡಿಲ್ಲ. ನೆಹರೂಕುಟುಂಬ ದೇಶಕ್ಕೆ ಏನೂ ಮಾಡಿಲ್ಲ. ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಏನು ಮಾಡಿಲ್ಲ ಎಂದು ಹೇಳಿದ್ದಾರೆ. ಶ್ರೀರಾಮುಲು ಅವರಿಗೆ ನೆನಪಿಸುತ್ತಿದ್ದೇನೆ, ರಾಮುಲು ನಿಮಗೆ ಇತಿಹಾಸ ಗೊತ್ತಿಲ್ಲ ಎಂದು ಹೇಳಿದರು

ನೆಹರೂ ಕಾಂಗ್ರೆಸ್ ಬಗ್ಗೆ ಮಾತನಾಡಲು ನಿಮಗೆ ಯಾವುದೇ ನೈತಿಕ ಹಕ್ಕಿಲ್ಲ. 1977ರಲ್ಲಿ ವಿಜಯನಗರ ಉಕ್ಕಿನ ಕಾರ್ಖಾನೆ ಸ್ಥಾಪಿಸಿದವರು ಯಾರು? ಸಾವಿರಾರು ಮಂದಿಗೆ ಉದ್ಯೋಗ ಕೊಟ್ಟು ಊಟ ಕೊಟ್ಟಿದ್ದರೆ ಅದಕ್ಕೆ ಇಂದಿರಾ ಗಾಂಧಿ ಕಾರಣ ಎಂದು ಹೇಳಿದರು. ಸೋನಿಯಾ ಗಾಂಧಿ ಅವರು 1999ರಲ್ಲಿ ಬಳ್ಳಾರಿಯಿಂದ ಗೆದ್ದು ಲೋಕಸಭಾ ಸದಸ್ಯರಾದ ನಂತರ ವಿದ್ಯತ್ ಯೋಜನೆಗೆ 3300 ಕೋಟಿ ತಂದವರು ಯಾರು? ಸೋನಿಯಾ ಗಾಂಧಿ ಅವರು ಎಂದರು.

ಬಳ್ಳಾರಿಗೆ ರಾಮುಲು ನಿಮ್ಮ ಹಾಗೂ ಬಿಜೆಪಿ ಕೊಡುಗೆ ಏನು? ಮೋದಿ ಪ್ರಧಾನಿ ಆಗಿ 8 ವರ್ಷ ಆಗಿದೆ ಬಳ್ಳಾರಿ ಜಿಲ್ಲೆಗೆ 1 ರೂ. ಕೆಲಸ ಆಗಿದೆಯಾ? ನಿಮ್ಮಂಥ ಪೆದ್ದನ ಜತೆ ಚರ್ಚೆಗೆ ನಾವು ಸಿದ್ದರಿಲ್ಲ. ಲೂಟಿ ಹೊಡೆದಿದ್ದು ನಿಮ್ಮ ಸಾಧನೆ. ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ಕೊಟ್ಟವರು ಯಾರು? ನಾವು ಪಾದಯಾತ್ರೆ ಮಾಡಿದ ನಂತರ ಜನಾರ್ದನ ರೆಡ್ಡಿ ಜೈಲಿಗೆ ಹೋಗಬೇಕಾಯಿತು. ಕಾಂಗ್ರೆಸ್ ಪ್ರಶ್ನಿಸಲು ನಿಮಗೆ ಯಾವುದೇ ನೈತಿಕ ಆಧಾರವಿಲ್ಲ.

ರಾಮುಲು, ಬಳ್ಳಾರಿಗೆ ಕಾಂಗ್ರೆಸ್ ಮಾಡಿರುವ ಕೊಡುಗೆ ಬಗ್ಗೆ ಚರ್ಚೆ ಮಾಡಲು ಉಗ್ರಪ್ಪ ಅವರನ್ನು ಕಳುಹಿಸಿಕೊಡುತ್ತೇನೆ. ಚರ್ಚೆ ಮಾಡಿ. ಇಂದು 40% ಕಮಿಷನ್ ಸರ್ಕಾರ ಎಂದು ಬಿಜೆಪಿ ಸರ್ಕಾರಕ್ಕೆ ಕರೆಯುತ್ತಾರೆ. ಇದು ನಾನು ಹೇಳುತ್ತಿಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಮಂತ್ರಿಗೆ ಪತ್ರ ಬರೆದು ಹೇಳಿದ್ದಾರೆ. ಈ ಪತ್ರ ಬರೆದು ಒಂದು ವರ್ಷವಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮೋದಿ ಅವರು ಮಾತೆತ್ತಿದರೆ ನಾ ಖಾವೂಂಗಾ, ನಾ ಖಾನೇದೂಂಗ ಎನ್ನುತ್ತಾರೆ. ಮೋದಿ ಅವರೇ ಎಲ್ಲಿದ್ದೀರಿ? ನಾಚಿಕೆಯಾಗುವುದಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com