ಬೆಂಗಳೂರು: ದೇಶದಲ್ಲೀಗ ಯಾತ್ರೆಗಳ ಸದ್ದು. ಕಾಂಗ್ರೆಸ್‌ನಿಂದ ಭಾರತ್ ಜೋಡೋ ಯಾತ್ರೆ ಕರ್ನಾಟಕದಿಂದ ಆಂಧ್ರದ ಕಡೆ ಹೊರಟಿದೆ.
ಪಾದಯಾತ್ರೆಯನ್ನು ಹೆಚ್ಚಾಗಿ ಯಶಸ್ಸಿನ ಮಾರ್ಗ ಎಂದು ಪರಿಗಣಿಸಲಾಗುತ್ತಿದೆ. ಮಾಜಿ ಪ್ರಧಾನಿ ಚಂದ್ರಶೇಖರ್, ಎನ್ ಟಿ ರಾಮರಾವ್ ಕೂಡ ಬದಲಾವಣೆಗಾಗಿ ಪಾದಯಾತ್ರೆ ನಡೆಸಿದರು. ಎಲ್ ಕೆ ಅಡ್ವಾಣಿ ರಥಯಾತ್ರೆ, 2003 ರಲ್ಲಿ ವೈಎಸ್ ರಾಜಶೇಖರ ರೆಡ್ಡಿ ಮತ್ತು 2013 ರಲ್ಲಿ ಸಿದ್ದರಾಮಯ್ಯ ಬಳ್ಳಾರಿ ಪಾದಯಾತ್ರೆ ನಡೆಸಿ ಸಾಕಷ್ಟು ಯಶಸ್ಸು ಪಡೆದಿದ್ದಾರೆ.
ಭಾರತ್ ಜೋಡೋ ಯಾತ್ರೆಯಲ್ಲಿ 1000 ಕಿ.ಮೀ ಕ್ರಮಿಸಿದ ರಾಹುಲ್ ಗಾಂಧಿ ಬಳ್ಳಾರಿಯಲ್ಲಿ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು, ರಾಹುಲ್ ಅವರ ಈ ನಡಿಗೆ ರಾಜಕೀಯ ಮತ್ತು ವೈಯಕ್ತಿಕ ಜೀವನದಲ್ಲಿ ಹಲವು ಬದಲಾವಣೆ ತರಬಹುದು ಎಂದು ರಾಜಕೀಯ ವೀಕ್ಷಕರ ಅಭಿಪ್ರಾಯವಾಗಿದೆ. ಗಂಭೀರತೆ, ಬದ್ಧತೆಯಿಲ್ಲದ, ಅರೆಕಾಲಿಕ ರಾಜಕಾರಣಿಯ ಇಮೇಜ್ ನಿಂದ ಹೊರಬರಲಿರುವ ರಾಹುಲ್ ಗಾಂಧಿ ಪ್ರಬುದ್ಧ ನಾಯಕನಂತೆ ತೋರಲು ಈ ಪಾದಯಾತ್ರೆ ಸಹಾಯವಾಗಲಿದೆ.
ರಾಹುಲ್ ಯಾತ್ರೆ ಆರಂಭಿಸಿದಾಗ ಅವರನ್ನು ‘ಪಪ್ಪು’ ಎಂದು ವ್ಯಂಗ್ಯವಾಗಿ ಸಂಬೋಧಿಸಲಾಗುತ್ತಿತ್ತು, ನಾಯಕತ್ವದ ಕೌಶಲ್ಯತೆ ಕೊರತೆಯಿರುವ ರಾಜವಂಶದ ಕುಡಿ, ಅವಕಾಶ ಸಿಕ್ಕಾಗಲೆಲ್ಲಾ ವಿದೇಶಕ್ಕೆ ಪಲಾಯನ ಮಾಡುವ ರಾಜಕುಮಾರ ಎಂದೆಲ್ಲಾ ವಿರೋಧ ಪಕ್ಷದವರು ರಾಹುಲ್ ಗಾಂಧಿ ಕಾಲೆಳೆಯುತ್ತಿದ್ದರು.
ರಾಹುಲ್ ಗಾಂಧಿಯನ್ನು ಟೀಕಿಸಿದ್ದ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ಅರ್ಧ ಮನಸ್ಸಿನ ಇಷ್ಟವಿಲ್ಲದ ನಾಯಕ ಎಂದಿದ್ದರು, ಇದಲ್ಲದೇ ಸಾಮಾಜಿಕ ಮಾಧ್ಯಮದಲ್ಲಿ ರಾಹುಲ್ ಬಗ್ಗೆ ಹಲವು ಮೀಮ್ಸ್ ಗಳು ಹರಿದಾಡುತ್ತಿರುತ್ತವೆ.
ವಾಸ್ತವವಾಗಿ, ಯಾತ್ರೆ ಪ್ರಾರಂಭವಾದಾಗ, ಇದು ಪ್ರಚಾರದ ಗಿಮಿಕ್ ಎಂದು ಹೇಳಲಾಯಿತು .ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು, ಇದು "ಕೇವಲ ಸ್ಟಂಟ್" ಎಂದು ಪ್ರತಿಕ್ರಿಯಿಸಿದ್ದರು.
ಇದಲ್ಲದೇ ವಿರೋಧಿಗಳು ಹಾಸ್ಯದ ಪ್ರತಿಕ್ರಿಯೆ ನೀಡಿದ್ದರು. ರಾಜಕೀಯ ಸ್ಥೈರ್ಯದ ಕೊರತೆಯಿರುವ ಮತ್ತು ಅಜ್ಞಾತ ಸ್ಥಳಗಳಿಗೆ ಇದ್ದಕ್ಕಿದ್ದಂತೆ ಹೊರಟುಹೋಗುವ, ಹಿರಿಯ ನಾಯಕರ ಬಗ್ಗೆ ನಿರ್ಲಕ್ಷ್ಯ ಹೊಂದಿರುವ ಮತ್ತು ಕೂಟಕ್ಕೆ ಸೀಮಿತವಾಗಿರುವ ಎಂಬ ರಾಜಕಾರಣಿಯ ಚಿತ್ರಣವನ್ನು ಯಾತ್ರೆಯು ಬದಲಾಯಿಸಬಹುದು ಎಂದು ತಜ್ಞರು ಹೇಳುತ್ತಾರೆ.
“ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯನ್ನು ಪೂರ್ಣಗೊಳಿಸುವ ಹೊತ್ತಿಗೆ, 2024 ರ ಹೊತ್ತಿಗೆ ಮೋದಿ ಸರ್ಕಾರಕ್ಕೆ ಪರ್ಯಾಯವಾಗಿ ಏಕೈಕ ನಾಯಕರಾಗುತ್ತಾರೆ. ಗ್ರಾಮೀಣ ಭಾರತವು ಸಾಲ್ಟ್ ಆಫ್ ದಿ ಅರ್ತ್ ರೀತಿಯಲ್ಲಿ ರಾಹುಲ್ ಅವರನ್ನು ಪ್ರೀತಿಸುತ್ತದೆ, ಜನರೊಂದಿಗೆ ನೇರವಾಗಿ ಸಂಪರ್ಕ ಸಾಧಿಸುವ ರಾಜಕಾರಣಿ ರಾಹುಲ್ ಆಗುತ್ತಾರೆ ಎಂದು ರಾಜಕೀಯ ವಿಮರ್ಶಕ ಬಿ.ಎಸ್ ಮೂರ್ತಿ ಹೇಳಿದ್ದಾರೆ.
ಪಾದಯಾತ್ರೆಯಿಂದ ರಾಹುಲ್ ಗಾಂಧಿ ರಾಜಕೀಯ ಲಾಭ ಪಡೆಯುತ್ತಾರೋ, ಇಲ್ಲವೋ ಆದರೆ ಪಪ್ಪು ಎಂಬ ಇಮೇಜ್ ನಿಂದ ಹೊರಬರಲಿದ್ದಾರೆ. ಪಕ್ಷಕ್ಕೆ ಕಳೆದು ಹೋಗಿರುವ ನೆಲೆಯನ್ನು ಮರಳಿ ಪಡೆಯಲು ತಾವು ಹೋರಾಟಗಾರನಾಗಬಹುದು ಎಂಬುದನ್ನು ರಾಹುಲ್ ತೋರಿಸುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಜನರು ತಮ್ಮ ನಾಯಕರು ಟೆಲಿವಿಷನ್ ಸೆಟ್‌ನಿಂದ ಇಳಿದು ತಮ್ಮ ಜೀವನದಲ್ಲಿ ಙತ್ತಿವಾಗಲು ಬಯಸುತ್ತಾರೆ, ಅಕ್ಷರಶಃ ಪಾದಯಾತ್ರೆ ಈ ಉದ್ದೇಶವನ್ನು ಸಾಧಿಸುತ್ತದೆ. ಜನರು ತಮ್ಮ ನಾಯಕರು ಕಷ್ಟಪಟ್ಟು ಕೆಲಸ ಮಾಡುವುದನ್ನು ನೋಡಲು ಇಷ್ಟಪಡುತ್ತಾರೆ. ಸಾಮಾನ್ಯ ಜನರು ಹಸಿದ ರಾಜಕಾರಣಿಗಳನ್ನು ಬೆಂಬಲಿಸಲು ಇಷ್ಟಪಡುತ್ತಾರೆ, ರಾಹುಲ್ ಗಾಂಧಿ ಅವರು ಮೊದಲ ಬಾರಿಗೆ ಈ ಯಾತ್ರೆಯ ಮೂಲಕ ಹಸಿವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ರಾಜಕೀಯ ತಜ್ಞ ಹರೀಶ್ ಬಿಜೂರ್ ಹೇಳಿದ್ದಾರೆ.
Advertisement