ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವರುಣ ಕ್ಷೇತ್ರದಿಂದ ಸ್ಪರ್ಧಿಸುವ ತೀರ್ಮಾನ ಮಾಡಿದರೆ ನಾನು ಪಕ್ಷದ ಕಾರ್ಯಕರ್ತ ಹಾಗೂ ಆ ಕ್ಷೇತ್ರದ ಹಿಂದಿನ ಶಾಸಕನಾಗಿ ಅವರ ಪರ ಕೆಲಸ ಮಾಡಬೇಕಾಗುತ್ತದೆ ಎಂದು ಅವರ ಪುತ್ರ, ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ತಂದೆ ಸಿದ್ದರಾಮಯ್ಯ ಅವರು ಮತ್ತೆ ವರುಣ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಸುಳಿವು ನೀಡಿದ ಅವರು, ಸಿದ್ದರಾಮಯ್ಯ ಅವರು ವರುಣದಿಂದ ಸ್ಪರ್ಧೆ ಮಾಡ್ತಾರಾ ಎಂದು ಸಾಕಷ್ಟು ಜನ ಕೇಳಿದ್ದಾರೆ. ನಾನು ಸಾಕಷ್ಟು ಬಾರಿ ಉತ್ತರ ಹೇಳಿದ್ದೇನೆ. ತಂದೆಯವರು ಎಲ್ಲಿ ನಿಲ್ಲಬೇಕು ಎಂದು ಇನ್ನೂ ತೀರ್ಮಾನ ಮಾಡಿಲ್ಲ. ಅವರು ವರುಣದಲ್ಲಿದ್ದಾರೂ ನಿಲ್ಲಬಹುದು, ಬೇರೆ ಕಡೆಯಾದರು ನಿಲ್ಲಬಹುದು ಎಂದು ಹೇಳಿದರು.
ವರುಣ ಕ್ಷೇತ್ರ ಬಿಟ್ಟು ಬೇರೆ ಕಡೆಯಲ್ಲು ಅವರಿಗೆ ಆಹ್ವಾನವಿದೆ. ವರುಣ ಕ್ಷೇತ್ರದಲ್ಲಿ ನಿಲ್ಲಬೇಕು ಎಂದು ಅಪ್ಪ ತೀರ್ಮಾನ ಮಾಡಿದರೆ ನಾನು ಪಕ್ಷದ ಕಾರ್ಯಕರ್ತ ಹಾಗೂ ಆ ಕ್ಷೇತ್ರದ ಹಿಂದಿನ ಶಾಸಕನಾಗಿ ಅವರ ಪರ ಕೆಲಸ ಮಾಡಬೇಕಾಗುತ್ತದೆ. ಅಪ್ಪ ನಿಂತರೇ ನಾನು ಎಲ್ಲೂ ಸ್ಪರ್ಧೆ ಮಾಡಲ್ಲ. ಕ್ಷೇತ್ರದಲ್ಲಿ ಕೆಲಸ ಮಾಡಬೇಕಾಗುತ್ತದೆ. ಅಪ್ಪನಿಗಾಗಿ ಪ್ರಚಾರ ಮಾಡ್ತೇನೆ. ಇದರಲ್ಲಿ ತ್ಯಾಗ ಏನೂ ಇಲ್ಲ. ತಂದೆ ನಿಲ್ಲತಾರೆ ಎಂದ್ರೆ ಬೇರೆಯವರು ಬಿಟ್ಟು ಕೊಡ್ತಾರೆ. ನಾನು ಕೂಡ ಪಕ್ಷದ ಕಾರ್ಯಕರ್ತನಾಗಿ ಬಿಟ್ಟು ಕೊಡ್ತೇನೆ ಎಂದು ಹೇಳಿದರು.
Advertisement