ಪಿಎಫ್ಐ ಸಿದ್ದರಾಮಯ್ಯನವರ ಪಾಪದ ಕೂಸು, ಅವರ ಅಪರಾಧಗಳಿಂದ ಇಷ್ಟೆಲ್ಲ ಅನಾಹುತಗಳಾಗಿದೆ: ಬಿ ಎಸ್ ಯಡಿಯೂರಪ್ಪ

ಪಿಎಫ್ಐ ಸಂಘಟನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಾಪದ ಕೂಸು. ಪಿಎಫ್ಐ ಸಂಘಟನೆಗೆ ಹೇರಲಾಗಿದ್ದ ನಿಷೇಧವನ್ನು ತೆಗೆದುಹಾಕಿದ್ದು ಅವರು ಮುಖ್ಯಮಂತ್ರಿಯಾಗಿದ್ದಾಗಲೇ. ಇವತ್ತು ಏನೂ ತೋಚದೆ ಸಿದ್ದರಾಮಯ್ಯನವರು ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆರೋಪಿಸಿದ್ದಾರೆ.
ಬಿ ಎಸ್ ಯಡಿಯೂರಪ್ಪ, ಸಿದ್ದರಾಮಯ್ಯ
ಬಿ ಎಸ್ ಯಡಿಯೂರಪ್ಪ, ಸಿದ್ದರಾಮಯ್ಯ
Updated on

ಶಿವಮೊಗ್ಗ: ಪಿಎಫ್ಐ ಸಂಘಟನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಾಪದ ಕೂಸು. ಪಿಎಫ್ಐ ಸಂಘಟನೆಗೆ ಹೇರಲಾಗಿದ್ದ ನಿಷೇಧವನ್ನು ತೆಗೆದುಹಾಕಿದ್ದು ಅವರು ಮುಖ್ಯಮಂತ್ರಿಯಾಗಿದ್ದಾಗಲೇ. ಇವತ್ತು ಏನೂ ತೋಚದೆ ಸಿದ್ದರಾಮಯ್ಯನವರು ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆರೋಪಿಸಿದ್ದಾರೆ.

ಶಿವಮೊಗ್ಗದಲ್ಲಿಂದು ಮಾತನಾಡಿದ ಅವರು, ಈ ತಪ್ಪುಗಳಿಗೆಲ್ಲಾ ಮೂಲ ಕಾರಣ ಸಿದ್ದರಾಮಯ್ಯನವರೇ. ಇಂದು ಅವರಿಗೆ ತಪ್ಪಿನ ಅರಿವಾಗಿ ಪ್ರಾಮಾಣಿಕವಾಗಿ ಮಾತನಾಡುವುದು ಬಿಟ್ಟು ಹಗುರವಾಗಿ ಮಾತನಾಡುತ್ತಿರುವುದು ಅಚ್ಚರಿಯಾಗುತ್ತದೆ. ಈಗಲಾದರೂ ಅವರು ಸ್ವಲ್ಪ ಜಾಗರೂಕರಾಗಿ ಮಾತನಾಡಬೇಕೆಂದರು.

ವಿಪಕ್ಷಗಳಲ್ಲಿ ಇಂದು ಸಿದ್ದರಾಮಯ್ಯನವರೇ ಪಿಎಫ್ಐ ಬ್ಯಾನ್ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದು. ಅವರು ಮಾಡಿದ ಅಪರಾಧಗಳಿಂದ ಇಷ್ಟೆಲ್ಲ ಅನಾಹುತಗಳಾಯಿತು ಎಂದು ಆರೋಪಿಸಿದರು.

ಇಡೀ ದೇಶದ ಜನ ನಮ್ಮ ಜತೆಗಿದ್ದಾರೆ. ಅದನ್ನು ನೋಡಿ ಸಿದ್ದರಾಮಯ್ಯನವರಿಗೆ ಸಹಿಸಲಾಗುತ್ತಿಲ್ಲ. ಏನೂ ತೋಚದೆ ಹುಚ್ಚರಂತೆ ಮಾತನಾಡುತ್ತಿದ್ದಾರೆ. ತಮ್ಮ ತಪ್ಪಿನ ಅರಿವಾಗಿ ನಾಡಿನ ಜನರಿಗೆ ಕ್ಷಮೆ ಕೇಳಬೇಕಿತ್ತು. ಈಗಲಾದರೂ ಸಿದ್ದರಾಮಯ್ಯನವರು ಜಾಗೃತರಾಗಬೇಕು ಎಂದು ಹೇಳಿದರು. ಸೊರಬ ಕಾಂಗ್ರೆಸ್ ಮುಖಂಡ ರಾಜು ತಲ್ಲೂರು ಬಿಜೆಪಿ ಪಕ್ಷ ಸೇರ್ಪಡೆಯಾದರು.

ಮಡಿವಾಳ ಸಮಾಜದ ಮುಖಂಡರಾಗಿದ್ದಾರೆ. ಅವರು ಬಿಜೆಪಿಯ ಪಕ್ಷ ಸೇರ್ಪಡೆಯಿಂದ ನಾಲ್ಕು ಐದು ಕ್ಷೇತ್ರಕ್ಕೆ ಅನುಕೂಲ. ಯಾವುದೇ ಬೇಡಿಕೆ ಇಲ್ಲದೇ ಅವರು ಬಿಜೆಪಿ ಪಕ್ಷ ಸೇರ್ಪಡೆ ಆಗಿದ್ದಾರೆ. ರಾಜು ತಲ್ಲೂರು ಬಿಜೆಪಿ ಪಕ್ಷ ಸೇರ್ಪಡೆಯಿಂದ ಸೊರಬ ಕ್ಷೇತ್ರದಲ್ಲಿ ಅನುಕೂಲವಾಗಲಿದೆ ಎಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com