ಸಾ.ರಾ ಮಹೇಶ್
ಸಾ.ರಾ ಮಹೇಶ್

ನಾಲ್ಕನೇ ಗೆಲುವಿನತ್ತ ಸಾ.ರಾ ಮಹೇಶ್ ಹೆಜ್ಜೆ: ಕೆ.ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಟಫ್ ಫೈಟ್

ಕಳೆದ  ಚುನಾವಣೆಯಲ್ಲಿ 1,800 ಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆದ್ದ ನಂತರ, ಕೃಷ್ಣರಾಜನಗರ (ಕೆಆರ್ ನಗರ) ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
Published on

ಮಂಡ್ಯ: ಕಳೆದ  ಚುನಾವಣೆಯಲ್ಲಿ 1,800 ಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆದ್ದ ನಂತರ, ಕೃಷ್ಣರಾಜನಗರ (ಕೆಆರ್ ನಗರ) ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. 

ನಾಲ್ಕನೇ ಗೆಲುವು ಸಾಧಿಸಲು ಶಾಸಕ ಸಾ.ರಾ.ಮಹೇಶ್ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರವಿಶಂಕರ್ ಕೂಡ ಈ ಬಾರಿ ಗೆಲ್ಲಲೇಬೇಕೆಂಬ ಪಣ ತೊಟ್ಟಿದ್ದಾರೆ.

2.10 ಲಕ್ಷಕ್ಕೂ ಅಧಿಕ ಮತದಾರರನ್ನು ಹೊಂದಿರುವ ಕೃಷ್ಣರಾಜನಗರ ಹ್ಯಾಟ್ರಿಕ್ ಸಾಧನೆ ಮಾಡಿದ ಜೆಡಿಎಸ್ ನಾಯಕರ  ಪ್ರಬಲ ಕ್ಷೇತ್ರವಾಗಿದೆ. ಜೆಡಿಎಸ್ ಗೆ ಕಠಿಣ ಹೋರಾಟ ನೀಡುವಲ್ಲಿ ಯಶಸ್ವಿಯಾಗಿದ್ದರೂ, ಜನತಾ ದಳದ (ಜಾತ್ಯತೀತ) ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟ ಮತ್ತು ಒಕ್ಕಲಿಗ ನಾಯಕರ ಪ್ರಾಬಲ್ಯವಿರುವ ಪ್ರದೇಶದಲ್ಲಿ ಕ್ಷೇತ್ರ ಗೆಲ್ಲಲು ಕಾಂಗ್ರೆಸ್ ವಿಫಲವಾಗಿದೆ.

ತಾಲೂಕಿಗೆ ಹಲವಾರು ಜನಕಲ್ಯಾಣ ಕಾರ್ಯಕ್ರಮಗಳನ್ನು ತಂದು ಕ್ಷೇತ್ರದ ಅಭಿವೃದ್ಧಿಗೆ ಶಾಸಕರ ನಿಧಿಯನ್ನು ಮುಕ್ತವಾಗಿ ಖರ್ಚು ಮಾಡಿದ ಕೀರ್ತಿಗೆ ಭಾಜನರಾದ ಮಹೇಶ್ ಪಕ್ಕದ ಸ್ಥಳೀಯ ನಾಯಕರಾದರು.

ತಮ್ಮ ಮತದಾರರಿಗೆ ಸುಲಭವಾಗಿ ಲಭ್ಯವಾಗಿ ಜನರ ಕುಂದುಕೊರತೆಗಳಿಗೆ ಸ್ಪಂದಿಸುವ ಮೂಲಕ ಮತ್ತಷ್ಟು ಜನಪ್ರಿಯರಾಗಿದ್ದಾರೆ. 2018 ರಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಆಳ್ವಿಕೆಯಲ್ಲಿ ಅವರನ್ನು ಪ್ರವಾಸೋದ್ಯಮ ಸಚಿವರನ್ನಾಗಿ ಮಾಡಲಾಯಿತು.

ಆದರೆ, ಮೈಸೂರು ಮಾಜಿ ಡಿಸಿ ರೋಹಿಣಿ ಸಿಂಧೂರಿ ಆರೋಪಿಸಿದಂತೆ ಕೆರೆ ಒತ್ತುವರಿ ಪ್ರಕರಣದಲ್ಲಿ ಸಾ,ರಾ ಮಹೇಶೆ ಹೆಸರು ಕೇಳಿಬಂದಿದ್ದರಿಂದ ಅವರ ವಿರುದ್ಧ ಸ್ವಲ್ಪಮಟ್ಟಿಗೆ ಆಡಳಿತ ವಿರೋಧಿ ಧೋರಣೆ ಇದೆ.

ಐಎಎಸ್ ಅಧಿಕಾರಿಯೊಂದಿಗೆ ಬಹಿರಂಗ ವಾಗ್ದಾಳಿ ನಡೆಸಿದರು , ಅದಾದ ನಂತರ ನಡೆದ ಕೆಲವು ಘಟನೆಗಳು ಅವರಿಗೆ ಕೆಟ್ಟ ಹೆಸರನ್ನು ತಂದುಕೊಟ್ಟವು, ಆದರೂ ಪ್ರಕರಣದಲ್ಲಿ ಸಲ್ಲಿಸಿದ ವರದಿಯು ಅವರ ಪರವಾಗಿ ಹೋಗಿದೆ.

ಈ ನಡುವೆ ಸಿದ್ದರಾಮಯ್ಯ ಅವರ ಆಪ್ತರಾಗಿರುವ ಕಾಂಗ್ರೆಸ್ ಅಭ್ಯರ್ಥಿ ರವಿಶಂಕರ್ ಅವರು ಹಿಂದಿನ ಚುನಾವಣೆಯಂತೆಯೇ ಮಹೇಶ್ ಅವರಿಗೆ ಟಫ್ ಫೈಟ್ ನೀಡಲು ತಯಾರಿ ನಡೆಸಿದ್ದು, ತಮ್ಮ ನಡುವಿನ ಅಂತರವನ್ನು ಕೇವಲ 1,800 ಮತಗಳಿಗೆ ತಗ್ಗಿಸಿದ್ದಾರೆ.

ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಘಟಾನುಘಟಿ ನಾಯಕರು  ರವಿಶಂಕರ್ ಪರವಾಗಿ ಪ್ರಚಾರ ಮಾಡಲು ಕ್ಷೇತ್ರ ಮತ್ತು ಸುತ್ತಮುತ್ತ ಟೆಂಟ್ ಹಾಕುವ ನಿರೀಕ್ಷೆಯಿದೆ.  ಬಿಜೆಪಿ  ಅಭ್ಯರ್ಥಿ ವೆಂಕಟೇಶ ಹೊಸಹಳ್ಳಿ ಬೂತ್ ಮಟ್ಟದ ಕಾರ್ಯಕರ್ತರನ್ನು ತಲುಪಿ ಮತದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಕೆ.ಆರ್ ನಗರ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com