ಕರ್ನಾಟಕ ಚುನಾವಣೆ: ಎಎಪಿ 4ನೇ ಪಟ್ಟಿ ಪ್ರಕಟ; 43 ಅಭ್ಯರ್ಥಿಗಳಿಗೆ ಟಿಕೆಟ್

ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗಾಗಿ 45 ಅಭ್ಯರ್ಥಿಗಳನ್ನೊಳಗೊಂಡ ಎಎಪಿ ನಾಲ್ಕನೇ ಪಟ್ಟಿ ಮಂಗಳವಾರ ಬಿಡುಗಡೆಯಾಗಿದೆ. ಇದರೊಂದಿಗೆ ಇಲ್ಲಿಯವರೆಗೂ ಒಟ್ಟಾರೇ 168 ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿದೆ.
ಎಎಪಿ ಸಾಂದರ್ಭಿಕ ಚಿತ್ರ
ಎಎಪಿ ಸಾಂದರ್ಭಿಕ ಚಿತ್ರ

ಬೆಂಗಳೂರು: ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗಾಗಿ 45 ಅಭ್ಯರ್ಥಿಗಳನ್ನೊಳಗೊಂಡ ಎಎಪಿ ನಾಲ್ಕನೇ ಪಟ್ಟಿ ಮಂಗಳವಾರ ಬಿಡುಗಡೆಯಾಗಿದೆ. ಇದರೊಂದಿಗೆ ಇಲ್ಲಿಯವರೆಗೂ ಒಟ್ಟಾರೇ 168 ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿದೆ.

ಈ ಪಟ್ಟಿಯ ವಿವರ ಒದಗಿಸಿದ ಎಎಪಿ ಮಾಧ್ಯಮ ಮತ್ತು ಸಂವಹನ ಉಸ್ತುವಾರಿ ಬ್ರಿಜೇಶ್ ಕಾಳಪ್ಪ, 16 ರೈತರು, 13 ಮಹಿಳೆಯರು, 18 ವಕೀಲರು, 10 ವೈದ್ಯರು, 10 ಎಂಜಿನಿಯರ್, 10 ಡಾಕ್ಟರೇಟ್ ಅಭ್ಯರ್ಥಿಗಳು, 41 ಸ್ನಾತಕೋತ್ತರ ಪದವೀಧರರು, ಮತ್ತು 82 ಪದವೀಧರ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ ಎಂದರು.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಚ್ಚರಿ ಮೂಡಿಸಿ ಕರ್ನಾಟಕ ವಿಧಾನಸಭೆ ಪ್ರವೇಶಿಸುವ ನಿರೀಕ್ಷೆಯಲ್ಲಿದೆ ಎಎಪಿ. ಈ ಮಧ್ಯೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮಂಗಳವಾರದಿಂದ ಪಕ್ಷದ ಪರ ಪ್ರಚಾರ ನಡೆಸುತ್ತಿದ್ದಾರೆ. ಎರಡು ದಿನ ರಾಜ್ಯದಲ್ಲಿ ಅವರು ವಾಸ್ತವ್ಯ ಹೂಡಲಿದ್ದು, ಉತ್ತರ ಕರ್ನಾಟಕದಲ್ಲಿ ರೋಡ್ ಶೋ ನಡೆಸಲಿದ್ದಾರೆ.

ಏಪ್ರಿಲ್ 19ರಂದು ನಡೆಯುವ ರೈತರ ಸಮಾವೇಶದಲ್ಲೂ ಪಾಲ್ಗೊಳ್ಳಲಿದ್ದಾರೆ. ಎಎಪಿಯ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಕೂಡ ಬುಧವಾರ ಬೆಂಗಳೂರಿಗೆ ಬರುತ್ತಿದ್ದು, ಮೂರು ರೋಡ್ ಶೋಗಳಲ್ಲಿ ಭಾಗವಹಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com