ಇದೆಂಥಾ ಕಾರ್ಯತಂತ್ರ? ಹಾಸನದಿಂದ ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ MLA ಪ್ರೀತಂ ಗೌಡ ಪತ್ನಿ ನಾಮಪತ್ರ ಸಲ್ಲಿಕೆ

ಅಚ್ಚರಿಯ ರಾಜಕೀಯ ಬೆಳವಣಿಗೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರೀತಂ ಜೆ ಗೌಡ ಅವರ ಪತ್ನಿ ಕಾವ್ಯ ಅವರು ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಿದ ಕಾವ್ಯ
ನಾಮಪತ್ರ ಸಲ್ಲಿಸಿದ ಕಾವ್ಯ

ಹಾಸನ: ಅಚ್ಚರಿಯ ರಾಜಕೀಯ ಬೆಳವಣಿಗೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರೀತಂ ಜೆ ಗೌಡ ಅವರ ಪತ್ನಿ ಕಾವ್ಯ ಅವರು ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದ್ದಾರೆ. 

ಕಾವ್ಯ ಅವರ ಪತಿ ಹಾಗೂ ಹಾಸನ ಬಿಜೆಪಿ ಹಾಲಿ ಶಾಸಕ ಪ್ರೀತಂ ಜೆ ಗೌಡ ಅವರೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ. ಈಗಾಗಲೇ ಹಾಸನ ಕ್ಷೇತ್ರದಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ಪ್ರೀತಂ ಜೆ ಗೌಡ ಅವರು ನಿನ್ನೆ ಭರ್ಜರಿ ರೋಡ್ ಶೋ ಬಳಿಕ ನಾಮಪತ್ರ ಸಲ್ಲಿಸಿದ್ದರು. 

ಬಿಜೆಪಿಯಲ್ಲಿನ ದಿಢೀರ್ ಬೆಳವಣಿಗೆ ಪಕ್ಷದ ಕಾರ್ಯಕರ್ತರು, ಅಭ್ಯರ್ಥಿಗಳು ಹಾಗೂ ವಿರೋಧ ಪಕ್ಷಗಳ ಮುಖಂಡರು ಹುಬ್ಬೇರುವಂತೆ ಮಾಡಿದೆ. ಬಿಜೆಪಿ ಅಭ್ಯರ್ಥಿಯ ಪತ್ನಿ ನಾಮಪತ್ರ ಸಲ್ಲಿಸಿರುವುದು ಕೂಡ ಕ್ಷೇತ್ರದಲ್ಲಿ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ಇನ್ನು ಪ್ರೀತಂ ಜೆ ಗೌಡರ ತಂತ್ರಗಾರಿಕೆ ಬಗ್ಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಕೂಡ ಗೊಂದಲದಲ್ಲಿದ್ದಾರೆ.

ವಿಧಾನಸಭಾ ಚುನಾವಣೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪತಿ-ಪತ್ನಿ ಇಬ್ಬರೂ ಒಂದೇ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಟಿಕೆಟ್ ವಿಚಾರದಲ್ಲಿ ಭವಾನಿ, ರೇವಣ್ಣ ಮತ್ತು ಪ್ರಜ್ವಲ್ ರಾಜಿ ಮಾಡಿಕೊಂಡಿದ್ದರಿಂದ ಪ್ರೀತಂ ಕ್ಷೇತ್ರ ಗೆಲ್ಲಲು ರಣತಂತ್ರ ರೂಪಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭವಾನಿ ಅವರನ್ನು ಕಣಕ್ಕಿಳಿಸುತ್ತಾರೆ ಎಂದು ಬಿಜೆಪಿ ಶಾಸಕರು ನಂಬಿದ್ದರು. ಆದರೆ ಪಕ್ಷವು ಸಹಾನುಭೂತಿ ಹೊಂದಿರುವ ಮತ್ತು ಯಾವುದೇ ಅಸಂಬದ್ಧ ನಡವಳಿಕೆ ಇಲ್ಲದ ಸ್ವರೂಪ್‌ಗೆ ಪಕ್ಷದ ಟಿಕೆಟ್ ಘೋಷಿಸಿದ ನಂತರ ಪ್ರೀತಂ ಗೌಡ ಈ ತಂತ್ರವನ್ನು ರೂಪಿಸಿದ್ದಾರೆ. ಪ್ರೀತಂ ಜೆ ಗೌಡ ಅಥವಾ ಅವರ ಪತ್ನಿ ಹಾಸನದಲ್ಲಿ ಚುನಾವಣೆ ಎದುರಿಸುತ್ತಿರುವ ನಿರ್ಧಾರದತ್ತ ಎಲ್ಲರ ಚಿತ್ತ ಹರಿದಿದೆ.

ಈ ಮಧ್ಯೆ ಬಿಜೆಪಿ ಹೈಕಮಾಂಡ್ ಸೂಚನೆಯಂತೆ ಪ್ರೀತಂ ಗೌಡ ಅವರ ಪತ್ನಿ ಕಾವ್ಯಾ ಹಾಸನ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ ಎಂದು ಪ್ರೀತಂ ಗೌಡ ಆಪ್ತ ಮೂಲಗಳು ಕನ್ನಡಪ್ರಭ.ಕಾಮ್ ಗೆ ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com