92ನೇ ವಯಸ್ಸಿನಲ್ಲಿಯೂ ತಗ್ಗದ ಖದರ್; ಬಿರುಬಿಸಿಲಿಗೆ ಡೋಂಟ್ ಕೇರ್; ಕ್ಷೇತ್ರಾದ್ಯಂತ ಶಿವಶಂಕರಪ್ಪ ಟೂರ್! (ಸಂದರ್ಶನ)

1994ರಲ್ಲಿ ಆರಂಭವಾದ ಶಿವಶಂಕರಪ್ಪ ಅವರ ರಾಜಕೀಯ ಪಯಣಕ್ಕೆ ಬ್ರೇಕ್ ಬಿದ್ದಿಲ್ಲ. 2004 ರವರೆಗೆ ದಾವಣಗೆರೆ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು 2008 ರಲ್ಲಿ ಡಿಲಿಮಿಟೇಶನ್ ನಂತರ ದಾವಣಗೆರೆ ದಕ್ಷಿಣದಿಂದ ಆರನೇ ಬಾರಿಗೆ ಸ್ಪರ್ಧಿಸಿದ್ದಾರೆ.
ಶಾಮನೂರು ಶಿವಶಂಕರಪ್ಪ
ಶಾಮನೂರು ಶಿವಶಂಕರಪ್ಪ

ದಾವಣಗೆರೆ:  92 ನೇ ವಯಸ್ಸಿನಲ್ಲಿಯೂ ಶಾಸಕ, ಡಾ ಶಾಮನೂರು ಶಿವಶಂಕರಪ್ಪ ಅವರು 2023 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಹಿರಿಯ-ಸಕ್ರಿಯ ರಾಜಕಾರಣಿಯಾಗಿದ್ದಾರೆ. ಬಿಸಿಲಿಗೂ ಕೇರ್ ಮಾಡದ ಅವರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಾದ್ಯಂತ ಪ್ರಚಾರ ನಡೆಸುತ್ತಿದ್ದಾರೆ.

1994ರಲ್ಲಿ ಆರಂಭವಾದ ಶಿವಶಂಕರಪ್ಪ ಅವರ ರಾಜಕೀಯ ಪಯಣಕ್ಕೆ ಬ್ರೇಕ್ ಬಿದ್ದಿಲ್ಲ. 2004 ರವರೆಗೆ ದಾವಣಗೆರೆ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು 2008 ರಲ್ಲಿ ಡಿಲಿಮಿಟೇಶನ್ ನಂತರ ದಾವಣಗೆರೆ ದಕ್ಷಿಣದಿಂದ ಆರನೇ ಬಾರಿಗೆ ಸ್ಪರ್ಧಿಸಿದ್ದಾರೆ.

‘ನಿವೃತ್ತಿ’ ಎಂಬುದು ಈ ಚುನಾವಣೆಯ ಪ್ರಮುಖ ಪದವಾಗಿದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ, ಮಾಜಿ ಸಚಿವ ಎಸ್‌ಎ ರವೀಂದ್ರನಾಥ್‌ನಿಂದ ಹಾಲಾಡಿ ಶ್ರೀನಿವಾಸ ಶೆಟ್ಟಿ ಈ ಬಾರಿಯ ಚುನಾವಣೆಗೆ ನಿವೃತ್ತಿ ಘೋಷಿಸಿದರು. ಆದರೆ ಶಿವಶಂಕರಪ್ಪ ಮಾತ್ರ ಬಿಟ್ಟು ಕೊಡುವ ಲಕ್ಷಣ ಕಾಣುತ್ತಿಲ್ಲ.

ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಅಧ್ಯಕ್ಷರೂ ಆಗಿರುವ ಶಾಮನೂರು ಶಿವಶಂಕರಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ದೆ ನೀಡಿದ ವಿಶೇಷ ಸಂದರ್ಶನದಲ್ಲಿ ವಯಸ್ಸಿನ ಅಂಶ, ಮೀಸಲಾತಿ ಮತ್ತು ಚುನಾವಣೆ ಬಗ್ಗೆ ಮಾತನಾಡಿದ್ದಾರೆ.

ಮೊದಲ ಚುನಾವಣೆಯ ನಂತರ, ನೀವು ಚುನಾವಣಾ ರಾಜಕೀಯದಲ್ಲಿ ಬದಲಾವಣೆಗಳನ್ನು ಕಂಡಿದ್ದೀರಿ. 2023ರ ಚುನಾವಣೆಯನ್ನು ನೀವು ಹೇಗೆ ನೋಡುತ್ತೀರಿ?

ಚುನಾವಣಾ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪ್ರತಿ ಚುನಾವಣೆಯಲ್ಲಿ ಮತದಾರರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿದ್ದು, ಈ ವರ್ಷ ಬೇಸಿಗೆಯ ನಡುವೆಯೂ ಉತ್ತಮ ಮತದಾನದ ನಿರೀಕ್ಷೆಯಲ್ಲಿದ್ದೇವೆ. ಇದು ನಮ್ಮ ಪ್ರಜಾಪ್ರಭುತ್ವದ ಸೊಗಸು.

92ರ ಹರೆಯದಲ್ಲಿ ನೀವು ಚುನಾವಣೆಗೆ ಸ್ಪರ್ಧಿಸಲು ಏನನ್ನು ಬಯಸುತ್ತೀರಿ?

ನನ್ನ ಕುಟುಂಬದೊಂದಿಗೆ ಬಲವಾದ ಸಂಪರ್ಕವನ್ನು ಹೊಂದಿರುವ ಸಾರ್ವಜನಿಕರನ್ನು ನಾನು ನಿರಾಕರಿಸಲಾರೆ. ಅವರ ಪ್ರೀತಿ, ವಾತ್ಸಲ್ಯ ನನ್ನನ್ನು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡಿದೆ. ಅದಕ್ಕಿಂತ ಮುಖ್ಯವಾಗಿ, ನನ್ನ ಕುಟುಂಬವು ದಾವಣಗೆರೆಯ ಜನರಿಗಾಗಿ ನಿಸ್ವಾರ್ಥವಾಗಿ ಕೆಲಸ ಮಾಡುತ್ತದೆ,  ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ, ಆರೋಗ್ಯ ಸೇವೆ ಅಥವಾ ರಾಜ್ಯ ಮತ್ತು ಜಿಲ್ಲೆಯ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ  ನೆರವು ನೀಡಲಾಯಿತು, ಇದರಿಂದ ಜನರ ಜೊತೆ ನನ್ನ  ಬಾಂಧವ್ಯ ಮತ್ತಷ್ಟು ಗಟ್ಟಿಯಾಯಿತು.

2023 ರ ವಿಧಾನಸಭಾ ಚುನಾವಣೆಯು ಸಮಸ್ಯೆ-ಆಧಾರಿತವಾಗಿದೆಯೇ?

ಭ್ರಷ್ಟಾಚಾರ ಆರೋಪ, ಹಣದುಬ್ಬರ ಮತ್ತು ಆಡಳಿತ ವಿರೋಧಿ ಅಲೆ ಸರ್ಕಾರದ ವಿರುದ್ಧದ ಪ್ರಮುಖ ಸಮಸ್ಯೆಗಳಾಗಿವೆ. ಇದರೊಂದಿಗೆ ನಾವು 200 ಯೂನಿಟ್ ಉಚಿತ ವಿದ್ಯುತ್, ಬಿಪಿಎಲ್ ಕುಟುಂಬಗಳಿಗೆ 10 ಕೆಜಿ ಅಕ್ಕಿ, ಕುಟುಂಬದ ಮಹಿಳೆಯರಿಗೆ 2000 ರೂ., ಡಿಪ್ಲೊಮಾ ಮತ್ತು ಪದವೀಧರರಿಗೆ ನಿರುದ್ಯೋಗ ಭತ್ಯೆ ಮುಂತಾದ ನೀಡಿದ ಭರವಸೆಗಳು ಕಾಂಗ್ರೆಸ್‌ಗೆ ಸಹಾಯ ಮಾಡುತ್ತವೆ.

ಕಾಂಗ್ರೆಸ್‌ನ ನಿರೀಕ್ಷೆಗಳೇನು?
ರಾಜ್ಯಾದ್ಯಂತ ಕಾಂಗ್ರೆಸ್ ಪರ ಅಲೆಯಿದ್ದು, ಸಂಪೂರ್ಣ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ರಚಿಸಲಿದೆ.

ಸರ್ಕಾರ ಘೋಷಿಸಿರುವ ಮೀಸಲಾತಿ ಬಿಜೆಪಿಗೆ ನೆರವಾಗಲಿದೆಯೇ?
ರಾಜ್ಯ ಸರ್ಕಾರ ಘೋಷಿಸಿರುವ ಮೀಸಲಾತಿಗೆ ಸಾಂವಿಧಾನಿಕ ಮಾನ್ಯತೆ ಇಲ್ಲ, ಇದು ಕೇವಲ ಚುನಾವಣಾ ಗಿಮಿಕ್ ಆಗಿದೆ. ಎಸ್‌ಸಿ ಮತ್ತು ಎಸ್‌ಟಿಗಳಿಗೆ ಮೀಸಲಾತಿ ಶೇಕಡಾವಾರು ಹೆಚ್ಚಳ, 2ಸಿ ಮತ್ತು 2ಡಿ ವಿಭಾಗಗಳ ರಚನೆಯು ಚುನಾವಣೆಯ ಪೂರ್ವದಲ್ಲಿ ಮಾಡಿದಂತಹ ಕೆಲಸವಾದ್ದರಿಂದ ಆ ಸಮುದಾಯಗಳಿಗೆ ಪ್ರಯೋಜನವಾಗುವುದಿಲ್ಲ.

ಕ್ಷೇತ್ರಕ್ಕೆ ನಿತ್ಯ ಭೇಟಿ ನೀಡುತ್ತಿಲ್ಲ ಎಂಬ ದೂರು ಇದೆಯಲ್ಲ?

ತೊಂದರೆಯಿಲ್ಲದ ರೀತಿಯಲ್ಲಿ ಕೆಲಸ ಮಾಡಿರುವಾಗ, ಈ ದೂರು ಹೇಗೆ ಉದ್ಭವಿಸುತ್ತದೆ? ಇದಲ್ಲದೆ, ನಾನು ನಿಯಮಿತವಾಗಿ ಕ್ಷೇತ್ರಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸುತ್ತೇನೆ. ಇದರೊಂದಿಗೆ ಪ್ರಬಲ ತಳಮಟ್ಟದ ಕಾರ್ಯಕರ್ತರು ದಾವಣಗೆರೆ (ದಕ್ಷಿಣ) ಸಮಸ್ಯೆಗಳನ್ನು ಪರಿಹರಿಸಲು ನನಗೆ ಸಹಾಯ ಮಾಡುತ್ತಾರೆ. ಬಿಜೆಪಿ ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಿದೆ.

ದಾವಣಗೆರೆ ದಕ್ಷಿಣದಲ್ಲಿ ಏನಾದರೂ ಸಮಸ್ಯೆಗಳಿವೆಯೇ?
ಇದು ಹಳೆಯ ನಗರವಾಗಿರುವುದರಿಂದ ಕೆಲವು ಸಮಸ್ಯೆಗಳಿದ್ದವು, ಬಹುಪಾಲು ಪರಿಹಾರವಾಗಿದೆ. ರಸ್ತೆಗಳು ಕಿರಿದಾಗಿದ್ದು, ಅಗಲೀಕರಣ ಮಾಡಲು ಸಾಧ್ಯವಾಗುತ್ತಿಲ್ಲ. ಸೀಮಿತ ಅವಕಾಶದಲ್ಲಿ ನಾವು ಉತ್ತಮ ರಸ್ತೆಗಳನ್ನು ಹಾಕುತ್ತಿದ್ದೇವೆ.

ಚುನಾವಣೆಗೂ ಮೊದಲೇ ನೀವು ಮತ್ತು ನಿಮ್ಮ ಮಗ ಮತದಾರರಿಗೆ ಉಡುಗೊರೆಗಳನ್ನು ಹಂಚಿದ್ದೀರಿ ಎಂಬ ಆರೋಪವಿತ್ತಲ್ಲ?

ಇದು ನಮ್ಮ ಹೆಸರು ಕೆಡಿಸಲು ಬಿಜೆಪಿ ಮಾಡುತ್ತಿರುವ ಆಧಾರರಹಿತ ಆರೋಪ, ಆದರೆ ನಾವು ಹೇಗೆ ಕೆಲಸ ಮಾಡುತ್ತೇವೆ ಮತ್ತು ಸಮಾಜಕ್ಕೆ ನಾವು ಮಾಡುವ ಸೇವೆಯನ್ನು ತಿಳಿದಿರುವ ಜನರು ನಮಗೆ ಮತ ಹಾಕುತ್ತಾರೆ. ನಾವಿಬ್ಬರೂ ಉತ್ತಮ ಅಂತರದಿಂದ ಗೆಲ್ಲುವುದರಲ್ಲಿ ಸಂಶಯವಿಲ್ಲ.

ದಾವಣಗೆರೆ (ದಕ್ಷಿಣ)ದಿಂದ ಟಿಕೆಟ್‌ಗೆ ಬೇಡಿಕೆ ಇಟ್ಟಿರುವ ಅಲ್ಪಸಂಖ್ಯಾತ ಸಮುದಾಯದಿಂದ ಹಿನ್ನಡೆಯಾಗಿದೆಯೇ?
ಅಲ್ಪಸಂಖ್ಯಾತ ಮತದಾರರು ಗಣನೀಯ ಸಂಖ್ಯೆಯಲ್ಲಿದ್ದಾರೆ ಎಂದು ನಾನು ಒಪ್ಪುತ್ತೇನೆ, ಆದರೆ ಅವರು ಚುನಾವಣೆಯಲ್ಲಿ ಗೆಲ್ಲಲು ಅಷ್ಟು ಸಾಕಾಗುವುದಿಲ್ಲ. ಅವರಿಗೆ ಸ್ಪರ್ಧಿಸಲು ಇದು ಸಮಯ ಸರಿಯಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com