ಬಂಟ್ವಾಳ: 9ನೇ ಬಾರಿ ರಮಾನಾಥ ರೈ ಅದೃಷ್ಟ ಪರೀಕ್ಷೆ; ಹಾಲಿ ಶಾಸಕರಿಗೆ ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆ!

ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಬಿ ರಮಾನಾಥ್ ರೈ ಅವರು ಬಂಟ್ವಾಳ ಕ್ಷೇತ್ರದಿಂದ ಸತತ ಒಂಬತ್ತನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ರಮಾನಾಥ ರೈ ಮತ್ತು ರಾಜೇಶ್ ನಾಯ್ಕ್
ರಮಾನಾಥ ರೈ ಮತ್ತು ರಾಜೇಶ್ ನಾಯ್ಕ್

ಮಂಗಳೂರು: ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಬಿ ರಮಾನಾಥ್ ರೈ ಅವರು ಬಂಟ್ವಾಳ ಕ್ಷೇತ್ರದಿಂದ ಸತತ ಒಂಬತ್ತನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದಾರೆ.

1985 ರಿಂದ ಇದುವರೆಗೂ ಅವರು ಆರು ಬಾರಿ ಗೆದ್ದಿದ್ದಾರೆ ಮತ್ತು ಎರಡು ಬಾರಿ ಸೋತಿದ್ದಾರೆ. ಈ ಬಾರಿ 71 ವರ್ಷ ವಯಸ್ಸಿನ  ರೈ ತಮ್ಮ ಕೊನೆಯ ಚುನಾವಣೆ ಎಂದು ಘೋಷಿಸುವ ಮೂಲಕ ಮತದಾರರಲ್ಲಿ ಭಾವನಾತ್ಮಕ ಮನವಿ ಮಾಡಿಕೊಂಡಿದ್ದು, ಸ್ಮರಣೀಯ ಬೀಳ್ಕೊಡುಗೆ ನೀಡುವಂತೆ ಮನವಿ ಮಾಡಿದ್ದಾರೆ.

ರೈ ಮಗಳು ಚರಿಷ್ಮಾ ರೈ ಕೂಡ ಮೊದಲ ಬಾರಿಗೆ ತನ್ನ ತಂದೆಗಾಗಿ ಸಕ್ರಿಯವಾಗಿ ಪ್ರಚಾರ ಮಾಡುತ್ತಿದ್ದಾರೆ. ಮತ್ತೊಂದೆಡೆ,  ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡುವ ವಿವಿಧ ಸಮೀಕ್ಷೆಗಳನ್ನು ಉಲ್ಲೇಖಿಸಿ, ಕಾಂಗ್ರೆಸ್ ನಾಯಕರು ಮತ್ತು ರೈ ಅವರ ಬೆಂಬಲಿಗರು ಮತದಾರರನ್ನು ಓಲೈಸಲು ಪ್ರಯತ್ನಿಸುತ್ತಿದ್ದಾರೆ.

ಆದರೆ ಪ್ರಚಾರದಲ್ಲಿ ಒಂದು ಹೆಜ್ಜೆ ಮುಂದಿರುವ ಹಾಲಿ ಬಿಜೆಪಿ ಶಾಸಕ ರಾಜೇಶ್ ನಾಯ್ಕ್ ಅವರಿಂದ ಹಿರಿಯ ನಾಯಕ ರಮಾನಾಥ್ ರೈ ಅವರಿಗೆ ಕಠಿಣ ಸವಾಲು ಎದುರಾಗಿದೆ. ಕಳೆದ ಐದು ವರ್ಷಗಳಲ್ಲಿ ವೆಂಟೆಡ್ ಡ್ಯಾಮ್‌ಗಳ ನಿರ್ಮಾಣ, ಕುಡಿಯುವ ನೀರಿನ ಯೋಜನೆಗಳು, ದೇವಾಲಯಗಳು ಮತ್ತು ದೈವಸ್ಥಾನಗಳಿಗೆ ಸುಗಮ ರಸ್ತೆಗಳು, ಪೂಜಾ ಸ್ಥಳಗಳಿಗೆ ಬಿಡುಗಡೆಯಾದ ಅನುದಾನ ಮುಂತಾದ ಅಭಿವೃದ್ಧಿ ಕಾಮಗಾರಿಗಳು ರಾಜೇಶ್ ನಾಯ್ಕ್ ಅವರಿಗೆ ವರವಾಗುವ ಸಾಧ್ಯತೆಯಿದೆ.

ಎಲ್ಲಾ ಧರ್ಮದ ಜನರೊಂದಿಗೆ ಸೌಹಾರ್ದ ಸಂಬಂಧವನ್ನು ಹೊಂದಿರುವ  ನಾಯಕ್  ಅಧಿಕಾರಾವಧಿಯಲ್ಲಿ ತಮ್ಮ ಭಾಗದಲ್ಲಿ ಯಾವುದೇ ಕೋಮು ಗಲಭೆ ನಡೆದಿಲ್ಲ ಎಂದು ಮತದಾರರಿಗೆ ಮನದಟ್ಟು ಮಾಡುತ್ತಿದ್ದಾರೆ. 2018 ರಲ್ಲಿ ರೈ ಅವರು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತಂದರೂ, ಕೆಲವು ಶಾಲೆಗಳಿಗೆ ಮಧ್ಯಾಹ್ನದ ಊಟದ ಹಣವನ್ನು ನಿಲ್ಲಿಸುವ ವಿವಾದ ಭುಗಿಲೆದ್ದ ಕಾರಣ ಮತದಾರರ ಕೋಪಕ್ಕೆ ಕಾರಣವಾಯಿತು.

ರೈ ಮತ್ತು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ನಡುವೆ ಈ ವಿಚಾರ ವಾಗ್ವಾದಕ್ಕೆ ಕಾರಣವಾಗಿತ್ತು. ಇದು ಬಿಜೆಪಿಗೆ ಸಹಾಯ ಮಾಡಿತು, ಅಂತಿಮವಾಗಿ ರೈ 16,000 ಕ್ಕೂ ಹೆಚ್ಚು ಮತಗಳಿಂದ ಸೋತರು.

ಈಗ ಮೂರನೇ ಬಾರಿಗೆ ಸ್ಪರ್ಧಿಸಿರುವ ನಾಯಕ್ ಅವರು ತಮ್ಮ ಮತಬ್ಯಾಂಕ್  ಮತ್ತಷ್ಟು ಕ್ರೋಢೀಕರಿಸಿದ್ದಾರೆ ಎಂದು ಹೇಳಲಾಗಿದ್ದು,  ರಿಮೋಟ್ ಸ್ಥಳಗಳಲ್ಲಿರುವ ದೈವಸ್ಥಾನಗಳಿಗೆ ಮತ್ತು ಮುಸ್ಲಿಂ ಮತ್ತು ಕ್ರಿಶ್ಚಿಯನ್ ಪ್ರಭಾವದ ಮೂಲಕ ತಮ್ಮ ಮತಬ್ಯಾಂಕ್ ಅನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ಕೆಲ ತಿಂಗಳ ಹಿಂದೆ ಮುಸ್ಲಿಂ ಪ್ರಾಬಲ್ಯವಿರುವ ಸಜಿಪ ಮುನ್ನೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಯತ್ನಿಸಿದ್ದರು.

ಬಂಟ್ವಾಳದಲ್ಲಿ 50,000 ಪ್ರಬಲ ಮುಸ್ಲಿಂ ಮತಗಳನ್ನು ಪಡೆಯಲು ಎಸ್‌ಡಿಪಿಐ ಕೂಡ ಈ ಬಾರಿ ಕಣದಲ್ಲಿದೆ. ಈ ಪ್ರದೇಶದಲ್ಲಿ ಭುಗಿಲೆದ್ದ ಹಿಜಾಬ್  ಯುವ ಮುಸ್ಲಿಂ ಮತದಾರರನ್ನು ಎಸ್‌ಡಿಪಿಐ ಕಡೆಗೆ ಆಕರ್ಷಿಸಬಹುದು ಹೀಗಾಗಿ ರೈ ಅವರ ಆತಂಕ ಹೆಚ್ಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com