ಕರ್ನಾಟಕ ಚುನಾವಣೆ: ಕಾಂಗ್ರೆಸ್‌ಗೆ ಸಿಪಿಐ ಬೆಂಬಲ ಘೋಷಣೆ

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 215 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಲು ಕಮ್ಯುನಿಸ್ಟ್ ಪಕ್ಷ  ನಿರ್ಧರಿಸಿದೆ. ಸಿಪಿಐ ಈಗಾಗಲೇ ಚುನಾವಣೆಗೆ ಏಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ,
ಸಿಪಿಐ ಸಾಂದರ್ಭಿಕ ಚಿತ್ರ
ಸಿಪಿಐ ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 215 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಲು ಕಮ್ಯುನಿಸ್ಟ್ ಪಕ್ಷ  ನಿರ್ಧರಿಸಿದೆ. ಸಿಪಿಐ ಈಗಾಗಲೇ ಚುನಾವಣೆಗೆ ಏಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ, ಆದಾಗ್ಯೂ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಕಾಪಾಡುವ ಹಿತದೃಷ್ಟಿಯಿಂದ ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ತೀರ್ಮಾನಿಸಲಾಗಿದೆ ಎಂದು ಪಕ್ಷ ಹೇಳಿಕೆಯಲ್ಲಿ ತಿಳಿಸಿದೆ. 

ಬಿಜೆಪಿ ರಾಜ್ಯ ಸರ್ಕಾರ ವ್ಯಾಪಕ ಬೆಲೆ ಏರಿಕೆ, ನಿರುದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳ ಕೊರತೆಯಂತಹ ನೈಜ ಸಮಸ್ಯೆಗಳನ್ನು ನಿರ್ಲಕ್ಷಿಸಿ, ಕೋಮು ಸೌಹಾರ್ದತೆಯನ್ನು ಹಾಳು ಮಾಡಲು ಮಾತ್ರ ಆಸಕ್ತಿ ಹೊಂದಿರುವ ಭ್ರಷ್ಟ ಸರ್ಕಾರ ಎಂಬುದು ಸಾಬೀತಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಎಂದು ಪಕ್ಷ ಹೇಳಿದೆ.

ಐಟಿ ಮತ್ತು ಇಡಿ ಇಲಾಖೆಗಳ ಮೂಲಕ ಹಣ ಮತ್ತು ಬಲವನ್ನು ಬಿಜೆಪಿ ಮತ್ತೊಮ್ಮೆ ಕುದುರೆ ವ್ಯಾಪಾರಕ್ಕೆ ನಿಯೋಜಿಸುವ ಪರಿಸ್ಥಿತಿಯಲ್ಲಿ ಅತಂತ್ರ ವಿಧಾನಸಭಾ ಸಾಧ್ಯತೆಯನ್ನು ತಪ್ಪಿಸುವುದು ಸಹ ಮುಖ್ಯವಾಗಿದೆ ಎಂದು ಸಿಪಿಐ ಹೇಳಿದೆ.

ಮೂಡಿಗೆರೆ, ಆಳಂದ, ಜೇವರ್ಗಿ, ಕೂಡ್ಲಗಿ, ಕೆಜಿಎಫ್, ಸಿಂ ಮತ್ತು ಮಡಿಕೇರಿ ಸೇರಿದಂತೆ ಸಿಪಿಐ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮೇಲುಕೋಟೆಯಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಗೆ ಮತ್ತು ಬಾಗೇಪಲ್ಲಿಯಲ್ಲಿ ಸಿಪಿಐಎಂ ಅಭ್ಯರ್ಥಿಗೆ ಸಿಪಿಐ ಬೆಂಬಲ ನೀಡಿದ್ದು, ಉಳಿದ 215 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಲಿದೆ ಎಂದು ಸಿಪಿಐ ಪ್ರಕಟಣೆ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com