ಹನೂರು ಕ್ಷೇತ್ರ: ಸುಡು ಬಿಸಿಲು, ಕಾಡು ಪ್ರಾಣಿಗಳ ಸಂಚಾರ; ಈ ಗ್ರಾಮಗಳಿಗೆ ಕಾಲಿಡಲು ರಾಜಕೀಯ ನಾಯಕರಿಗೆ ಅಂಜಿಕೆ, ಅಭಿವೃದ್ಧಿಯೂ ಮರೀಚಿಕೆ!

ರಾಜ್ಯದ ಉದ್ದಗಲಕ್ಕೂ ಪಕ್ಷಗಳ ನಾಯಕರು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದರೆ ಚಾಮರಾಜನಗರ ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರದ ಗ್ರಾಮಗಳಲ್ಲಿ ಮಾತ್ರ ಚುನಾವಣಾ ಪ್ರಚಾರ, ಚಟುವಟಿಕೆಗಳ ಸದ್ದು ಗದ್ದಲವಿಲ್ಲ.
ಹನೂರು ಗ್ರಾಮಸ್ಥರು
ಹನೂರು ಗ್ರಾಮಸ್ಥರು
Updated on

ಮೈಸೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ. ರಾಜಕೀಯ ನಾಯಕರ ಚುನಾವಣಾ ಪ್ರಚಾರ ಕಾವು ಏಪ್ರಿಲ್ ತಿಂಗಳ ಬಿಸಿಲಿನಂತೆ ಜೋರಾಗುತ್ತಿದೆ. ರಾಜ್ಯದ ಉದ್ದಗಲಕ್ಕೂ ಪಕ್ಷಗಳ ನಾಯಕರು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದರೆ ಚಾಮರಾಜನಗರ ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರದ ಗ್ರಾಮಗಳಲ್ಲಿ ಮಾತ್ರ ಚುನಾವಣಾ ಪ್ರಚಾರ, ಚಟುವಟಿಕೆಗಳ ಸದ್ದು ಗದ್ದಲವಿಲ್ಲ.

ಅರಣ್ಯದಂಚಿನಲ್ಲಿರುವ ಈ ಗ್ರಾಮಗಳಲ್ಲಿ ಸಂಜೆಯಾಗುತ್ತಲೇ ಕಾಡುಪ್ರಾಣಿಗಳ ಭೀತಿ. ವಿಪರೀತ ಬಿಸಿಲು, ಹೀಗಾಗಿ ರಾಜಕೀಯ ನಾಯಕರು, ಅಭ್ಯರ್ಥಿಗಳು ಈ ಗ್ರಾಮಗಳೊಳಗೆ ಹೋಗುವುದು ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ. ಸಾಯಂಕಾಲ ಹೊತ್ತಿಗೆ ಆನೆಗಳು, ಚಿರತೆ ಮತ್ತು ಕಾಡು ಹಂದಿಗಳ ಓಡಾಟ ರಾಜಕೀಯ ನಾಯಕರಿಗೆ ಗ್ರಾಮದೊಳಗೆ ಕಾಲಿಡಲು ಭಯ ಹುಟ್ಟಿಸುತ್ತವೆ. ಚಾಮರಾಜನಗರ ಜಿಲ್ಲೆಯ ತಾಲೂಕು ಕೇಂದ್ರವಾಗಿರುವ ಹನೂರು ಬೆಟ್ಟಗಳಿಂದ ಆವೃತವಾಗಿದೆ.

ದಟ್ಟ ಅರಣ್ಯದ ಅಂಚಿನಲ್ಲಿ ಇಲ್ಲಿ 200 ಕ್ಕೂ ಹೆಚ್ಚು ಹಳ್ಳಿಗಳು ಇವೆ. ರಾಮಾಪುರ, ಲೊಕ್ಕನಹಳ್ಳಿ, ಬೈಲೂರು, ಒಡೆಯರಪಾಳ್ಯ, ಮಾರ್ಟಹಳ್ಳಿ, ಅಜ್ಜಿಪುರ, ಬಂಡಳ್ಳಿ, ಮೀ ಯಂ ಮತ್ತು ಪೂಣಚ ದಟ್ಟಕಾಡಿಗೆ ಸಮೀಪವಿರುವ ಇಲ್ಲಿನ ಕೆಲವು ಗ್ರಾಮಗಳಾಗಿವೆ.

ಹಲವು ವರ್ಷಗಳ ಹಿಂದೆ, ಕುಖ್ಯಾತ ಅರಣ್ಯ ದರೋಡೆಕೋರ ವೀರಪ್ಪನ್‌ನ ನೆಚ್ಚಿನ ಬೇಟೆಯ ಪ್ರದೇಶವಾಗಿದ್ದರಿಂದ ಪ್ರಮುಖ ರಾಜಕೀಯ ನಾಯಕರು ಈ ಪ್ರದೇಶಕ್ಕೆ ಭೇಟಿ ನೀಡಲು ಹೆದರುತ್ತಿದ್ದರು. ದುಷ್ಕರ್ಮಿಗಳಿಂದ ಅಪಹರಣದ ಬೆದರಿಕೆಯು ಅಭ್ಯರ್ಥಿಗಳು ಮತ್ತು ಪ್ರಮುಖ ನಾಯಕರನ್ನು ಆಗಾಗ್ಗೆ ಭೇಟಿ ನೀಡುತ್ತಿದ್ದ ಈ ಗ್ರಾಮಗಳಿಂದ ದೂರವಿಟ್ಟಿತ್ತು.

ಸಹಜವಾಗಿ ಈ ಕ್ಷೇತ್ರ ಮೂಲಭೂತ ಸೌಕರ್ಯಗಳಿಂದ ಹಿಂದುಳಿದಿದ್ದು, ಹೆಚ್ಚಿನ ಅಭಿವೃದ್ಧಿ ಕಂಡಿಲ್ಲ. ಕೆಟ್ಟ ರಸ್ತೆಗಳು ಮತ್ತು ಸಂಪರ್ಕವು ಪ್ರಮುಖ ಸಮಸ್ಯೆಗಳು ಕೂಡ ರಾಜಕೀಯ ನಾಯಕರ ಪ್ರಚಾರ ಕಾರ್ಯವನ್ನು ತಡೆಯುತ್ತಿದೆ. ಈ ರಸ್ತೆಗಳಲ್ಲಿ ನಮ್ಮ ವಾಹನಗಳನ್ನು ಓಡಿಸುವುದರಿಂದ ರಿಪೇರಿಗೆ 2,000-4000 ರೂಪಾಯಿಗಳಾಗುತ್ತದೆ. ಈ ವರ್ಷ ಪೂರ್ಣ ಪ್ರಮಾಣದಲ್ಲಿ ಪ್ರಚಾರ ನಡೆಯುತ್ತಿಲ್ಲ, ಮುಖಂಡರು ಕೂಡ ಮತದಾರರಿಗೆ ಆಶ್ವಾಸನೆ ನೀಡುತ್ತಿಲ್ಲ ಎಂದು ಮಲೆ ಮಹದೇಶ್ವರ ಬೆಟ್ಟದ ಸಮೀಪದ ಓಡಕೆಹಳ್ಳಿ ಗ್ರಾಮದ ಆಟೋ ಚಾಲಕ ಮುತ್ತು ಹೇಳುತ್ತಾರೆ. 

ಮತ್ತೋರ್ವ ಮತದಾರ ಚೆಲುವ, ಕಾಡು ಒಣಗಿ ಹೋಗಿದ್ದು, ತಾಪಮಾನ ಹೆಚ್ಚಿದ್ದು, ಜನರು ಮನೆಯೊಳಗೆ ಇರುವಂತೆ ಆಗಿದೆ. ಸಂಜೆ ವೇಳೆ ಆನೆ, ಚಿರತೆ, ಕಾಡುಹಂದಿಗಳು ಪದೇ ಪದೇ ಕಾಣಿಸಿಕೊಳ್ಳುವುದರಿಂದ ರಾಜಕೀಯ ಮುಖಂಡರು ಪೂರ್ಣ ಪ್ರಮಾಣದ ಪ್ರಚಾರದಿಂದ ದೂರ ಸರಿದಿದ್ದಾರೆ ಎಂದರು.

ಮಾರ್ಟಹಳ್ಳಿಯ ಸ್ಥಳೀಯ ಮುಖಂಡ ಮಣಿ, ತಾಪಮಾನ ಹೆಚ್ಚುತ್ತಿರುವ ಕಾರಣ ಹಲವು ಮುಖಂಡರು ಈ ಗ್ರಾಮಗಳಿಗೆ ಭೇಟಿ ನೀಡದ ಕಾರಣ ಪಕ್ಷದ ಕಾರ್ಯಕರ್ತರು ಮತ್ತು ಪಂಚಾಯಿತಿ ಸದಸ್ಯರೊಂದಿಗೆ ದೂರವಾಣಿಯಲ್ಲಿ ಸಂಪರ್ಕದಲ್ಲಿದ್ದು ಪ್ರಚಾರದ ಬಗ್ಗೆ ಕಾಳಜಿ ವಹಿಸುವಂತೆ ಮನವಿ ಮಾಡಿದ್ದಾರೆ. ಈ ಪ್ರದೇಶದಲ್ಲಿ ಮಳೆಯಾದರೆ, ಕಾಡು ಪ್ರಾಣಿಗಳು ಅರಣ್ಯದಿಂದ ಹೊರಬರುವುದನ್ನು ತಡೆಯುವ ಮೂಲಕ ಪ್ರಚಾರ ಕಾರ್ಯವು ಹೆಚ್ಚಾಗುತ್ತದೆ ಎಂದು ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com