ಪುಲಕೇಶಿನಗರ: 'ಅಣ್ಣ ಜೀತೇಗಾ, ಯೇ ಎಂಎಲ್ಎ ಇಧರ್ ಸೆ ನಹಿ ಹಟೇಗಾ'; 'ಅಖಂಡ' ಕೋಟೆ ಕೆಡವಲು ತಂತ್ರ!

ಆಗಸ್ಟ್ 2020 ರ ಡಿಜೆ ಹಳ್ಳಿ ಗಲಭೆಯ ನಂತರ ಪ್ರಬಲ ಅಲ್ಪಸಂಖ್ಯಾತ ಸಮುದಾಯವು ಅವರೊಂದಿಗೆ ಅಸಮಾಧಾನಗೊಂಡಿದೆ ಎಂಬ ಕಾರಣಕ್ಕಾಗಿ ಕಾಂಗ್ರೆಸ್ ಅವರಿಗೆ ಟಿಕೆಟ್ ನಿರಾಕರಿಸಿದ ನಂತರ ಅವರು ಮೀಸಲು ಕ್ಷೇತ್ರದಿಂದ ಬಿಎಸ್ಪಿ ಟಿಕೆಟ್‌ನಲ್ಲಿ ಸ್ಪರ್ಧಿಸಲು ನಿರ್ಧರಿಸಿದರು.
ಅಖಂಡ ಶ್ರೀನಿವಾಸಮೂರ್ತಿ
ಅಖಂಡ ಶ್ರೀನಿವಾಸಮೂರ್ತಿ

ಬೆಂಗಳೂರು: ಪುಲಕೇಶಿನಗರದ ಮಾಜಿ ಕಾಂಗ್ರೆಸ್ ಶಾಸಕ ಆರ್.ಅಖಂಡ ಶ್ರೀನಿವಾಸ್ ಮೂರ್ತಿ ಅವರು ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಟಿಕೆಟ್‌ನಲ್ಲಿ ಕ್ಷೇತ್ರವನ್ನು ಗೆಲ್ಲುವ ಮೂಲಕ ಕಾಂಗ್ರೆಸ್‌ನ ಉನ್ನತ ನಾಯಕರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಡಿದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ಬಯಸಿದ್ದಾರೆ.

ಆಗಸ್ಟ್ 2020 ರ ಡಿಜೆ ಹಳ್ಳಿ ಗಲಭೆಯ ನಂತರ ಪ್ರಬಲ ಅಲ್ಪಸಂಖ್ಯಾತ ಸಮುದಾಯವು ಅವರೊಂದಿಗೆ ಅಸಮಾಧಾನಗೊಂಡಿದೆ ಎಂಬ ಕಾರಣಕ್ಕಾಗಿ ಕಾಂಗ್ರೆಸ್ ಅವರಿಗೆ ಟಿಕೆಟ್ ನಿರಾಕರಿಸಿದ ನಂತರ ಅವರು ಮೀಸಲು ಕ್ಷೇತ್ರದಿಂದ ಬಿಎಸ್ಪಿ ಟಿಕೆಟ್‌ನಲ್ಲಿ ಸ್ಪರ್ಧಿಸಲು ನಿರ್ಧರಿಸಿದರು.

ಪುಲಕೇಶಿನಗರ ಕ್ಷೇತ್ರವು 2,36,000 ಮತದಾರರನ್ನು ಹೊಂದಿದೆ, ಅದರಲ್ಲಿ ಸುಮಾರು 85,000 ಮುಸ್ಲಿಮರು, ಸುಮಾರು 65,000 ಎಸ್ ಸಿ, ಎಸ್ ಟಿ ಸಮುದಾಯದವರಿದ್ದಾರೆ, ಇತರರು ನಂತರದ ಸ್ಥಾನದಲ್ಲಿದ್ದಾರೆ.

ಆಗಸ್ಟ್ 11, 2020 ರಂದು ಪೂರ್ವ ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಅಖಂಡ ಅವರ ಸೋದರಳಿಯನ ಧರ್ಮನಿಂದೆಯ ಪೋಸ್ಟ್ ನಂತರ ದೊಡ್ಡ ಪ್ರಮಾಣದ ಹಿಂಸಾಚಾರ ಭುಗಿಲೆದ್ದಿತು. ಇದರಲ್ಲಿ ಸುಮಾರು 3,000 ಜನರ ಗುಂಪು ಡಿಜೆ ಹಳ್ಳಿ ಪೊಲೀಸ್ ಠಾಣೆ, ಸಾರ್ವಜನಿಕ ಮತ್ತು ಖಾಸಗಿಯನ್ನು ಧ್ವಂಸಗೊಳಿಸಿತ್ತು. ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಲಾಗಿತ್ತು.

ಬೆಂಕಿ ಹಚ್ಚಿದವರು ನನ್ನ ಕ್ಷೇತ್ರದವರಲ್ಲ, ಅವರನ್ನು ಕಾಂಗ್ರೆಸ್ ಪಕ್ಷದ ನನ್ನ ಪ್ರತಿಸ್ಪರ್ಧಿಗಳು ಹೊರಗಿನಿಂದ ಕರೆತಂದಿದ್ದಾರೆ, ಅವರನ್ನೂ ಜೈಲಿಗೆ ಹಾಕಿದ್ದಾರೆ, ನನ್ನ ಬೆಂಬಲಕ್ಕೆ ಬರುವ ಬದಲು ಕಾಂಗ್ರೆಸ್‌ನ ಕೆಲವು ನಾಯಕರು ನನಗೆ ಮೋಸ ಮತ್ತು ಅವಮಾನ ಮಾಡಿದ್ದಾರೆ, ಅವರಿಗೆ ನಾವು ಕಲಿಸುತ್ತೇವೆ ಎಂದು ಅಖಂಡ ಗುಡುಗಿದ್ದರು. ನನ್ನ ಕ್ಷೇತ್ರದ ಜನರು ನನ್ನೊಂದಿಗಿದ್ದಾರೆ. ನಾನು ಶೇಕಡಾ 100 ರಷ್ಟು ಗೆಲ್ಲುತ್ತೇನೆ,  ನನ್ನ ಬೆಂಬಲಿಗರು "ಅಣ್ಣ ಜೀತೇಗಾ (ಸಹೋದರ ಗೆಲ್ಲುತ್ತಾನೆ) ಎಂಬ ಘೋಷಣೆ ಕೂಗುತ್ತಿದ್ದಾರೆ ಎಂದು ಅಖಂಡ ಶ್ರೀನಿವಾಸಮೂರ್ತಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಹೇಳಿದರು.

‘ನನ್ನ ಜನರಿಗೆ ಉತ್ತಮ ಶಾಲೆಗಳು, ಆರೋಗ್ಯ ಸೌಲಭ್ಯಗಳು ಮತ್ತು ಉತ್ತಮ ರಸ್ತೆಗಳನ್ನು ಒದಗಿಸುತ್ತೇನೆ’ ಎಂದು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅಖಂಡ ಶ್ರೀನಿವಾಸಮೂರ್ತಿ ಹೇಳಿದ್ದಾರೆ. ಬಿಆರ್ ಅಂಬೇಡ್ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಿಂದ ಡಿಜೆ ಹಳ್ಳಿ ಪೊಲೀಸ್ ಠಾಣೆಯವರೆಗೆ ಸುಮಾರು 1.5 ಕಿಲೋಮೀಟರ್ ಉದ್ದದ ಟ್ಯಾನರಿ ರಸ್ತೆಯು ಕಸದಿಂದ ತುಂಬಿದೆ ಮತ್ತು ಬೆಂಗಳೂರಿನ ಏಕೈಕ ಚಾಮದಾ ಮಂಡಿ (ಟ್ಯಾನರಿ) ಬಳಿ ಅಸಹನೀಯ ದುರ್ವಾಸನೆ ಬರುತ್ತದೆ.

ರಾಜ್ಯದ ಅತಿ ದೊಡ್ಡ ಯುವ ದಲಿತ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಅಖಂಡ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಪ್ರಸನ್ನಕುಮಾರ್ ವಿರುದ್ಧ 81,626 ಮತಗಳ ಅಂತರದಿಂದ ಜಯಗಳಿಸಿದ್ದರು. ಪಕ್ಷದ ಮೂರನೇ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದ ಕಾರಣ ಅವರು ಈ ಹಿಂದೆ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಮತ್ತು ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದ್ದರು.  ಆದರೆ ಅಂತಿಮವಾಗಿ ಬಿಎಸ್‌ಪಿಯಿಂದ ಸ್ಪರ್ಧಿಸಿದ್ದಾರೆ. ಬಿಎಸ್ ಪಿ ರಾಷ್ಟ್ರೀಯ ಪಕ್ಷವಾಗಿದ್ದು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಹೆಚ್ಚಾಗಿ ಒಳಗೊಂಡಿದ್ದು, ನನ್ನ ಕ್ಷೇತ್ರದ ಜನರ ಸಲಹೆಯ ಮೇರೆಗೆ ನಾನು ಸೇರಲು ನಿರ್ಧರಿಸಿದೆ ಎಂದು ಶಾಸಕರು ಹೇಳಿದ್ದಾರೆ

ಕಾಂಗ್ರೆಸ್‌ನಿಂದ ಎಸಿ ಶ್ರೀನಿವಾಸ್, ಬಿಜೆಪಿ ಅಭ್ಯರ್ಥಿಯಾಗಿ ಮುರಳಿ, ಜೆಡಿಎಸ್‌ನಿಂದ ಅನುರಾಧ ಮತ್ತು ಆಮ್ ಆದ್ಮಿ ಪಕ್ಷದಿಂದ (ಎಎಪಿ) ಸುರೇಶ್ ರಾಥೋಡ್ ಸ್ಪರ್ಧಿಸಿದ್ದಾರೆ.

"ನಾವು ಅಣ್ಣಾ ಅವರಿಗೆ ಮತ ನೀಡಿ ಗೆಲ್ಲಿಸುತ್ತೇವೆ. ನಾವು ಪಕ್ಷವನ್ನು ನೋಡುವುದಿಲ್ಲ, ನಾವು ಅಣ್ಣನನ್ನು ನೋಡುತ್ತೇವೆ. ಅವರು ಶಾಸಕರಲ್ಲ, ನಮ್ಮ ಸಹೋದರ. ಬಡವರಿಗಾಗಿ ಅವರ ಬಾಗಿಲು ಯಾವಾಗಲೂ ತೆರೆದಿರುತ್ತದೆ" ಎಂದು ಬೆಂಬಲಿಗ ಮೆಹಮೂದ್ ಷರೀಫ್ ತಿಳಿಸಿದ್ದಾರೆ.

ಅಣ್ಣಾ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ, ಇದು ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಕೆಲವು ಶತ್ರುಗಳನ್ನು ಗಳಿಸಿದೆ. ಅವರು ಹಿಂಸಾಚಾರವನ್ನು ಪ್ರಚೋದಿಸಲು ಹೊರಗಿನವರನ್ನು ಕರೆದಿದ್ದಾರೆ. ಡಿಜೆ ಹಳ್ಳಿ ಗಲಭೆ ಅವರಿಗೆ ಕೆಟ್ಟ ಹೆಸರು ತರಲು ಯೋಜಿಸಲಾಗಿದೆ" ಎಂದು ಬಿಎಸ್ಪಿಯ ಸೈಯದ್ ಆಸಿಫ್ ಬಾಬಾ ಹೇಳಿದರು.

"ಅವರು ಕ್ಷೇತ್ರದಲ್ಲಿ ಸುಮಾರು 500 ಜನರಿಗೆ ಹಕ್ಕು ಪತ್ರಗಳನ್ನು (ಟೈಟಲ್ ಡೀಡ್) ಪಡೆಯಲು ಸಹಾಯ ಮಾಡಿದರು. ಯೇ ಎಂಎಲ್ಎ ಇಧರ್ ಸೆ ನಹಿ ಹತೇಗಾ (ಈ ಶಾಸಕ ಇಲ್ಲಿಂದ ಕದಲುವುದಿಲ್ಲ)," ಎಂದು ಶಂಪುರದ ತಾಹಾ ಖಾನ್ ಭರವಸೆ ನೀಡಿದರು.

ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಪಡಿತರ ಕಿಟ್‌ಗಳು, ಆಮ್ಲಜನಕ ಹಾಸಿಗೆಗಳು ಮತ್ತು ಲಸಿಕೆಗಳೊಂದಿಗೆ ಅಖಂಡ ತನ್ನ ಜನರನ್ನು ಹೇಗೆ ತಲುಪಿದರು ಎಂಬುದರ ಕುರಿತು ಲಕ್ಷ್ಮಿ ಮತ್ತು ಫೌಜಿಯಾ ಬೇಗಂ ವಿವರಣೆ ನೀಡಿದ್ದಾರೆ.

ವಿಧಾನಸಭಾ ಕ್ಷೇತ್ರವು ಕಾವಲಬೈರಸಂದ್ರ, ಎಸ್‌ಕೆ ಗಾರ್ಡನ್, ಡಿಜೆ ಹಳ್ಳಿ, ಮುನೀಶ್ವರನಗರ, ಕುಶಾಲನಗರ, ಸಗಾಯಪುರ ಮತ್ತು ಪುಲಕೇಶಿನಗರ ವಾರ್ಡ್‌ಗಳನ್ನು ಒಳಗೊಂಡಿದೆ. ಇದು ಕಳಪೆ ಸಾಮಾಜಿಕ-ಆರ್ಥಿಕ ಸೂಚಕಗಳನ್ನು ಹೊಂದಿರುವ ಅತ್ಯಂತ ಸೂಕ್ಷ್ಮ ಕ್ಷೇತ್ರವೆಂದು ತಿಳಿದುಬಂದಿದೆ.

ಪುಲಕೇಶಿನಗರ ವಿಧಾನಸಭಾ ಚುನಾವಣಾ ಫಲಿತಾಂಶ 2018

ಆರ್ ಅಖಂಡ ಶ್ರೀನಿವಾಸ್ ಮೂರ್ತಿ -ಕಾಂಗ್ರೆಸ್ – 97,574

ಬಿ ಪ್ರಸನ್ನ ಕುಮಾರ್ – ಜೆಡಿಎಸ್ – 15,948

ಸುಶೀಲಾ ದೇವರಾಜ್ – ಬಿಜೆಪಿ – 9479

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com