ಅಥಣಿಯಲ್ಲಿ ಸವದಿ v/s ಕುಮಟಳ್ಳಿ: ವಿಜಯದ ಮಾಲೆ ಯಾರ ಕೊರಳಿಗೆ?

ಜಿಲ್ಲೆಯ ಅಥಣಿ ವಿಧಾನಸಭಾ ಕ್ಷೇತ್ರ ಈ ಬಾರಿ ಕುತೂಹಲಕಾರಿ ಸ್ಪರ್ಧೆಗೆ ಸಾಕ್ಷಿಯಾಗಲಿದೆ. ಇತ್ತೀಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಲಕ್ಷ್ಮಣ ಸವದಿ ಮತ್ತು ಬಿಜೆಪಿಯ ಹಾಲಿ ಶಾಸಕ ಮಹೇಶ ಕುಮಟಳ್ಳಿ ನಡುವೆ ತೀವ್ರ ಪೈಪೋಟಿ ಎದ್ದಿದೆ. 
ಮಹೇಶ್ ಕುಮಟಳ್ಳಿ-ಲಕ್ಷ್ಮಣ ಸವದಿ(ಸಂಗ್ರಹ ಚಿತ್ರ)
ಮಹೇಶ್ ಕುಮಟಳ್ಳಿ-ಲಕ್ಷ್ಮಣ ಸವದಿ(ಸಂಗ್ರಹ ಚಿತ್ರ)

ಬೆಳಗಾವಿ: ಜಿಲ್ಲೆಯ ಅಥಣಿ ವಿಧಾನಸಭಾ ಕ್ಷೇತ್ರ ಈ ಬಾರಿ ಕುತೂಹಲಕಾರಿ ಸ್ಪರ್ಧೆಗೆ ಸಾಕ್ಷಿಯಾಗಲಿದೆ. ಇತ್ತೀಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಲಕ್ಷ್ಮಣ ಸವದಿ ಮತ್ತು ಬಿಜೆಪಿಯ ಹಾಲಿ ಶಾಸಕ ಮಹೇಶ ಕುಮಟಳ್ಳಿ ನಡುವೆ ತೀವ್ರ ಪೈಪೋಟಿ ಎದ್ದಿದೆ. 

ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಕುಮಟಳ್ಳಿ ಪರ ಪ್ರಚಾರ ನಡೆಸುತ್ತಿದ್ದು, ಇದೇ ಕ್ಷೇತ್ರದಿಂದ ಮೂರು ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿರುವ ಲಕ್ಷ್ಮಣ ಸವದಿ ಕ್ಷೇತ್ರವನ್ನು ಮರಳಿ ಪಡೆಯಲು ಹಾತೊರೆಯುತ್ತಿದ್ದಾರೆ. 

ಸವದಿ ಅವರಿಗೆ ಟಿಕೆಟ್ ನಿರಾಕರಿಸಿದ ನಂತರ ಬಿಜೆಪಿಯಿಂದ ಕಾಂಗ್ರೆಸ್‌ಗೆ ಅವರು ಬಂದದ್ದು ಕೇಸರಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಸೋಲಿಸಲು ಪಣ ತೊಟ್ಟಿದ್ದಾರೆ. ಕುಮಠಳ್ಳಿ ಗೆಲುವಿಗೆ ಜಾರಕಿಹೊಳಿ ಕಳೆದ ಕೆಲವು ತಿಂಗಳಿನಿಂದ ಇಲ್ಲಿಯೇ ಬೀಡು ಬಿಟ್ಟಿದ್ದಾರೆ. ಅಥಣಿಯಲ್ಲಿ ಜನಪ್ರಿಯ ನಾಯಕರಾಗಿರುವ ಕುಮಟಳ್ಳಿ ಅವರು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಕಡೆಯಿಂದ ಬೆಂಬಲವನ್ನು ಹೊಂದಿದ್ದಾರೆ.

2013ರಲ್ಲಿ ಲಕ್ಷ್ಮಣ ಸವದಿ ಅವರು ಮಹೇಶ್ ಕುಮಟಳ್ಳಿಯವರನ್ನು 24 ಸಾವಿರ ಮತಗಳಿಂದ ಸೋಲಿಸಿದ್ದರು, ಆದರೆ 2018 ರ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಕುಮಠಳ್ಳಿ ಎದುರು ಸೋತರು. ಗೆದ್ದ ನಂತರ ಕುಮಟಳ್ಳಿ ಬಿಜೆಪಿಗೆ ಪಕ್ಷಾಂತರ ಮಾಡಿ ಬಿಜೆಪಿ ಅಧಿಕಾರಕ್ಕೆ ತರಲು ಎಚ್‌ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿದ 17 ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ತಂಡವನ್ನು ಸೇರಿಕೊಂಡರು. ಮುಂದಿನ ವರ್ಷದ ಉಪಚುನಾವಣೆಯಲ್ಲಿ ಅವರು ಗೆದ್ದರು.

ಕ್ಷೇತ್ರದ 2.20 ಲಕ್ಷ ಮತದಾರರಲ್ಲಿ ಸುಮಾರು ಒಂದು ಲಕ್ಷ ಲಿಂಗಾಯತರು, 40 ಸಾವಿರ ಮರಾಠರಿದ್ದಾರೆ. 30 ಸಾವಿರ SCಗಳು ಮತ್ತು 28 ಸಾವಿರ ಮುಸಲ್ಮಾನರಿದ್ದಾರೆ. ಲಿಂಗಾಯತರು ಪ್ರಮುಖ ಮತದಾರರಾಗಿರುವುದರಿಂದ ಅಥಣಿಯಲ್ಲಿ ಕಣದಲ್ಲಿರುವ ಬಹುತೇಕ ಅಭ್ಯರ್ಥಿಗಳು ಹಲವು ದಶಕಗಳಿಂದ ಲಿಂಗಾಯತರೇ ಆಗಿದ್ದಾರೆ. ಸವದಿ ಮತ್ತು ಕುಮಟಳ್ಳಿ ಇವರಿಬ್ಬರೂ ಕೂಡ ಈ ಪ್ರಬಲ ಸಮುದಾಯದಿಂದ ಬಂದವರಾಗಿದ್ದು, ಅಂತಿಮವಾಗಿ ವಿಜಯದ ಮಾಲೆ ಯಾರ ಕೊರಳಿಗೆ ಬೀಳುತ್ತದೆ ನೋಡಬೇಕು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com