ಕರ್ನಾಟಕದಿಂದ ಹೋಗಿರುವ ಹಣದಿಂದ ತೆಲಂಗಾಣದಲ್ಲಿ ಕಾಂಗ್ರೆಸ್​ ಗೆದ್ದಿದೆ: ಕುಮಾರಸ್ವಾಮಿ ಟಾಂಗ್!

ತೆಲಂಗಾಣ ರಾಜ್ಯ ನಾಯಕರು ಮಾಡಿದ ಪ್ರಚಾರದಿಂದ ಗೆದ್ದಿಲ್ಲ, ಬದಲಾಗಿ ಇಲ್ಲಿಂದ (ಕರ್ನಾಟಕ) ರವಾನೆಯಾದ ಹಣದಿಂದ ಕಾಂಗ್ರೆಸ್ ಗೆದ್ದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ

ಬೆಂಗಳೂರು: ತೆಲಂಗಾಣ ರಾಜ್ಯ ನಾಯಕರು ಮಾಡಿದ ಪ್ರಚಾರದಿಂದ ಗೆದ್ದಿಲ್ಲ, ಬದಲಾಗಿ ಇಲ್ಲಿಂದ (ಕರ್ನಾಟಕ) ರವಾನೆಯಾದ ಹಣದಿಂದ ಕಾಂಗ್ರೆಸ್ ಗೆದ್ದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ತೆಲಂಗಾಣ ವಿಧಾನಸಭೆ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್​ಗೆ ಸ್ಪಷ್ಟ ಬಹುಮತ ಕನ್ಫರ್ಮ್ ಆಗುತ್ತಿದೆ. ಈ ಬೆನ್ನಲ್ಲೇ, ಮಾತನಾಡಿರುವ ಕುಮಾರಸ್ವಾಮಿ, 2 ರಾಜ್ಯದಲ್ಲಿ ಕಾಂಗ್ರೆಸ್, 2 ರಾಜ್ಯದಲ್ಲಿ ಬಿಜೆಪಿ ಎಂದು ಏಕ್ಸಿಟ್ ಪೋಲ್ ಹೇಳಿತ್ತು. ತೆಲಂಗಾಣದಲ್ಲಿ ಕಾಂಗ್ರೆಸ್​ಗೆ ಶಕ್ತಿ ಇಲ್ಲವೇ ಇಲ್ಲ ಎಂದರು.

ಇದೇ ವೇಳೆ ತೆಲಂಗಾಣ ರಾಜ್ಯದ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ಕರ್ನಾಟಕದ ಕಾಂಗ್ರೆಸ್ ನಾಯಕರು ಭಾಗಿಯಾದ ವಿಚಾರವನ್ನು ಪ್ರಸ್ತಾಪಿಸಿ.. ರಾಜ್ಯದ ನಾಯಕರು ಮತ್ತು ಅಲ್ಲಿನ ನಾಯಕರು ಪ್ರಚಾರ ಮಾಡಿರೋದ್ರಿಂದ ಅವರು ಗೆದ್ದಿಲ್ಲ. ಬದಲಾಗಿ ಇಲ್ಲಿಂದ ರವಾನೆಯಾದ ಹಣದಿಂದ ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದು ಹೊಸ ಬಾಂಬ್ ಹಾಕಿದ್ದಾರೆ.

ತೆಲಂಗಾಣದಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಳ್ಳಲು ನಾನಾ ಕಾರಣಗಳಿವೆ. ಅದು ಅಲ್ಲಿಯ ಕಾಂಗ್ರೆಸ್ ಶಕ್ತಿಯಲ್ಲ. ಬಹುಶಃ ಕಾಂಗ್ರೆಸ್ ಮೇಲೆ ಬರೋದಕ್ಕೆ ಯಾವೆಲ್ಲ ಬೆಳವಣಿಗೆಗಳು ಆದವು ಅನ್ನೋದು ಗೊತ್ತಿದೆ. ಐದಕ್ಕೆ ಐದು ರಾಜ್ಯಗಳನ್ನ ಆವರಿಸಿಕೊಂಡು ಬಿಡ್ತೀವಿ ಅನ್ನೊ ಕಾಂಗ್ರೆಸ್ ನಾಯಕರ ಮಾತಿಗೆ ಜನ ತೀರ್ಮಾನ ಮಾಡಿದ್ದಾರೆ ಎಂದರು.

ರಾಜ್ಯದ ನಾಯಕರ ಪ್ರಚಾರದಿಂದ ತೆಲಂಗಾಣದಲ್ಲಿ ಗೆದ್ದಿದ್ದಲ್ಲ. ಇಲ್ಲಿಂದ ರವಾನೆಯಾದ ಆರ್ಥಿಲ ಚೀಲಗಳು ಕಾರಣ ಎಂದ ಹೆಚ್​ಡಿ ಕುಮಾರಸ್ವಾಮಿ, ಇವರ ಸಮಾಜಸೇವೆ, ಅಭಿವೃದ್ಧಿಗೆ ಪೂರಕವಾದ ಜನ ಸೇವೆ ನೋಡಿ ಜನ ತೆಲಂಗಾಣದಲ್ಲಿ ಜನ ತೀರ್ಮಾನ ಮಾಡಿದ್ದಲ್ಲ ಎಂದು ಕಾಂಗ್ರೆಸ್ ಗೆಲುವಿನ ಕಾರಣ ಬಿಚ್ಚಿಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com