ತೆಲಂಗಾಣ ಗೆಲುವು: ಸಿಎಂ ಹುದ್ದೆ ಕನಸು ಕಾಣುತ್ತಿರುವ ಡಿ ಕೆ ಶಿವಕುಮಾರ್ ಗೆ ಹೆಚ್ಚಿದ 'ಕೈ' ಬಲ

ಕರ್ನಾಟಕ ಮತ್ತು ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಸತತ ಗೆಲುವು ಸಾಧಿಸಿ, ಎರಡೂ ರಾಜ್ಯಗಳಲ್ಲಿ ಪಕ್ಷದ ಗೆಲುವಿಗೆ ಪ್ರಮುಖ ಕಾರಣಕರ್ತರಾದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಭವಿಷ್ಯದಲ್ಲಿ ಕರ್ನಾಟಕದಲ್ಲಿ ಪಕ್ಷದಲ್ಲಿ ಉನ್ನತ ಹುದ್ದೆ ವಹಿಸಲು ತಮ್ಮ ಶಕ್ತಿ, ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನಬಹುದು. 
ತೆಲಂಗಾಣ ಚುನಾವಣಾ ಫಲಿತಾಂಶ ನಂತರ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಸಭೆ
ತೆಲಂಗಾಣ ಚುನಾವಣಾ ಫಲಿತಾಂಶ ನಂತರ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಸಭೆ
Updated on

ಬೆಂಗಳೂರು: ಕರ್ನಾಟಕ ಮತ್ತು ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಸತತ ಗೆಲುವು ಸಾಧಿಸಿ, ಎರಡೂ ರಾಜ್ಯಗಳಲ್ಲಿ ಪಕ್ಷದ ಗೆಲುವಿಗೆ ಪ್ರಮುಖ ಕಾರಣಕರ್ತರಾದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಭವಿಷ್ಯದಲ್ಲಿ ಕರ್ನಾಟಕದಲ್ಲಿ ಪಕ್ಷದಲ್ಲಿ ಉನ್ನತ ಹುದ್ದೆ ವಹಿಸಲು ತಮ್ಮ ಶಕ್ತಿ, ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನಬಹುದು. 

ತೆಲಂಗಾಣದಲ್ಲಿ ಚುನಾವಣಾ ಪ್ರಚಾರದಿಂದ ಹಿಡಿದು, ಸಭೆಗಳಿಂದ ತೊಡಗಿಸಿ ಫಲಿತಾಂಶ ಬಂದ ನಂತರ ಕಾಂಗ್ರೆಸ್ ಶಾಸಕರನ್ನು ಕುದುರೆ ವ್ಯಾಪಾರದಿಂದ ದೂರವಿಡುವವರೆಗೆ ಡಿ ಕೆ ಶಿವಕುಮಾರ್ ಸುಲಭವಾಗಿ ಕಾಂಗ್ರೆಸ್ ನಲ್ಲಿ ಟ್ರಬಲ್‌ಶೂಟರ್ ಪಾತ್ರವನ್ನು ವಹಿಸಿಕೊಂಡರು. ಟಿಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿ ಮತ್ತು ಪ್ರಮುಖ ದಲಿತ ನಾಯಕ ಪ್ರತಿಪಕ್ಷದ ನಾಯಕ ಭಟ್ಟಿ ವಿಕ್ರಮಾರ್ಕ ಮಲ್ಲು ಸೇರಿದಂತೆ ತೆಲಂಗಾಣ ನಾಯಕರ ನಡುವಿನ ಭಿನ್ನಾಭಿಪ್ರಾಯವನ್ನು ಅವರು ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಶಮನ ಮಾಡಲು ತಳಮಟ್ಟದಿಂದ ಡಿ ಕೆ ಶಿವಕುಮಾರ್ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. 

ಹೈದರಾಬಾದ್-ಕರ್ನಾಟಕ ಪ್ರದೇಶದ ದಲಿತ ನಾಯಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ತೆಲಂಗಾಣದಲ್ಲಿ ದಲಿತ ನಾಯಕ ಅಪಾರ ಬೆಂಬಲ ಹೊಂದಿದ್ದು, ಶಿವಕುಮಾರ್ ಅವರಿಗೆ ಸಾಥ್ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯಂತೆ ತೆಲಂಗಾಣದಲ್ಲಿ ಖರ್ಗೆಯವರ 'ಮಾಲಾ' ಸಮುದಾಯವು ಕಾಂಗ್ರೆಸ್ ನ ಬೆನ್ನಿಗೆ ನಿಂತಿದೆ.

ಈ ಎಲ್ಲಾ ಅಂಶಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಗಿಸಿಕೊಂಡಿರುವ ಡಿ ಕೆ ಶಿವಕುಮಾರ್ ಅವರು ಪಕ್ಷವನ್ನು ಒಗ್ಗೂಡಿಸಲು ಸಮತೋಲನ ಸಾಧಿಸಿ ಅದನ್ನು ಚುನಾವಣೆಯಲ್ಲಿ ಗೆಲ್ಲುವ ಅಸ್ತ್ರವಾಗಿ ಮಾಡಿಕೊಂಡರು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಆಂಧ್ರಪ್ರದೇಶದ ಮಾಜಿ ಸಿಎಂ ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅವರ ಪುತ್ರಿ ವೈಎಸ್ ಶರ್ಮಿಳಾ ಅವರ ವೈಎಸ್ಆರ್ ತೆಲಂಗಾಣ ಪಕ್ಷವನ್ನು ಸ್ಪರ್ಧೆಯಿಂದ ಹೊರಗಿಡುವಂತೆ ಮನವೊಲಿಸುವಲ್ಲಿ ಅವರು ಯಶಸ್ವಿಯಾದರು. ಇಬ್ಬರೂ ಹಲವಾರು ಬಾರಿ ಚುನಾವಣೆಗೆ ಮುನ್ನ ಭೇಟಿಯಾದರು ಮತ್ತು ಶರ್ಮಿಳಾ ಅವರು ತಮ್ಮ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಲು ಸಹ ಸಿದ್ಧರಾಗಿದ್ದರು, ಇದಕ್ಕೆ ಹಿರಿಯ ನಾಯಕಿ ಸೋನಿಯಾ ಗಾಂಧಿ ಸಹ ಒಪ್ಪಿಗೆಯನ್ನು ನೀಡಿದ್ದರು. 2024ರ ಏಪ್ರಿಲ್‌/ಮೇ ತಿಂಗಳಲ್ಲಿ ನಡೆಯಲಿರುವ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯವರೆಗೆ ಈ ನಿರ್ಧಾರವನ್ನು ಮಾತ್ರ ತಡೆಹಿಡಿಯಲಾಗಿದೆ. 

ಮೂಲಗಳ ಪ್ರಕಾರ, ಆಂಧ್ರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಶರ್ಮಿಳಾ ಅವರನ್ನು ಸಿಎಂ ಅಭ್ಯರ್ಥಿಯಾಗಿ ಬಿಂಬಿಸುವ ಸಾಧ್ಯತೆಯಿದೆ, ಅಲ್ಲಿ ಅವರು ತಮ್ಮ ಸಹೋದರ ಮತ್ತು ಪ್ರಸ್ತುತ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಜೊತೆ ಮುಖಾಮುಖಿಯಾಗಲಿದ್ದಾರೆ. ಕರ್ನಾಟಕದಲ್ಲಿ ಮುಂದಿನ ನಾಲ್ಕೈದು ತಿಂಗಳಲ್ಲಿ ಲೋಕಸಭೆ ಚುನಾವಣೆಯ ಜೊತೆಗೆ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಗೆಲುವಿಗೆ ಮತ್ತೊಮ್ಮೆ ಡಿ ಕೆ ಶಿವಕುಮಾರ್ ಅವರೇ ಸಾರಥ್ಯ ವಹಿಸುವ ಸಾಧ್ಯತೆಯಿದೆ. 

ಡಿ ಕೆ ಶಿವಕುಮಾರ್ ಅವರ ಕರ್ನಾಟಕ ಸಿಎಂ ಆಗುವ ಕನಸಿಗೆ ಮತ್ತಷ್ಟು ಪುಷ್ಠಿ ಸಿಗುವ ಸಾಧ್ಯತೆಯಿದೆ. ಅವರು ಮತ್ತು ಈಗ ಎರಡನೇ ಬಾರಿ ಸಿಎಂ ಆಗಿರುವ ಹಾಲಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವೆ 'ಅಧಿಕಾರ ಹಂಚಿಕೆ ರಾಜಿ ಒಪ್ಪಂದ'ವಾಗಿದೆ ಎಂಬ ವದಂತಿಗಳ ಮಧ್ಯೆ ಶಿವಕುಮಾರ್ ಅವರ ಕೈ ಮೇಲಾಗುವ ಸಾಧ್ಯತೆಯಿದೆ. 

ಆದರೆ ಮೂಲಗಳ ಪ್ರಕಾರ ಸಿದ್ದರಾಮಯ್ಯ ಅವರಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೇಳಿದರೆ ಗೃಹ ಸಚಿವ ಡಾ ಜಿ ಪರಮೇಶ್ವರ ಅವರಂತಹ ದಲಿತ ನಾಯಕರನ್ನು ಅವರು ಶಿಫಾರಸು ಮಾಡುವ ಸಾಧ್ಯತೆಯಿದೆ. ಇವರಿಬ್ಬರು ಇತರ ಹಿರಿಯ ದಲಿತ ಮುಖಂಡರೊಂದಿಗೆ ಔತಣಕೂಟ ನಡೆಸಿದ್ದು ಈಗಾಗಲೇ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com