ಆರ್‌ಎಸ್‌ಎಸ್ ಸಮಾನತೆ, ಏಕತೆ ಪರವಾಗಿ ನಿಂತಿದೆ: ಗೂಳಿಹಟ್ಟಿ ಆರೋಪ ತಳ್ಳಿಹಾಕಿದ ಶೋಭಾ ಕರಂದ್ಲಾಜೆ

ದೇಶದ ಎಲ್ಲ ವರ್ಗದವರಲ್ಲಿ ಸಮಾನತೆ ಮತ್ತು ಏಕತೆಯನ್ನು ಖಚಿತಪಡಿಸಿಕೊಳ್ಳವುದು ಆರ್‌ಎಸ್‌ಎಸ್‌ನ ಉದ್ದೇಶವಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಶನಿವಾರ...
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ

ಬೆಂಗಳೂರು: ದೇಶದ ಎಲ್ಲ ವರ್ಗದವರಲ್ಲಿ ಸಮಾನತೆ ಮತ್ತು ಏಕತೆಯನ್ನು ಖಚಿತಪಡಿಸಿಕೊಳ್ಳವುದು ಆರ್‌ಎಸ್‌ಎಸ್‌ನ ಉದ್ದೇಶವಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಶನಿವಾರ ಹೇಳಿದ್ದಾರೆ.

ತಾವು ದಲಿತ ಎಂಬ ಕಾರಣಕ್ಕೆ ಆರ್ ಎಸ್ಎಸ್ ಹೆಡಗೇವಾರ್‌ ವಸ್ತುಸಂಗ್ರಹಾಲಯಕ್ಕೆ ಪ್ರವೇಶ ನಿರಾಕರಿಸಿತು ಎಂದು ಆರೋಪಿಸಿದ್ದ ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಡಿ ಶೇಖರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವೆ, ಎಲ್ಲಾ ವರ್ಗಗಳ ನಡುವೆ ಸಮಾನತೆ ಮತ್ತು ಏಕತೆಯನ್ನು ಖಚಿತಪಡಿಸಿಕೊಳ್ಳುವುದು ಆರ್‌ಎಸ್‌ಎಸ್‌ನ ಉದ್ದೇಶವಾಗಿದೆ. ಈ ನಂಬಿಕೆಯಿಂದ ಮಾತ್ರ ಭಾರತ ಪ್ರಗತಿ ಹೊಂದಲು ಸಾಧ್ಯ ಎಂದು ಆರೆಸ್ಸೆಸ್ ನಂಬಿದೆ. ಗೂಳಿಹಟ್ಟಿಯವರು ಆರ್‌ಎಸ್‌ಎಸ್ ಅನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಅವರು ಸಂಘಕ್ಕೆ ಬರಲಿ ಎಂದು ಹೇಳಿದರು.

ಗೂಳಿಹಟ್ಟಿ ಅವರು ಆರ್​ಎಸ್​ಎಸ್​ಗೆ ಯಾವಾಗ ಬಂದಿದ್ದರು? ಅವರು ಬಿಜೆಪಿಯ ಸದಸ್ಯರಾಗಿದ್ದರು, ಮಂತ್ರಿಯಾಗಿದ್ದರು. ಆದರೆ ಆರ್​ಎಸ್​ಎಸ್ ಗೆ ಬಂದಿಲ್ಲ. ಆರ್​ಎಸ್​ಎಸ್ ಶಾಖೆಗೆ ಹೋದವರು ಈ ರೀತಿ ಮಾತನಾಡಲು ಸಾಧ್ಯವಿಲ್ಲ. ಎಲ್ಲ ವರ್ಗದವರು ಒಟ್ಟಾಗಿ ಇರಬೇಕು ಅನ್ನೋದು ಸಂಘದ ಆಶಯವಾಗಿದೆ. ಭಾರತದ ಅಭ್ಯುದಯಕ್ಕೆ ಇದುವೇ ಮಾರ್ಗ ಎಂದು RSS ನಂಬಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com