15ನೇ ವಿಧಾನಸಭೆಯ ಕೊನೆಯ ಅಧಿವೇಶ: ಫೋಟೋ ಸೆಷನ್ ಸಂಬಂಧ ಅಧಿವೇಶನದಲ್ಲಿ ಬಿಸಿಬಿಸಿ ಚರ್ಚೆ!

ಕರ್ನಾಟಕ ವಿಧಾನಸಭೆಯ 15ನೇ ಅವಧಿ ಮುಗಿಯುತ್ತಿದ್ದಂತೆ ಮಂಗಳವಾರ ವಿಧಾನಸೌಧದ ಎದುರು ಎಲ್ಲ ಶಾಸಕರ ಗ್ರೂಪ್ ಫೋಟೋ ತೆಗೆಸಿಕೊಳ್ಳುವ ‘ಬಿಸಿ’ ಚರ್ಚೆಗೆ ಸದನ ಸಾಕ್ಷಿಯಾಯಿತು.
ರಾಜ್ಯ ವಿಧಾನಸಭೆ ಅಧಿವೇಶನ
ರಾಜ್ಯ ವಿಧಾನಸಭೆ ಅಧಿವೇಶನ
Updated on

ಬೆಂಗಳೂರು: ಕರ್ನಾಟಕ ವಿಧಾನಸಭೆಯ 15ನೇ ಅವಧಿ ಮುಗಿಯುತ್ತಿದ್ದಂತೆ ಮಂಗಳವಾರ ವಿಧಾನಸೌಧದ ಎದುರು ಎಲ್ಲ ಶಾಸಕರ ಗ್ರೂಪ್ ಫೋಟೋ ತೆಗೆಸಿಕೊಳ್ಳುವ ‘ಬಿಸಿ’ ಚರ್ಚೆಗೆ ಸದನ ಸಾಕ್ಷಿಯಾಯಿತು. ಫೆ.24ರಂದು ನಡೆಯುತ್ತಿರುವ ಅಧಿವೇಶನ ಮುಕ್ತಾಯಗೊಳ್ಳಲಿದ್ದು, ಫೆ.17ರಂದು ಬೆಳಗ್ಗೆ 10.15ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸಲಿದ್ದಾರೆ.

ಮಂಗಳವಾರ ನಡೆದ ವ್ಯವಹಾರ ಸಲಹಾ ಸಮಿತಿಯಲ್ಲಿ (ಬಿಎಸಿ) ತೆಗೆದುಕೊಂಡ ನಿರ್ಧಾರವನ್ನು ಪ್ರಕಟಿಸಿದ ಕಾಗೇರಿ, ಫೆಬ್ರವರಿ 24 ರಂದು ವಿಧಾನಮಂಡಲದ ಅಧಿವೇಶನವನ್ನು ಮುಕ್ತಾಯಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಎಲ್ಲಾ ಶಾಸಕರು ಫೆಬ್ರವರಿ 21 ರಂದು ಗ್ರೂಪ್ ಫೋಟೋಗೆ ಹಾಜರಾಗುವಂತೆ ಒತ್ತಾಯಿಸಿದರು.

ಇದು ಈ ಅವಧಿಯ ಕೊನೆಯ ಸೆಷನ್ ಮತ್ತು ಈ ಫೋಟೋ ನಮ್ಮ ನೆನಪಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ನಿಮ್ಮ ಕ್ಷೇತ್ರದಲ್ಲಿ ಯಾವುದೇ ಕಾರ್ಯಕ್ರಮವಿದ್ದರೆ ಅಥವಾ ಯಾವುದೇ ಅಪಾಯಿಂಟ್‌ಮೆಂಟ್ ಇದ್ದರೆ ಅದನ್ನು ಮುಂದೂಡಿ ಎಂದು ಹೇಳಿದರು. ಆದರೆ ಕೆಲವು ಶಾಸಕರು ಪೂರ್ವ ನಿಗದಿತ ಕಾರ್ಯಕ್ರಮಗಳಿರುವುದರಿಂದ ಅವರು ಹಾಜರಾಗಲು ಸಾಧ್ಯವಿಲ್ಲ ಎಂದು ಹೇಳಿದರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಜರಿರಬೇಕು ಎಂದು ಖುದ್ದು ಕಾಗೇರಿ ಒತ್ತಾಯಿಸಿದಾಗ, ಫೆ.20ರಂದು ಬಜೆಟ್ ಕುರಿತು ಮಾತನಾಡಿ ತೆರಳುವುದಾಗಿ ಹೇಳಿದರು. ಫೆ.20ಕ್ಕೆ ಫೋಟೋ ಸೆಷನ್ ಮುಂದೂಡಲು ಕಾಗೇರಿ ಮತ್ತಿತರರು ನಿರ್ಧರಿಸಿದ್ದು, ಸಮಿತಿ ಸಭೆಯಂತೆ ಬುಧವಾರದವರೆಗೆ ರಾಜ್ಯಪಾಲರ ಭಾಷಣದ ಮೇಲೆ ಶಾಸಕರಿಗೆ ಮಾತನಾಡಲು ಅವಕಾಶವಿದ್ದು, ಗುರುವಾರ ಬೊಮ್ಮಾಯಿ ಸದನಕ್ಕೆ ಉತ್ತರ ನೀಡಲಿದ್ದಾರೆ ಎಂದು ಕಾಗೇರಿ ತಿಳಿಸಿದರು.

ಬಜೆಟ್ ಮಂಡನೆಯಾದ ನಂತರ ಫೆ.20, 21, 22ರಂದು ಬಜೆಟ್ ಮೇಲಿನ ಚರ್ಚೆ ನಡೆಯಲಿದೆ. ಫೆ.23ರಂದು ಪ್ರಶ್ನೋತ್ತರ ಅವಧಿ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಲಿದ್ದಾರೆ. ಬಜೆಟ್​ಗೆ ಅಂಗೀಕಾರ ಪಡೆಯುವ ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ನಿಗದಿಯಾಗಿರುವಂತೆ ಫೆ.24 ಅಧಿವೇಶನದ ಕೊನೆಯ ದಿನ'' ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com