ಅಲ್ಪ ಸಂಖ್ಯಾತ ಸ್ಪೀಕರ್, ದಲಿತ ಉಪ ಸಭಾಪತಿ ವಿರುದ್ಧ ಬಿಜೆಪಿಗರಿಂದ ಗೂಂಡಾ ವರ್ತನೆ: ಡಿಕೆ ಶಿವಕುಮಾರ್

ಬಿಜೆಪಿ ಪ್ರತಿಭಟನೆ ವಿರುದ್ಧ ತೀವ್ರ ಕಿಡಿಕಾರಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಅಲ್ಪ ಸಂಖ್ಯಾತ ಸ್ಪೀಕರ್, ದಲಿತ ಉಪ ಸಭಾಪತಿ ವಿರುದ್ಧ  ಬಿಜೆಪಿಗರು ಗೂಂಡಾ ವರ್ತನೆ ತೋರಿದ್ದಾರೆ ಎಂದು ಹೇಳಿದ್ದಾರೆ.
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್

ಬೆಂಗಳೂರು: ಬಿಜೆಪಿ ಪ್ರತಿಭಟನೆ ವಿರುದ್ಧ ತೀವ್ರ ಕಿಡಿಕಾರಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಅಲ್ಪ ಸಂಖ್ಯಾತ ಸ್ಪೀಕರ್, ದಲಿತ ಉಪ ಸಭಾಪತಿ ವಿರುದ್ಧ  ಬಿಜೆಪಿಗರು ಗೂಂಡಾ ವರ್ತನೆ ತೋರಿದ್ದಾರೆ ಎಂದು ಹೇಳಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಅಲ್ಪ ಸಂಖ್ಯಾತ ವ್ಯಕ್ತಿ ಸ್ಪೀಕರ್ ಆಗಿರುವುದು ಮತ್ತು ದಲಿತ ವ್ಯಕ್ತಿಯೊಬ್ಬರು ಉಪ ಸಭಾಪತಿಯಾಗಿರುವುದನ್ನು ಬಿಜೆಪಿಗರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಅವರು ಹತಾಶೆಯಿಂದ ಕಾಗದ ಪತ್ರಗಳನ್ನು ಹರಿದು ಎಸೆದಿದ್ದಾರೆ. ಅಲ್ಪ ಸಂಖ್ಯಾತ ಸ್ಪೀಕರ್, ದಲಿತ ಉಪ ಸಭಾಪತಿ ವಿರುದ್ಧ ಬಿಜೆಪಿಗರಿಂದ ಗೂಂಡಾ ವರ್ತನೆ ತೋರಿದ್ದಾರೆ ಎಂದು ಹೇಳಿದರು.

ವಿಧಾನಸಭೆಯಲ್ಲಿ ಬಿಜೆಪಿಯವರು ಮಹಾಭಾರತ ನಾಟಕವನ್ನೇ ತೋರಿಸಿದ್ದಾರೆ. ಬಿಜೆಪಿ ಶಾಸಕರು ಹತಾಶೆಯಿಂದ ಗೂಂಡಾವರ್ತನೆ ತೋರಿದ್ದು, ದಲಿತ ಡೆಪ್ಯುಟಿ ಸ್ಪೀಕರ್ ಮೇಲೆ ಪೇಪರ್ ಹರಿದು ಎಸೆದಿದ್ದಾರೆ. ಬಿಜೆಪಿ ಪ್ರತಿಭಟನೆಗೆ ಜೆಡಿಎಸ್​ ನಾಯಕರ ಬೆಂಬಲ ವಿಚಾರಕ್ಕೆ ಸಂಬಂಧಿಸಿ ಜೆಡಿಎಸ್ ನಿಲುವೇನು ಅಂತಾ ಇನ್ನೂ ಸ್ಪಷ್ಟವಾಗಿಲ್ಲ. ಹೆಚ್​.ಡಿ.ದೇವೇಗೌಡರು ತಮ್ಮ ನಿಲುವು ಏನು ಅಂತಾ ಹೇಳಲಿ. ಹೆಚ್​​.ಡಿ.ದೇವೇಗೌಡರು, ಇಬ್ರಾಹಿಂ ಅವರ ಅಭಿಪ್ರಾಯ ತಿಳಿಸಿಲ್ಲ. ಹೆಚ್​.ಡಿ.ಕುಮಾರಸ್ವಾಮಿ ಮಾತ್ರ ಮಾತಾಡಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ಇನ್ನು ವಿಪಕ್ಷಗಳ ಸಭೆಗೆ ಆಗಮಿಸಿದ ರಾಜಕೀಯ ನಾಯಕರಿಗೆ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, 'ಹಿರಿಯ ಐಎಎಸ್ ಅಧಿಕಾರಿಗಳು ನಮಗೆ ಭದ್ರತೆ ನೀಡುತ್ತಾರೆ. ಅವರನ್ನು ಈ ಸ್ಥಿತಿಯಲ್ಲಿ ಸುರಕ್ಷಿತವಾಗಿಡುವುದು ನಮ್ಮ ಕರ್ತವ್ಯ. ಹಾಗಾಗಿ ಅಗತ್ಯ ವ್ಯವಸ್ಥೆ ಮಾಡಿದ್ದೇವೆ. ರಾಜ್ಯಕ್ಕೆ ಬಂದ ಅತಿಥಿಗಳು ಈ ದೇಶವನ್ನು ಮುನ್ನಡೆಸಲಿದ್ದಾರೆ ಮತ್ತು ಅವರನ್ನು ಸರಿಯಾಗಿ ನಡೆಸಿಕೊಳ್ಳಬೇಕು. ಹೀಗಾಗಿ ಐಎಎಸ್ ಅಧಿಕಾರಿಗಳ ನಿಯೋಜನಯಲ್ಲಿ ಯಾವುದೇ ಲೋಪವಾಗಿಲ್ಲ. ಶಿಷ್ಠಾಚಾರದಂತೆ ನಡೆದುಕೊಂಡಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com