ವಿಧಾನಸಭೆ ಚುನಾವಣೆ ಗೆಲುವು, ಮುಂಬರುವ ಲೋಕಸಭೆ ಚುನಾವಣೆ: ಕಾಂಗ್ರೆಸ್ ನಿಂದ ಬೆಂಗಳೂರಲ್ಲಿ ರಾಷ್ಟ್ರೀಯ ಯುವ ಸಮಾವೇಶ

ಕೆಲ ದಿನಗಳ ಹಿಂದೆ ವಿಪಕ್ಷಗಳ ಒಕ್ಕೂಟ ಸಭೆ ನಡೆಸಿ ಇಂಡಿಯಾ ಎಂದು ನಾಮಕರಣ ಮಾಡಿದ ಬಳಿಕ ಒಂದೇ ತಿಂಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಆಯೋಜಿಸಿದ ಎರಡನೇ ಕಾರ್ಯಕ್ರಮ ನಿನ್ನೆ ಆರಂಭಗೊಂಡ "ಉತ್ತಮ ಭಾರತದ ಅಡಿಪಾಯ" ಶೀರ್ಷಿಕೆಯಡಿ ರಾಷ್ಟ್ರೀಯ ಯುವ ಸಮಾವೇಶ.
ರಾಷ್ಟ್ರೀಯ ಕಾಂಗ್ರೆಸ್ ಯುವ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್
ರಾಷ್ಟ್ರೀಯ ಕಾಂಗ್ರೆಸ್ ಯುವ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್
Updated on

ಬೆಂಗಳೂರು: ಕೆಲ ದಿನಗಳ ಹಿಂದೆ ವಿಪಕ್ಷಗಳ ಒಕ್ಕೂಟ ಸಭೆ ನಡೆಸಿ ಇಂಡಿಯಾ ಎಂದು ನಾಮಕರಣ ಮಾಡಿದ ಬಳಿಕ ಒಂದೇ ತಿಂಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಆಯೋಜಿಸಿದ ಎರಡನೇ ಕಾರ್ಯಕ್ರಮ ನಿನ್ನೆ ಆರಂಭಗೊಂಡ "ಉತ್ತಮ ಭಾರತದ ಅಡಿಪಾಯ" ಶೀರ್ಷಿಕೆಯಡಿ ರಾಷ್ಟ್ರೀಯ ಯುವ ಸಮಾವೇಶ.

ಈ ಸಮಾವೇಶ ನಿನ್ನೆ ಬುಧವಾರ ಆರಂಭವಾಗಿದ್ದು ಮೂರು ದಿನಗಳ ಕಾಲ ಮುಂದುವರಿಯಲಿದೆ. ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಯುವ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಬಿ ವಿ ಶ್ರೀನಿವಾಸ್, ಪಕ್ಷಕ್ಕೆ ಇದೊಂದು ಉತ್ತಮ ಅವಕಾಶವಾಗಿದ್ದು ಪಕ್ಷವನ್ನು ಬಲವರ್ಧಿಸಲು ಈ ಸಮಾವೇಶ ಸಹಾಯವಾಗಲಿದೆ ಎಂದು ನಾವು ನಂಬುತ್ತೇವೆ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಶುಕ್ರವಾರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಯುವ ಮೋರ್ಚ ಏನು ಕಾರ್ಯಕ್ರಮ ಮಾಡಲಿದೆ ಎಂಬುದು ಕುತೂಹಲವಾಗಿದೆ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂಸದ ತೇಜಸ್ವಿ ಸೂರ್ಯ ಬೆಂಗಳೂರಿನವರು.

ನಿನ್ನೆ ಕಾಂಗ್ರೆಸ್ ಯುವ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಗಳಾದ ನಂತರ ಮಹಿಳೆಯರು, ದಲಿತರು, ಶೂದ್ರರು, ಅಲ್ಪಸಂಖ್ಯಾತರು, ಬುಡಕಟ್ಟು ಜನಾಂಗದವರು ತಮ್ಮ ಹಕ್ಕುಗಳಿಂದ ವಂಚಿತರಾಗಿದ್ದಾರೆ. ದೇಶದಲ್ಲಿ ದ್ವೇಷ ರಾಜಕಾರಣ ಭುಗಿಲೆದ್ದಿದೆ. ನಾವು ಮುಂದೆ ಪ್ರೀತಿಯ ಭಾರತವನ್ನು ಮರು ರಚನೆ ಮಾಡಬೇಕಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದ್ದು ಬಡ ಮತ್ತು ಮಧ್ಯಮ ವರ್ಗದವರು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗುತ್ತಿದ್ದಾರೆ. ಮಾನವೀಯತೆ, ಜಾತ್ಯತೀತತೆ, ವೈಜ್ಞಾನಿಕ ಪ್ರಗತಿ ಮತ್ತು ಅಭಿವೃದ್ಧಿಗೆ ನೆಹರೂರವರ ಆಡಳಿತ ಕಾಲದಲ್ಲಿ ಹಾಕಲಾಗಿದ್ದ ನೆಲೆಯನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ. ಭಾರತದ ಜಾತ್ಯತೀತ ಸಿದ್ಧಾಂತಗಳನ್ನು ಮೋದಿಯವರು ಪ್ರಧಾನ ಮಂತ್ರಿಗಳಾದ ನಂತರ ಬಿಜೆಪಿ-ಆರ್ ಎಸ್ಎಸ್ ಪರಿವಾರ ನಿರ್ದಿಷ್ಟವಾಗಿ ಹಾಳುಗೆಡವಿ ನಾಶ ಮಾಡುತ್ತಿದೆ ಎಂದು ಟೀಕಿಸಿದರು.

“ರೈತರು ಮತ್ತು ಕಾರ್ಮಿಕರಂತೆ ದೀನದಲಿತರು ಮತ್ತು ಬಡತನ ಅಂಚಿನಲ್ಲಿರುವವರ ನಿಜವಾದ ಕಾಳಜಿಗಳ ಬಗ್ಗೆ ಬಿಜೆಪಿ ಎಂದಿಗೂ ಚಿಂತಿಸಿಲ್ಲ. ಪ್ರಚೋದನಕಾರಿ ಭಾಷಣಗಳು ಮತ್ತು ಕಾರ್ಯಗಳ ಮೂಲಕ ಹಿಂದುಳಿದ ಗುಂಪುಗಳ ಮಕ್ಕಳನ್ನು ದ್ವೇಷದ ಕೂಪಕ್ಕೆ ತಳ್ಳುವ ಮೂಲಕ ದೇಶವನ್ನು ಮಧ್ಯಯುಗಕ್ಕೆ ಎಳೆಯಲು ಬಿಜೆಪಿ ಪಕ್ಷವು ಪ್ರಯತ್ನಿಸುತ್ತಿದೆ. ಈ ದೇಶದ ಯುವಕರು ಮತ್ತು ವಿದ್ಯಾರ್ಥಿಗಳು ಇದಕ್ಕೆ ಅವಕಾಶ ನೀಡುವುದಿಲ್ಲ ಎಂಬ ವಿಶ್ವಾಸ ನನಗಿದೆ. ಕಾಂಗ್ರೆಸ್ ಸಂವಿಧಾನದ ಆಶಯಕ್ಕೆ ಬದ್ಧವಾಗಿದೆ. ಕಾರ್ಮಿಕರು, ಮಹಿಳೆಯರು, ದಲಿತರು, ಶೂದ್ರರು, ಹಿಂದುಳಿದ ವರ್ಗಗಳು ಮತ್ತು ಎಲ್ಲಾ ಜಾತಿಗಳ ಬಡವರ ಬದುಕನ್ನು ಮೇಲೆತ್ತಲು ಯುದ್ಧವನ್ನು ನಡೆಸುತ್ತಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು. 

ಮೋದಿ ಪ್ರಧಾನಿಯಾದ ನಂತರ ದೇಶದ ಆರ್ಥಿಕತೆಯನ್ನು ಹಾಳು ಮಾಡಿದರು. ಕೇವಲ ಒಂಬತ್ತು ವರ್ಷಗಳಲ್ಲಿ ಮೋದಿ ದೇಶದ ಸಾಲವನ್ನು 170 ಲಕ್ಷ ಕೋಟಿಗೆ ಹೆಚ್ಚಿಸಿದರು. ಕಳೆದ 75 ವರ್ಷಗಳಲ್ಲಿ ದೇಶದ ಸಾಲ ಕೇವಲ 53 ಲಕ್ಷ ಕೋಟಿ ರೂಪಾಯಿಗಳಾಗಿದ್ದವು. ಕಚ್ಚಾ ತೈಲ ಬೆಲೆಗಳು ಕಡಿಮೆಯಾದಾಗ ಇಂಧನ ಬೆಲೆ ಏರಿಕೆಗೆ ಮೋದಿಯವರ ಕೆಟ್ಟ ಅರ್ಥಶಾಸ್ತ್ರವೇ ಕಾರಣ ಎಂದು ಕೂಡ ಸಿದ್ದರಾಮಯ್ಯ ಟೀಕಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com