ಮನೆಗೆ ಬಂದ ಸೊಸೆಯನ್ನು ಮನೆಯವರಂತೆ ನೋಡಿಕೊಳ್ಳಬೇಕು: ಈಶ್ವರಪ್ಪಗೆ ಸದಾನಂದ ಗೌಡ ತಿರುಗೇಟು

ಮನೆಗೆ ಬಂದ ಸೊಸೆಯನ್ನು ಮನೆಯವರಂತೆ ನೋಡಿಕೊಳ್ಳಬೇಕು ಎಂದು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಮಾಜಿ ಸಿಎಂ ಸದಾನಂದ ಗೌಡ ಅವರು ತಿರುಗೇಟು ನೀಡಿದ್ದಾರೆ.
ಸದಾನಂದ ಗೌಡ
ಸದಾನಂದ ಗೌಡ

ಬೆಂಗಳೂರು: ಮನೆಗೆ ಬಂದ ಸೊಸೆಯನ್ನು ಮನೆಯವರಂತೆ ನೋಡಿಕೊಳ್ಳಬೇಕು ಎಂದು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಮಾಜಿ ಸಿಎಂ ಸದಾನಂದ ಗೌಡ ಅವರು ತಿರುಗೇಟು ನೀಡಿದ್ದಾರೆ.

ಈ ಹಿಂದೆ ಹೇಳಿಕೆ ನೀಡಿದ್ದ ಈಶ್ವರಪ್ಪ ಅವರು, ಬಿಜೆಪಿ ಪಕ್ಷದಲ್ಲಿ ಶಿಸ್ತು ಕಡಿಮೆಯಾಗಲು ಕಾಂಗ್ರೆಸ್​ನ ಗಾಳಿ ಸೋಕಿರುವುದೇ ಕಾರಣ. ಕಾಂಗ್ರೆಸ್ ನಾಯಕರು ಬಿಜೆಪಿ ಪಕ್ಷಕ್ಕೆ ಬಂದಿರುವುದರಿಂದ ಬಿಜೆಪಿ ಪಕ್ಷದಲ್ಲಿ ಕೆಲವೆಡೆ ಶಿಸ್ತು ಇಲ್ಲದಾಗಿದೆ. ಬಹಿರಂಗವಾಗಿ ಹೊಂದಾಣಿಕೆ ರಾಜಕಾರಣದ ಬಗ್ಗೆ ಚರ್ಚೆ ಆಗುತ್ತಿದೆ. ಇವೆಲ್ಲಾ ನಾಲ್ಕು ಗೋಡೆ ಮಧ್ಯೆ ಕೂತು ಮಾತನಾಡಬೇಕು ಎಂದು ಹೇಳಿದ್ದರು. ಈ ಹೇಳಿಕೆ ಸಾಕಷ್ಟು ಚರ್ಚೆಗೂ ಅವಕಾಶ ಮಾಡಿಕೊಟ್ಟಿತ್ತು.

ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸದಾನಂದ ಗೌಡ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್​ನಲ್ಲಿ ಹೊಂದಾಣಿಕೆ ಆಗಿದೆ. ಆದರೆ, ಬಿಜೆಪಿ ಪಕ್ಷದಲ್ಲಿ ಹೊಂದಾಣಿಕೆ ರಾಜಕಾರಣ ಆಗಿಲ್ಲ. ಪಕ್ಷಾಂತರವಾಗಿ ಬಂದವರಿಂದಲೇ ಬಿಜೆಪಿಯಲ್ಲಿ ಅಶಿಸ್ತು ತುಂಬಿದೆ. ಶಿಸ್ತು ಹೋಗಿದೆ ಎಂಬ ಮಾತನ್ನು ಒಪ್ಪಲಾಗುವುದಿಲ್ಲ. ನಮ್ಮ ಮನೆಗೆ ಬಂದ ಸೊಸೆಯನ್ನು ಮನೆಯವರಂತೆ ನೋಡಿಕೊಳ್ಳಬೇಕು ಎಂದು ಹೇಳುವ ಮೂಲಕ ಈಶ್ವರಪ್ಪ ಮಾತಿಗೆ ತಿರುಗೇಟು ನೀಡಿದ್ದಾರೆ.

ವಿಧಾನಸಭೆ ಫಲಿತಾಂಶ ನಮ್ಮ‌ ನಿರೀಕ್ಷೆಗೆ ವಿರುದ್ಧವಾಗಿ ಬಂದಿರುವುದರ ಬಗ್ಗೆ ನೋವಿದೆ. ಈ ಬಗ್ಗೆ ಬಹಿರಂಗವಾಗಿವಾಗಿ ಮಾತನಾಡುವುದು ಸರಿಯಲ್ಲ. ಮತ್ತಷ್ಟು ಗೌಪ್ಯವಾಗಿ ಸಭೆಗಳು ನಡೆಯಬೇಕು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com