ಕುಡಿಸಿಕೊಂಡು ಕರಕೊಂಡು ಬಂದು ಕುಣಿಸೋದಾ, ನಾನು ಭಾಷಣ ಮಾಡೋಲ್ಲ; ಇವರ ಮನೆ ಹಾಳಾಗ, ಒಂದು ಮನೆ ಕೂಡ ಕಟ್ಟಿಸಿಲ್ಲ: ಸಿದ್ದರಾಮಯ್ಯ

ಏ ಯಾವನಯ್ಯ ಅವನು ಯಾರವನು ಗಲಾಟೆ ಮಾಡೋನು ಕಳಿಸ್ರಿ ಆಚೆಗೆ ಗಲಾಟೆ ಮಾಡಿದ್ರೆ ಟಿಕೆಟ್ ಕೊಡಲ್ಲ ನಾನು. ಕುಡಿಸಿಕೊಂಡು ಕರಕೊಂಡ ಬಂದು ಕುಣಿಸೋದಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು
ಸಿದ್ದರಾಮಯ್ಯ
ಸಿದ್ದರಾಮಯ್ಯ

ಧಾರವಾಡ/ಕಿತ್ತೂರು: ಏ ಯಾವನಯ್ಯ ಅವನು ಯಾರವನು ಗಲಾಟೆ ಮಾಡೋನು ಕಳಿಸ್ರಿ ಆಚೆಗೆ ಗಲಾಟೆ ಮಾಡಿದ್ರೆ ಟಿಕೆಟ್ ಕೊಡಲ್ಲ ನಾನು. ಕುಡಿಸಿಕೊಂಡು ಕರಕೊಂಡ ಬಂದು ಕುಣಿಸೋದಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ ಯಾತ್ರೆಯಲ್ಲಿ ಕಾರ್ಯಕರ್ತರ ಗಲಾಟೆಗೆ ಸಿಡಿಮಿಡಿಗೊಂಡ ಸಿದ್ದರಾಮಯ್ಯ, ಭಾಷಣ ಕೇಳಲು ಇಷ್ಟ ಇಲ್ಲ ಅಂದ್ರೆ ದಯವಿಟ್ಟು ಇಲ್ಲಿಂದ ಹೋಗಿ. ಎಲ್ಲದಕ್ಕೂ ಒಂದು ಮಿತಿ ಇರಬೇಕು ನಾನು ಭಾಷಣ ಮಾಡಲ್ಲ ಎಂದು ಹೊರಟೇ ಬಿಟ್ಟರು. ನಂತರ ಸ್ಥಳೀಯ ನಾಯಕರು ಮನವೊಲಿಸಿದ ಬಳಿಕ ಸಿದ್ದರಾಮಯ್ಯ ಭಾಷಣ ಮುಂದುವರಿಸಿದರು.

ಇನ್ನೂ ಕಿತ್ತೂರಿನ  ಹೊಸ ಕಾದರವಳ್ಳಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಬುಧವಾರ ಆಯೋಜಿಸಿದ್ದ ‘ಪ್ರಜಾಧ್ವನಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಬಡವರಿಗೆ ಐದು ಲಕ್ಷ ಮನೆ ಕಟ್ಟಿಸಿದ್ದೆ. ಇವರ (ಬಿಜೆಪಿ) ಮನೆ ಹಾಳಾಗ ಐದು ವರ್ಷದಲ್ಲಿ ಒಂದೂ ಮನೆಯನ್ನು ಕೊಟ್ಟಿಲ್ಲ" ಎಂದು  ಟೀಕಿಸಿದರು. ವಸತಿ ಸಚಿವ ವಿ. ಸೋಮಣ್ಣ ಅವರನ್ನು ವಿಧಾನಸಭೆಯಲ್ಲಿ ಈ ಬಗ್ಗೆ ಆದೇಶವಿದ್ದರೆ ಕೊಡಿ ಎಂದು ಕೇಳಿದೆ. ನಾಲ್ಕು ವರ್ಷದಲ್ಲಿ ಒಂದೂ ಆದೇಶ ತೋರಿಸಲಿಲ್ಲ’ ಎಂದು ದೂರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com