ನಮ್ಮ ಸರ್ಕಾರ ಬಂದರೆ ಹಳ್ಳಿ ಯುವಕರನ್ನು ಮದುವೆಯಾದವರಿಗೆ 2 ಲಕ್ಷ ರೂಪಾಯಿ: ಹೆಚ್ ಡಿ ಕುಮಾರಸ್ವಾಮಿ

ಹಳ್ಳಿ ಯುವಕರಿಗೆ ಮದುವೆಯಾಗಲು ಹುಡುಗಿ ಸಿಗುವುದಿಲ್ಲ ಎಂಬುದು ಇತ್ತೀಚೆಗೆ ಬಹುದೊಡ್ಡ ಸಮಸ್ಯೆ. ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಹಲವು ಭರವಸೆ, ಆಸೆ-ಆಕಾಂಕ್ಷೆಗಳನ್ನು ಮತದಾರರಿಗೆ ನೀಡುವ ರಾಜಕೀಯ ಪಕ್ಷಗಳು ಈ ಮೂಲಕ ಮತದಾರರನ್ನು ಓಲೈಸಲು ಯತ್ನಿಸುವುದು ಸಾಮಾನ್ಯ.
ಹೆಚ್ ಡಿ ಕುಮಾರಸ್ವಾಮಿ
ಹೆಚ್ ಡಿ ಕುಮಾರಸ್ವಾಮಿ
Updated on: 

ತುಮಕೂರು: ಹಳ್ಳಿ ಯುವಕರಿಗೆ ಮದುವೆಯಾಗಲು ಹುಡುಗಿ ಸಿಗುವುದಿಲ್ಲ ಎಂಬುದು ಇತ್ತೀಚೆಗೆ ಬಹುದೊಡ್ಡ ಸಮಸ್ಯೆ. ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಹಲವು ಭರವಸೆ, ಆಸೆ-ಆಕಾಂಕ್ಷೆಗಳನ್ನು ಮತದಾರರಿಗೆ ನೀಡುವ ರಾಜಕೀಯ ಪಕ್ಷಗಳು ಈ ಮೂಲಕ ಮತದಾರರನ್ನು ಓಲೈಸಲು ಯತ್ನಿಸುವುದು ಸಾಮಾನ್ಯ.

ನಿನ್ನೆ ತುಮಕೂರು ಜಿಲ್ಲೆಯ ಹಾಲ್ಕುರಿಕೆ ಗ್ರಾಮದಲ್ಲಿ ಪಂಚರತ್ನ ರಥಯಾತ್ರೆ ಸಂದರ್ಭದಲ್ಲಿ ಜೆಡಿಎಸ್ ನಾಯಕ ಕುಮಾರಸ್ವಾಮಿ ಹಳ್ಳಿ ಯುವಕರ ಸಮಸ್ಯೆಯನ್ನು ಎತ್ತಿದ್ದಾರೆ. ಅಲ್ಲದೆ, ನಾವು ಅಧಿಕಾರಕ್ಕೆ ಬಂದರೆ, ಹಳ್ಳಿ ಯುವಕರನ್ನು, ಹಳ್ಳಿ ರೈತರನ್ನು ಮದುವೆಯಾದವರಿಗೆ 2 ಲಕ್ಷ ರೂಪಾಯಿ ನೀಡುತ್ತೇವೆ ಎಂದು ಘೋಷಿಸಿದ್ದಾರೆ.

ತುಮಕೂರು ಜಿಲ್ಲೆಯ ತಿಪಟೂರಿನ ಹಾಲ್ಕುರಿಕೆಯಲ್ಲಿ ಪಂಚರತ್ನ ರಥಯಾತ್ರೆಯ ವೇಳೆ ನಡೆದ ಬೃಹತ್ ರೋಡ್ ಶೋ ವೇಳೆ ಮಾತನಾಡಿದ ಕುಮಾರಸ್ವಾಮಿ, ಹಳ್ಳಿಯ ರೈತರ ಮಕ್ಕಳಿಗೆ ಯಾರೂ ಹೆಣ್ಣು ಕೊಡಲ್ಲ, ಹೀಗಾಗಿ ಹಲವು ಯುವಕರು ಮದುವೆಯಾಗದೆ ಉಳಿದಿದ್ದಾರೆ. ಹೀಗಾಗಿ ರೈತರ ಮಕ್ಕಳ ಜೊತೆ ಮದುವೆಯಾದರೆ 2 ಲಕ್ಷ ರೂಪಾಯಿ ಕೊಡುವ ಯೋಜನೆ ತರುತ್ತೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮಾತ್ರ 2 ಲಕ್ಷ ರೂಪಾಯಿ ಕೊಡುವ ಭರವಸೆ ನೀಡುತ್ತಿದ್ದೇನೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com