ಒಂದು ಚುನಾವಣೆ ಗೆದ್ದ ತಕ್ಷಣ ಮರಿಹುಲಿ ಎಂದು ಕರೆದರೆ ಹೇಗೆ? ನಮ್ಮನ್ನು ತುಳಿಯಲು ಬಂದರೆ ಸುಮ್ಮನಿರಲ್ಲ: ವಿಜಯೇಂದ್ರಗೆ ಅರುಣ್ ಸೋಮಣ್ಣ ವಾರ್ನಿಂಗ್

ಪಕ್ಷಕ್ಕೆ ಸೋಮಣ್ಣ ಅವರ ಕೊಡುಗೆ ದೊಡ್ಡದು. ನನ್ನ ತಂದೆಗೆ ಅವಮಾನ ಆದ್ರೆ ಸಹಿಸುವುದಿಲ್ಲ. ಹೀಗಾಗಿ ನಾನು ಮಾತನಾಡಿದ್ದೇನೆ. 2008 ಮತ್ತು 2013 ರ ವಿಧಾನಸಭಾ ಚುನಾವಣೆಯಲ್ಲಿ ಸೋಮಣ್ಣ ಅವರ ಸೋಲಿಗೆ ಕಾರಣರು ಯಾರು? ಈ ಬಗ್ಗೆ ಚರ್ಚೆಗೆ ನಾನು ಸಿದ್ಧನಿದ್ದೇನೆ.
ಅರುಣ್ ಸೋಮಣ್ಣ ಮತ್ತು ಬಿ ವೈ ವಿಜಯೇಂದ್ರ
ಅರುಣ್ ಸೋಮಣ್ಣ ಮತ್ತು ಬಿ ವೈ ವಿಜಯೇಂದ್ರ
Updated on

ಬೆಂಗಳೂರು: ಸಚಿವ ಸೋಮಣ್ಣ ಅವರಿಗೆ ಪಕ್ಷ ನೀಡಿದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಹಲವು ಚುನಾವಣೆಗಳನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಒಂದು ಚುನಾವಣೆ ಗೆದ್ದ ತಕ್ಷಣ ರಾಜಾಹುಲಿ, ಅವರ ಮಗ ಮರಿಹುಲಿ ಎಂದು ಕರೆದರೆ ಹೇಗೆ ಡಾ.ಅರುಣ್ ಸೋಮಣ್ಣ ಪ್ರಶ್ನಿಸಿದ್ದಾರೆ.

ವಸತಿ ಸಚಿವ ವಿ.ಸೋಮಣ್ಣ ಅವರ ಪುತ್ರ ಅರುಣ್ ಸೋಮಣ್ಣ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಪಕ್ಷದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಸಂಬಂಧ ಅರುಣ್ ಸೋಮಣ್ಣ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಯಾವುದೋ ಕಾರ್ಯಕ್ರಮದಲ್ಲಿ ಮಾತನಾಡಿರುವ ವಿಡಿಯೊವನ್ನು ಅವರಿಗೆ ಅನುಕೂಲ ಆಗುವ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಚುನಾವಣೆಯಲ್ಲಿ ಎಲ್ಲರ ಪಾತ್ರವೂ ಇರುತ್ತದೆ. ನನಗೂ ವಿಜಯೇಂದ್ರ ಅವರಿಗೂ ವೈಯಕ್ತಿಕ ದ್ವೇಷ ಇಲ್ಲ. ನಮ್ಮನ್ನು ತುಳಿಯಲು ಬಂದರೆ ಸುಮ್ಮನಿರಲು ಸಾಧ್ಯವಿಲ್ಲ’ ಎಂದೂ ಎಚ್ಚರಿಕೆ ನೀಡಿದ್ದಾರೆ.

ಪಕ್ಷಕ್ಕೆ ಸೋಮಣ್ಣ ಅವರ ಕೊಡುಗೆ ದೊಡ್ಡದು. ನನ್ನ ತಂದೆಗೆ ಅವಮಾನ ಆದ್ರೆ ಸಹಿಸುವುದಿಲ್ಲ. ಹೀಗಾಗಿ ನಾನು ಮಾತನಾಡಿದ್ದೇನೆ. 2008 ಮತ್ತು 2013 ರ ವಿಧಾನಸಭಾ ಚುನಾವಣೆಯಲ್ಲಿ ಸೋಮಣ್ಣ ಅವರ ಸೋಲಿಗೆ ಕಾರಣರು ಯಾರು? ಈ ಬಗ್ಗೆ ಚರ್ಚೆಗೆ ನಾನು ಸಿದ್ಧನಿದ್ದೇನೆ. ಇಲ್ಲಿ ಪಕ್ಷ ಮುಖ್ಯವೇ ಹೊರತು, ವ್ಯಕ್ತಿ ಮುಖ್ಯವಲ್ಲ ಎಂದರು.

ನಗರದ ಮೂಡಲಪಾಳ್ಯದ ಕುರುಬರ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ‘ನಮ್ಮ ಪಕ್ಷದಲ್ಲಿ ಬಹಳ ಹಿರಿಯ ನಾಯಕರೊಬ್ಬರಿದ್ದಾರೆ. ಅವರು ತಮ್ಮ ಸೀಟನ್ನು ತ್ಯಾಗ ಮಾಡಿ, ಈಗ ತಮ್ಮಮಗನನ್ನು ಕೂರಿಸುತ್ತಿದ್ದಾರೆ. ಕರ್ನಾಟಕಕ್ಕೆ ಮುಂದಿನ ನಾಯಕ ಎಂದು ಹೇಳುತ್ತಿದ್ದಾರೆ. ಆತನಿಗೆ ಫೋನ್ ಮಾಡಿದರೆ ಏಕ ವಚನದಲ್ಲಿ ಮಾತನಾಡುವ ಮಹಾ ಪುರುಷ. ನನಗೂ ಹೀಗೆ ಮಾತನಾಡಲು ಬಂದಾಗ, ನಾನೂ ಏಕ ವಚನದಲ್ಲಿ ಮಾತನಾಡಿದೆ’ ಎಂದು ವಿಜಯೇಂದ್ರ ಅವರನ್ನು ಉದ್ದೇಶಿಸಿ ಹೇಳಿದ್ದ ವಿಡಿಯೋ ಇದಾಗಿತ್ತು.

ಅಸಲಿಗೆ ಅದು ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮಾಡಿರುವ 15-ನಿಮಿಷದ ವಿಡಿಯೋ ಆಗಿದೆ. ಆದರೆ ಅದರಲ್ಲಿ ಕೇವಲ 30 ಸೆಕೆಂಡ್ ವಿಡಿಯೋವನ್ನು ಮಾತ್ರ ಎಡಿಟ್ ಮಾಡಿ ವೈರಲ್ ಮಾಡಲಾಗಿದೆ. ಅದನ್ನು ಮಾಡಿದ್ದು ಯಾರು ಅಂತ ಗೊತ್ತಾಗಿಲ್ಲ ಎಂದು ಅರುಣ್ ಸೋಮಣ್ಣ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com