ನನಗೆ 72 ವರ್ಷ, ನಾನು ನಿಂತ ನೀರಲ್ಲ, ಹರಿಯುವ ನೀರು: ಮಗನ ರಾಜಕೀಯ ಹಿತಾಸಕ್ತಿ ನಿರ್ಲಕ್ಷಿಸಿದರೆ ಬಿಜೆಪಿಗೆ ಸೋಮಣ್ಣ ಗುಡ್ ಬೈ?

ವಸತಿ ಸಚಿವ ವಿ ಸೋಮಣ್ಣ ಅವರು ಒಂದೆರಡು ವಾರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಸಾಧ್ಯತೆಯಿದೆ, ಅವರ ಈ ಕ್ರಮದಿಂದ ಕಾಂಗ್ರೆಸ್ ಗೆ ಸಹಾಯವಾಗಲಿದೆ. ಆದರೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಕೇಸರಿ ಪಕ್ಷದ ಮಹತ್ವಾಕಾಂಕ್ಷೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.
ಸೋಮಣ್ಣ
ಸೋಮಣ್ಣ

ಬೆಂಗಳೂರು: ವಸತಿ ಸಚಿವ ವಿ ಸೋಮಣ್ಣ ಅವರು ಒಂದೆರಡು ವಾರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಸಾಧ್ಯತೆಯಿದೆ, ಅವರ ಈ ಕ್ರಮದಿಂದ ಕಾಂಗ್ರೆಸ್ ಗೆ ಸಹಾಯವಾಗಲಿದೆ. ಆದರೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಕೇಸರಿ ಪಕ್ಷದ ಮಹತ್ವಾಕಾಂಕ್ಷೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.

ಬೆಂಗಳೂರು ಐಟಿ ರಾಜಧಾನಿ. ಕಾಂಗ್ರೆಸ್ ಪಕ್ಷದ ಮೂಲಗಳ ಪ್ರಕಾರ ಸೋಮಣ್ಣ ಅವರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಸಿಎಲ್ಪಿ ನಾಯಕ ಸಿದ್ದರಾಮಯ್ಯ ಇಬ್ಬರೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ. ಬೆಂಗಳೂರು ನಗರದ 4-5 ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿರುವ ಲಿಂಗಾಯತ ಸಮುದಾಯದ ಮುಖಂಡ ವಿ.ಸೋಮಣ್ಣ, ಗೋವಿಂದರಾಜನಗರ ಶಾಸಕ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರೊಂದಿಗೆ ಚರ್ಚಿಸಲಾಗಿದ್ದು, ಸೋಮಣ್ಣ ಸೇರ್ಪಡೆಗೆ ತಕ್ಷಣ ಒಪ್ಪಿಗೆ ನೀಡಿದ್ದಾರೆ ಎಂದು ಮೂಲವೊಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಕರ್ನಾಟಕ ಪ್ರವಾಸದ ನಂತರ, ಅಂದರೆ ಮಾರ್ಚ್ ಒಳಗೆ ಅವರು ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಮಣ್ಣಗೆ  ಗೋವಿಂದರಾಜನಗರ ಅಥವಾ ರಾಜಾಜಿನಗರ ಕ್ಷೇತ್ರವನ್ನು ನೀಡಲಿದೆ. ಅವರ ಪುತ್ರ ಅರುಣ್ ಸೋಮಣ್ಣ ಅವರು ತಮ್ಮ ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ ಬಿಜೆಪಿಯಿಂದ ಚಾಮರಾಜನಗರ ಜಿಲ್ಲೆಯ ಹನೂರು ಮತ್ತು ಹಾಸನ ಜಿಲ್ಲೆಯ ಅರಸೀಕೆರೆ ಅಥವಾ ತುಮಕೂರಿನ ಗುಬ್ಬಿ ಕ್ಷೇತ್ರದಿಂದ ಟಿಕೆಟ್ ಪಡೆಯಲು ವಿಫಲರಾಗಿದ್ದಾರೆ, ಹಾಗಾಗ ಮುಂದಿನ ಚುನಾವಣೆಯಲ್ಲಿ ಸಿಗುವ ಸಾಧ್ಯತೆಯಿಲ್ಲದ ಕಾರಣ ಕಾಂಗ್ರೆಸ್ ಗೆ ಸೇರುವ ನಿರೀಕ್ಷೆಯಿದೆ. ಕಾಂಗ್ರೆಸ್ ನಲ್ಲಿ ಸೋಮಣ್ಣ ಮ್ತು ಪುತ್ರನಿಗೆ ಟಿಕೆಟ್ ನೀಡುವ ಸಾಧ್ಯತೆಯಿದೆ.

ಅರಸೀಕೆರೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮೊಮ್ಮಗ ಎನ್ ಆರ್ ಸಂತೋಷ್ ಅವರು ಬಿಎಸ್ ವೈ ಪಿಎ ಆಗಿ ಕೆಲಸ ಮಾಡಿದ್ದು, ರಾಜಕೀಯ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ. ಅವರು ಬಿಜೆಪಿ ಸಂಭಾವ್ಯ ಎಂದು ಈಗಾಗಲೇ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿ ಮೂಲಗಳ ಪ್ರಕಾರ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರ ಆಶೀರ್ವಾದವೂ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಹಾಗಾಗಿ, ಸೋಮಣ್ಣ ನಿರಾಸರಾಗಿದ್ದಾರೆ.

ಬಿಜೆಪಿಯಲ್ಲಿ ತಮ್ಮ ಮಗನ ರಾಜಕೀಯ ಭವಿಷ್ಯವನ್ನು ಮೂಲೆಗುಂಪು ಮಾಡಿದ್ದಾರೆಂದು ಬೇಸರಗೊಂಡಿರುವ ಸೋಮಣ್ಣ ಬಿಜೆಪಿ ತ್ಯಜಿಸಲು ಯೋಜಿಸಿದ್ದಾರೆ. ಕೊನೆಯ ಪ್ರಯತ್ನವಾಗಿ ಬಿ ಎಸ್ ಯಡಿಯೂರಪ್ಪ ಸೋಮಣ್ಣ ಅವರನ್ನು ಬಿಜೆಪಿಯೊಳಗೆ ಉಳಿಸಿಕೊಳ್ಳಲು ಮನವೊಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಆದರೆ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ ಅವರು ಬಿಜೆಪಿ ತೊರೆಯುವುದನ್ನು ತಳ್ಳಿಹಾಕಿದರು. ಕ್ಷೇತ್ರದ ಜನರು ನನ್ನನ್ನು ಮನೆ ಮಗನಾಗಿ ನೋಡಿಕೊಂಡಿದ್ದಾರೆ. ನಾನು ಯಾರ ಬಗ್ಗೆಯೂ ಮಾತನಾಡಿಲ್ಲ. ರಾಜ್ಯಾಧ್ಯಕ್ಷರು, ಸಿಎಂ ಜತೆ ಕೆಲವು ವಿಷಯಗಳ ಬಗ್ಗೆ ಚರ್ಚಿಸಿದ್ದೇನೆ. ನನಗೆ ಈಗ 72 ವರ್ಷ, ಆಗಬೇಕಿರುವುದು ಏನೂ ಇಲ್ಲ. ನಾನು ನಿಂತ ನೀರಲ್ಲ, ಹರಿಯುವ ನೀರು, ನಾನು ಯಾರ ಬಗ್ಗೆಯೂ ಒಂದು ಸಣ್ಣ ಅಪಚಾರವೂ ಮಾಡಿಲ್ಲ. ರಾಜ್ಯಾಧ್ಯಕ್ಷರು, ಸಿಎಂ ನನಗೆ ಏನು ಹೇಳಿದ್ದಾರೆ ಎಂದು ನನಗೆ ಮಾತ್ರ ಗೊತ್ತಿದೆ. ಆದರೆ ಅವರ ಭಾವನೆಗಳನ್ನು ನಾನು ಅರ್ಥ ಮಾಡಿಕೊಂಡು, ನನ್ನ ಹೊಟ್ಟೆಪಾಡಿಗೋಸ್ಕರ ಏನು ಮಾಡಬೇಕು, ಅದನ್ನು ಮಾಡಿಕೊಂಡು ಹೋಗುತ್ತಿದ್ದೇನೆ. ಕ್ಷೇತ್ರದ ಜನರ ಋಣ ತೀರಿಸಲು ಎಲ್ಲಿವರೆಗು ಇರಬೇಕೋ, ಜನರು ಎಲ್ಲಿಯವರೆಗೂ ನನ್ನನ್ನು ಬಯಸುತ್ತಾರೋ ಅಲ್ಲಿವರೆಗೆ ಈ ಸೋಮಣ್ಣ ಇರುತ್ತಾ‌ನೆ  ಎಂದು ವ್ಯಂಗ್ಯವಾಡಿದರು. ಪ್ರಚಾರ ಸಮಿತಿಯಿಂದ ಕೈ ಬಿಟ್ಟಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ಸೋಮಣ್ಣ ನಿರಾಕರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com