‘ಯಾವನ್ ಹೇಳಿದ್ದು'? ಶಿಗ್ಗಾವಿ ಬಿಡ್ತಿನಿ ಅಂತಾ, ಯಾವುದೇ ಕಾರಣಕ್ಕೂ ಕ್ಷೇತ್ರ ಬಿಡೋದಿಲ್ಲ: ಸಿಎಂ ಬೊಮ್ಮಾಯಿ ಕೆಂಡಾ ಮಂಡಲ

‘ನಾನು ಕ್ಷೇತ್ರ ಬಿಡ್ತೀನಿ ಅಂತ ಯಾವನ್ ಹೇಳಿದ್ದು?’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಧ್ಯಮದವರ ಮೇಲೆ ಸಿಟ್ಟಿನಿಂದ ಸೋಮವಾರ ಹರಿಹಾಯ್ದರು.
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
Updated on

ಹಾವೇರಿ: ‘ನಾನು ಕ್ಷೇತ್ರ ಬಿಡ್ತೀನಿ ಅಂತ ಯಾವನ್ ಹೇಳಿದ್ದು?’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಧ್ಯಮದವರ ಮೇಲೆ ಸಿಟ್ಟಿನಿಂದ ಸೋಮವಾರ ಹರಿಹಾಯ್ದರು.

ಸವಣೂರಿನ ಉಪವಿಭಾಗಾಧಿಕಾರಿಗಳ ನೂತನ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುವಾಗ, ‘ಬೊಮ್ಮಾಯಿ ಅವರು ಶಿಗ್ಗಾವಿ ಕ್ಷೇತ್ರ ಬಿಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ’ ಎಂಬ ಪ್ರಶ್ನೆ ಎದುರಾಯಿತು. ‘ಯಾವನ್ ಹೇಳಿದ್ದು..?. ಯಾವುದೇ ಕಾರಣಕ್ಕೂ ಶಿಗ್ಗಾವಿ ಕ್ಷೇತ್ರ ಬಿಡೋದಿಲ್ಲ‘ ಎಂದು ಕೋಪದಿಂದ ಹೇಳಿದರು.

ನಾನು ಯಾವುದೇ ಕಾರಣಕ್ಕೂ ಶಿಗ್ಗಾಂವಿ ಕ್ಷೇತ್ರ ಬಿಟ್ಟು ಬೇರೆಡೆ ಹೋಗುವುದಿಲ್ಲ, ನಾನು ಕ್ಷೇತ್ರ ಬಿಡುತ್ತೇನೆ ಅಂತ ಯಾರ್ ಹೇಳಿದ್ರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮರುಪ್ರಶ್ನೆ ಹಾಕಿದ್ದಾರೆ. ಈ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೊಮ್ಮಾಯಿ ಬೇರೆ ಕ್ಷೇತ್ರದಿಂದ ಸ್ಪರ್ಧೆಗಿಳಿಯುತ್ತಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಈ ಕ್ಷೇತ್ರದಲ್ಲಿ ಆರೋಗ್ಯ ಮತ್ತು ಶಿಕ್ಷಣ ರಂಗದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಹಿಂದೆಂದೂ ಆಗದಷ್ಟು ಅಭಿವೃದ್ಧಿ ಕೆಲಸಗಳು ಈ ಕ್ಷೇತ್ರದಲ್ಲಿ ಆಗಿವೆ. ಕ್ಷೇತ್ರದ ಜನರ ನಿರೀಕ್ಷೆಗೆ ತಕ್ಕಂತೆ ಎಲ್ಲ ಕೆಲಸಗಳನ್ನು ಮಾಡಿದ್ದೇನೆ. ಶೀಘ್ರದಲ್ಲಿ ಹಾವೇರಿ ಮೆಡಿಕಲ್ ಕಾಲೇಜು ಉದ್ಘಾಟಿಸಲಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com