ಚುನಾವಣೆ ಹೊತ್ತಲ್ಲಿ ಬಿಜೆಪಿ ಸರ್ಕಾರದ ಮೀಸಲಾತಿ ಅಸ್ತ್ರ: ರಾಜಕೀಯ ಪ್ರತ್ಯಸ್ತ್ರಕ್ಕೆ ಬಲಿಪಶು ಆಗ್ತಾರಾ ವಿಜಯೇಂದ್ರ?

ಯಡಿಯೂರಪ್ಪ ಸರಕಾರದಲ್ಲಿ ಇಲ್ಲದಿದ್ದರೂ ಎಸ್‌ಸಿ ಒಳಮೀಸಲಾತಿ ಘೋಷಣೆ ಹಾಗೂ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿಯನ್ನು ಸರಕಾರ ರದ್ದುಗೊಳಿಸಿರುವುದು ಅವರ ಬೆಂಬಲಿಗರಲ್ಲಿ ಆತಂಕ ಮೂಡಿಸಿದೆ.
ಬಿ.ವೈ ವಿಜಯೇಂದ್ರ
ಬಿ.ವೈ ವಿಜಯೇಂದ್ರ

ಶಿವಮೊಗ್ಗ: ಎಸ್‌ಸಿಗಳಿಗೆ ಒಳಮೀಸಲಾತಿ ಜಾರಿಗೊಳಿಸುವ ರಾಜ್ಯ ಸರ್ಕಾರದ ಕ್ರಮ ಮತ್ತು ಮುಸ್ಲಿಮರ ಕೋಟಾ ರದ್ದುಪಡಿಸಿದ ಬೆನ್ನಲ್ಲೇ ಬಂಜಾರ ಸಮುದಾಯದ ಆಕ್ರೋಶ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿ ವಿಜಯೇಂದ್ರ ಅವರ ರಾಜಕೀಯ ಭವಿಷ್ಯಕ್ಕೆ ಅಪಾಯ ತಂದೊಡ್ಡಬಹುದು ಎಂಬ ಮಾತು ಶಿವಮೊಗ್ಗ ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಮಾಜಿ ಸಿಎಂ ಯಡಿಯೂರಪ್ಪ ತಮ್ಮ ಮಗ ವಿಜಯೇಂದ್ರ ಅವರನ್ನು ಶಿಕಾರಿಪುರದಿಂದ ಕಣಕ್ಕಿಳಿಸಲು ಯತ್ನಿಸುತ್ತಿರುವ ಹೊತ್ತಿನಲ್ಲಿ ಇದು ನಡೆದಿದೆ.

ಇತ್ತೀಚಿನ ಮತದಾರರ ಪಟ್ಟಿಯ ಪ್ರಕಾರ, ಈ ಭಾಗದಲ್ಲಿ ಒಟ್ಟು ಮತದಾರರ ಸಂಖ್ಯೆ 1,95,371 ಇದೆ, ಜಾತಿವಾರು ಮತದಾರರ ಬಗ್ಗೆ ಅಧಿಕೃತ ಮಾಹಿತಿಯಿಲ್ಲದಿದ್ದರೂ, ಬಂಜಾರ ಸಮುದಾಯವು ಲಿಂಗಾಯತ ನಂತರ ಎರಡನೇ ಸ್ಥಾನದಲ್ಲಿದೆ.

ಬಂಜಾರ ಮತದಾರರು ಸುಮಾರು 30,000 ಆಗಿದ್ದರೆ, ಎಲ್ಲಾ ಉಪಜಾತಿಗಳು ಸೇರಿದಂತೆ ಲಿಂಗಾಯತರು 60,000 ಕ್ಕೂ ಹೆಚ್ಚಿದ್ದಾರೆ. ಮುಸ್ಲಿಮರ ಸಂಖ್ಯೆ 25,000 ಇದೆ. ಯಡಿಯೂರಪ್ಪ ಅವರಿಗೆ ಬಂಜಾರ ಸಮುದಾಯದ ಬೆಂಬಲವಿತ್ತು,  ಅವರ ಜಾತ್ಯತೀತ  ಇಮೇಜ್ ನಿಂದಾಗಿ ಮುಸ್ಲಿಮರು ಸಹ ಅವರನ್ನು ಬೆಂಬಲಿಸುತ್ತಿದ್ದರು.

ಯಡಿಯೂರಪ್ಪ ಅವರು ತಾಂಡಾ ಅಭಿವೃದ್ಧಿ ನಿಗಮ ಸ್ಥಾಪಿಸಿ ಬಂಜಾರ ಪ್ರದೇಶಗಳಿಗೆ ಮೂಲ ಸೌಕರ್ಯ ಕಲ್ಪಿಸಿದ್ದರು. ಸೂರಗೊಂಡನಕೊಪ್ಪದ ಬಂಜಾರ ಯಾತ್ರಾ ಕೇಂದ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿದ್ದರು.

ಯಡಿಯೂರಪ್ಪ ಸರಕಾರದಲ್ಲಿ ಇಲ್ಲದಿದ್ದರೂ ಎಸ್‌ಸಿ ಒಳಮೀಸಲಾತಿ ಘೋಷಣೆ ಹಾಗೂ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿಯನ್ನು ಸರಕಾರ ರದ್ದುಗೊಳಿಸಿರುವುದು ಅವರ ಬೆಂಬಲಿಗರಲ್ಲಿ ಆತಂಕ ಮೂಡಿಸಿದೆ. 1983 ರಿಂದ ಶಿಕಾರಿಪುರ ಯಡಿಯೂರಪ್ಪನವರ ಭದ್ರಕೋಟೆಯಾಗಿದೆ, ಅವರು ಮೊದಲ ಬಾರಿಗೆ ಸ್ಪರ್ಧಿಸಿ ಕೆ ಯಂಕಣ್ಣಪ್ಪ (ಕಾಂಗ್ರೆಸ್) ಅವರನ್ನು ಸೋಲಿಸಿದರು. 1999 ರಲ್ಲಿ ಕಾಂಗ್ರೆಸ್‌ನ ಮಹಾಲಿಂಗಪ್ಪ ಅವರನ್ನು ಸೋಲಿಸುವವರೆಗೂ ಅವರು ಕ್ಷೇತ್ರವನ್ನು ಉಳಿಸಿಕೊಂಡರು.

2014ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಅವರು, ಅದೇ ವರ್ಷ ನಡೆದ ಉಪಚುನಾವಣೆಯಲ್ಲಿ ಗೆದ್ದಿದ್ದ ತಮ್ಮ ಹಿರಿಯ ಮಗ ರಾಘವೇಂದ್ರ ಅವರಿಗಾಗಿ ಕ್ಷೇತ್ರ ತ್ಯಾಗ ಮಾಡಿದರು. ಯಡಿಯೂರಪ್ಪ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರದಿಂದ ಗೆದ್ದಿದ್ದರು.

ಇತ್ತೀಚಿಗೆ ನಡೆದ ಕಲ್ಲು ತೂರಾಟದ ಹಿಂದೆ ಬಿಜೆಪಿಯೊಳಗಿನ ಯಡಿಯೂರಪ್ಪನವರ ಪ್ರತಿಸ್ಪರ್ಧಿಗಳ ಕೈವಾಡವಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ವಿಜಯೇಂದ್ರ ಅವರನ್ನು ಸೋಲಿಸಲು ಯಡಿಯೂರಪ್ಪ ವಿರುದ್ಧ ಷಡ್ಯಂತ್ರ ರೂಪಿಸುತ್ತಿದೆ. ಕಾಂಗ್ರೆಸ್ ಹಿಂದಿನ ಚುನಾವಣೆಗಿಂತ ಭಿನ್ನವಾಗಿ ವಿಜಯೇಂದ್ರ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವಲ್ಲಿ ಯಶಸ್ವಿಯಾದರೆ ಸ್ಪರ್ಧೆ ರೋಚಕವಾಗಬಹುದು ಎಂಬ ಅಭಿಪ್ರಾಯವೂ ಇದೆ.   

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com