ಚುನಾವಣಾ ಅಖಾಡಕ್ಕೆ ನಿರ್ಮಾಪಕ ಕೆ ಮಂಜು: ಪದ್ಮನಾಭನಗರ ಕ್ಷೇತ್ರದಿಂದ ಸ್ಪರ್ಧೆ!

ರಾಜ್ಯ ರಾಜಕಾರಣಕ್ಕೆ ನಿರ್ಮಾಪಕ ಕೆ.ಮಂಜು ಎಂಟ್ರಿ ಕೊಡಲಿದ್ದಾರೆ. ಪದ್ಮನಾಭನಗರ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗುವ ಬಗ್ಗೆ  ಕೆ.ಮಂಜು ಮಾತನಾಡಿದ್ದಾರೆ.
ಕೆ. ಮಂಜು
ಕೆ. ಮಂಜು

ರಾಜ್ಯ ರಾಜಕಾರಣಕ್ಕೆ ನಿರ್ಮಾಪಕ ಕೆ.ಮಂಜು ಎಂಟ್ರಿ ಕೊಡಲಿದ್ದಾರೆ. ಪದ್ಮನಾಭನಗರ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗುವ ಬಗ್ಗೆ  ಕೆ.ಮಂಜು ಮಾತನಾಡಿದ್ದಾರೆ.

ಸ್ಯಾಂಡಲ್‌ವುಡ್  ಸಾಕಷ್ಟು ಸಿನಿಮಾಗಳಿಗೆ ಕೆ.ಮಂಜು ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕೆ.ಮಂಜು ಅವರ ಕೊಡುಗೆ ಅಪಾರ. ಇದೀಗ ರಾಜಕೀಯ  ಅಖಾಡಕ್ಕೆ ಇಳಿಯುವ ಬಗ್ಗೆ ತಿಳಿಸಿದ್ದಾರೆ.

ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಅವರ ಹೊಸ ಸಿನಿಮಾ 'ದಿಲ್‌ದಾರ್‌'ಗೆ ಮುಹೂರ್ತ ನೇರವೇರಿತು. ಈ ವೇಳೆ ಹಾಜರಿದ್ದ ಮಂಜುಗೆ ಒಂದು ಪ್ರಶ್ನೆ ಎದುರಾಯಿತು. 'ನಿಮ್ಮ ಪುತ್ರನಿಗೆ ಬೇರೆ ನಿರ್ಮಾಪಕರೇ ಹಣ ಹಾಕಿ ಸಿನಿಮಾ ಮಾಡುತ್ತಿದ್ದಾರೆ. ನೀವೇಕೆ ಸಿನಿಮಾ ಮಾಡುತ್ತಿಲ್ಲ' ಎಂದು ಪ್ರಶ್ನೆ ಮಾಡಲಾಯಿತು.

ಇದಕ್ಕೆ ಉತ್ತರಿಸಿದ ಕೆ ಮಂಜು, 'ನಾನು ಈ ಬಾರಿ ಚುನಾವಣೆಗೆ ನಿಲ್ಲಬೇಕೆಂದು ತೀರ್ಮಾನ ಮಾಡಿದ್ದೇನೆ. ಜನಸೇವೆ ಮಾಡಬೇಕೆಂಬ ಗುರಿ ಹೊಂದಿದ್ದೇನೆ. ಪದ್ಮನಾಭನಗರದಿಂದಲೇ ನಾನು ವಿಧಾನ ಸಭಾ ಚುನಾವಣೆಗೆ ಪ್ರವೇಶ ನೀಡಲಿದ್ದೇನೆ' ಎಂದು ಹೇಳಿದ್ದಾರೆ.

ನಮ್ಮ ನಾಯಕರ ಜೊತೆ ಮಾತುಕತೆ ಮಾಡುತ್ತಿದ್ದೇನೆ. ಒಂದೆರಡು ದಿನಗಳಲ್ಲಿ ಆ ಬಗ್ಗೆ ಅಧಿಕೃತ ಘೋಷಣೆ ಆಗಲಿದೆ. ಪದ್ಮನಾಭನಗರದಿಂದಲೇ ನಾನು ವಿಧಾನ ಸಭಾ ಚುನಾವಣೆಗೆ ನಿಲ್ಲುವುದು ಖಚಿತ. ಪದ್ಮನಾಭನಗರದಲ್ಲಿ ಸಾಕಷ್ಟು ಒಕ್ಕಲಿಗ ಮತಗಳಿವೆ. ಹಾಗೆಯೇ ಎಲ್ಲರೂ ನನಗೆ ಆಶೀರ್ವಾದ ಮಾಡಲಿದ್ದಾರೆ ಎಂದು ನಾನು ನಂಬಿದ್ದೇನೆ' ಎಂದು ಕೆ. ಮಂಜು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com