ಜೆಡಿಎಸ್ ಒಂದು ಕುಟುಂಬದ ಪ್ರೈವೇಟ್ ಕಂಪನಿ: ಪ್ರಧಾನಿ ಮೋದಿ

ಕಾಂಗ್ರೆಸ್ ಪಕ್ಷದ ನಿಜವಾದ ಬಿ ಟೀಂ ಜೆಡಿಎಸ್. ಅದೊಂದು ಕುಟುಂಬದ ಪ್ರೈವೇಟ್ ಲಿಮಿಟೆಡ್ ಪಕ್ಷವಾಗಿದ್ದು, ಕಾಂಗ್ರೆಸ್ ಜೊತೆ ಸೇರಿ ರಾಜ್ಯವನ್ನು ಲೂಟಿ ಮಾಡುವ ಕನಸು ಕಾಣುತ್ತಿದೆ ಎಂದು ಪ್ರಧಾನಮಂತ್ರಿ ನರೇದ್ರ ಮೋದಿ  ಜೆಡಿಎಸ್ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಬೇಲೂರು: ಮೇಲ್ನೋಟಕ್ಕೆ ಕಾಂಗ್ರೆಸ್ ಮತ್ತು ಜೆಡಿಎಶ್ ಬೇರೆ, ಬೇರೆ ಪಕ್ಷಗಳಂತೆ ಕಂಡರೂ ಮಾನಸಿಕವಾಗಿ ಒಂದೇ ಆಗಿವೆ. ಕಾಂಗ್ರೆಸ್ ಪಕ್ಷದ ನಿಜವಾದ ಬಿ ಟೀಂ ಜೆಡಿಎಸ್. ಅದೊಂದು ಕುಟುಂಬದ ಪ್ರೈವೇಟ್ ಲಿಮಿಟೆಡ್ ಪಕ್ಷವಾಗಿದ್ದು, ಕಾಂಗ್ರೆಸ್ ಜೊತೆ ಸೇರಿ ರಾಜ್ಯವನ್ನು ಲೂಟಿ ಮಾಡುವ ಕನಸು ಕಾಣುತ್ತಿದೆ ಎಂದು ಪ್ರಧಾನಮಂತ್ರಿ ನರೇದ್ರ ಮೋದಿ  ಜೆಡಿಎಸ್ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿದರು.

ಜೆಡಿಎಸ್ ಪ್ರಾಬಲ್ಯದ ಕೋಲಾರ, ಚನ್ನಪಟ್ಟಣ ಹಾಗೂ ಹಾಸನ ಜಿಲ್ಲೆಯ ಬೇಲೂರಿನಲ್ಲಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿಯವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಒಂದು ವಿಚಿತ್ರವಾದ ಹೋಲಿಕೆಯಿದೆ. ಕಾಂಗ್ರೆಸ್ ಪಕ್ಷ ದಿಲ್ಲಿಯ ಒಂದು ಕುಟುಂಬದ ಹಿಡಿತದಲ್ಲಿರುವ ಪಕ್ಷವಾದರೆ ಜೆಡಿಎಸ್ ಕರ್ನಾಟಕದ ಒಂದು ಕುಟುಂಬದ ಹಿಡಿತದಲ್ಲಿದೆ. ಜೆಡಿಎಸ್ ಒಂದು ಕುಟುಂಬದ ಪ್ರೈವೇಟ್ ಲಿಮಿಟೆಡ್ ಪಕ್ಷವಾಗಿದೆ. ಈ ಪಕ್ಷದ ಒಂದು ದೊಡ್ಡ ವ್ಯಕ್ತಿತ್ವ ಕೇವಲ ತಮ್ಮ ಕುಟುಂಬದ ಉನ್ನತಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಟಾಂಗ್ ನೀಡಿದರು.

ಜೆಡಿಎಸ್ ಗೆ ನೀವು ನೀಡಿದ ಪ್ರತಿಯೊಂದು ಮತ ಕಾಂಗ್ರೆಸ್ ಗೇ ಹೋಗುತ್ತದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಕೇವಲ ತೋರಿಕೆಗಾಗಿ ಜಗಳ ಮಾಡುತ್ತಿವೆ. 2018ರ ಚುನಾವಣೆಯಲ್ಲಿ ಇದನ್ನು ಗಮನಿಸಿರಬಹುದು. ಚುನಾವಣೆ ಫಲಿತಾಂಶ ಬರುವ ಮೊದಲೇ ಇವರು ಮೈತ್ರಿ ಮಾಡಿಕೊಂಡಿದ್ದರು. ಕರ್ನಾಟಕದ ಜನತೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ತಮ್ಮ ಭಾಗ್ಯ ಮಾರಿಕೊಳ್ಳಬಾರದು ಎಂದು ತಿಳಿಸಿದರು.

ದಶಕಗಳಿಂದ ನಡೆಯುತ್ತಿರುವ ಅಸ್ಥಿತ ಮೈತ್ರಿ ಸರಕಾರಗಳ ರಾಜನೀತಿಯನ್ನು ಕೊನೆಗಾಣಿಸುವ ಬಗ್ಗೆ ಈ ಬಾರಿ ಕರ್ನಾಟಕದ ಜನತೆ ನಿರ್ಧರಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಅಸ್ಥಿರತೆಗಳ ಪ್ರತೀಕವಾಗಿದೆ. ದೇಶದಲ್ಲಿ ಎಲ್ಲೆಲ್ಲಿ ಕಾಂಗ್ರೆಸ್ ಸರಕಾರ ಉಳಿದುಕೊಂಡಿಯೋ ಎಲ್ಲೆಲ್ಲಾ ಕಾಂಗ್ರೆಸ್ ನ ಮುಖಂಡರ ಒಳಜಗಳವೇ ಪ್ರಧಾನವಾಗಿ ಗಮನ ಸೆಳೆದಿದೆ. ರಾಜಸ್ಥಾನ ಮತ್ತು ಛತ್ತಿಸಗಡಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನೀವೇ ನೋಡುತ್ತಿದ್ದೀರಿ. ಅಲ್ಲಿನ ಜನರಿಗೆ ಈ ಬಗ್ಗೆ ಅಸಮಾಧಾನ ಇದೆ. ವಿಕಾಸ ಮರೀಚಿಕೆಯಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com