ಬೆಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿದ ಜೆಡಿಎಸ್; ಹಳೆಯ ಪಿಂಚಣಿ ಯೋಜನೆ ಅನುಷ್ಠಾನ, ಅಭಿವೃದ್ಧಿ ಭರವಸೆ

ಜೆಡಿಎಸ್ ಶನಿವಾರ ಬೆಂಗಳೂರಿಗೆ ಪ್ರತ್ಯೇಕ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಐಟಿ ಸಿಟಿಯ ಸರ್ವತೋಮುಖ ಪ್ರಗತಿಯ ಭರವಸೆ ನೀಡಿದೆ. ಪಕ್ಷವು ತನ್ನ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾದ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಅನ್ನು ಅನುಷ್ಠಾನಗೊಳಿಸುವುದಾಗಿ ಘೋಷಿಸಿತು.
ಜೆಡಿಎಸ್
ಜೆಡಿಎಸ್
Updated on

ಬೆಂಗಳೂರು: ಜೆಡಿಎಸ್ ಶನಿವಾರ ಬೆಂಗಳೂರಿಗೆ ಪ್ರತ್ಯೇಕ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಐಟಿ ಸಿಟಿಯ ಸರ್ವತೋಮುಖ ಪ್ರಗತಿಯ ಭರವಸೆ ನೀಡಿದೆ. ಪಕ್ಷವು ತನ್ನ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾದ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಅನ್ನು ಅನುಷ್ಠಾನಗೊಳಿಸುವುದಾಗಿ ಘೋಷಿಸಿತು.

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಪದ್ನನಾಭನಗರದಲ್ಲಿರುವ ತಮ್ಮ ನಿವಾಸದಲ್ಲಿ ಹಿರಿಯ ನಾಯಕರ ಸಮ್ಮುಖದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದರು.

'ನಗರದ ಸರ್ವಾಂಗೀಣ ಅಭಿವೃದ್ಧಿಗೆ ಪಕ್ಷ ಎಂಟು ಭರವಸೆಗಳನ್ನು ನೀಡಿದೆ. ಇದು ಬೆಂಗಳೂರಿನಲ್ಲಿ ಸಾಮಾಜಿಕ ಭದ್ರತೆ ಮತ್ತು ಆರೋಗ್ಯ ವ್ಯವಸ್ಥೆಯ ಬಗ್ಗೆ ಹೇಳಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಡಳಿತ ಸುಧಾರಣೆ; ಶಿಕ್ಷಣ; ಆರೋಗ್ಯ; ಉತ್ತಮ ಸಾರಿಗೆ ವ್ಯವಸ್ಥೆ; ಬೆಂಗಳೂರಿನಲ್ಲಿ ಹಸಿರು ಮತ್ತು ಅರಣ್ಯ; ಕಣಿವೆಗಳ ಪುನರುಜ್ಜೀವನ, ಕೆರೆಗಳು ಮತ್ತು ಕಾಲುವೆಗಳ ಸಂರಕ್ಷಣೆ ಮತ್ತು ಚಲ್ಲಘಟ್ಟ ಕಣಿವೆ ನೀರಾವರಿ ಯೋಜನೆಯ ಆಧುನೀಕರಣದ ಭರವಸೆ ನೀಡಿದೆ.

10,000ಕ್ಕಿಂತ ಕಡಿಮೆ ವೇತನ ಪಡೆಯುತ್ತಿರುವ ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಸಹಾಯಧನ ನೀಡುವುದಾಗಿ ಪಕ್ಷ ಭರವಸೆ ನೀಡಿದೆ. ನೋಂದಾಯಿತ ಆಟೋ ಚಾಲಕರು ಮತ್ತು ಭದ್ರತಾ ಸಿಬ್ಬಂದಿಗೆ 2,000 ರೂ. ಭತ್ಯೆ. ಬೆಂಗಳೂರಿನ ಜನನಿಬಿಡ ಸ್ಥಳಗಳಲ್ಲಿ 1,100 ಆಧುನಿಕ ಮಕ್ಕಳ ಮತ್ತು ವಯೋವೃದ್ಧ ಸ್ನೇಹಿ ಶೌಚಾಲಯ ನಿರ್ಮಿಸುವುದಾಗಿ ಪಕ್ಷವು ಭರವಸೆ ನೀಡಿದೆ.

ಬಿಬಿಎಂಪಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ ಚುನಾವಣೆ ನಡೆಸುವುದಾಗಿಯೂ, ಬಿ-ಖಾತಾದಲ್ಲಿರುವ ಆರು ಲಕ್ಷ ಆಸ್ತಿಗಳನ್ನು ದಂಡ ವಿಧಿಸುವ ಮೂಲಕ ಎ-ಖಾತಾಗೆ ಪರಿವರ್ತಿಸುವುದಾಗಿಯೂ ಜೆಡಿಎಸ್ ಭರವಸೆ ನೀಡಿದೆ. ಪ್ರವಾಹದ ಪರಿಣಾಮಗಳನ್ನು ಕಡಿಮೆ ಮಾಡಲು ಬೆಂಗಳೂರು ನಗರದ ಪುನರ್ನಿರ್ಮಾಣ ಮಾಡುವುದಾಗಿಯೂ ಹೇಳಿದೆ.

ಪಕ್ಷವು ಚೆನ್ನೈ ಮತ್ತು ಮುಂಬೈ ನಗರಗಳ ಮಾರ್ಗದಲ್ಲಿ ಸ್ಥಳೀಯ ಪ್ರಯಾಣಿಕರ ರೈಲ್ವೆ ಜಾಲವನ್ನು ಮತ್ತು ಮೆಟ್ರೋ ಸೇವೆಗಳ ವಿಸ್ತರಣೆಯನ್ನು ಭರವಸೆ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com