ವಿಧಾನಸಭೆ ಚುನಾವಣೆ: ಮೈಕ್‌ಗಳು ಆಫ್ ಆಗುವ ಮುನ್ನ ಪ್ರಚಾರದ ಅಬ್ಬರ ತಾರಕಕ್ಕೆ

ಕರ್ನಾಟಕ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಸೋಮವಾರ ಸಂಜೆ ತೆರೆ ಬೀಳಲಿದ್ದು, ಮೈಕ್ ಗಳು ಆಫ್ ಆಗುವ ಮುನ್ನ ಪ್ರಮುಖ ಮೂರು ರಾಜಕೀಯ ಪಕ್ಷಗಳ ನಾಯಕರು ಭರ್ಜರಿ ಪ್ರಚಾರ ಮಾಡಲು ನಿರ್ಧರಿಸಿದ್ದಾರೆ.
ಸೋನಿಯಾ ಗಾಂಧಿ - ಪ್ರಧಾನಿ ಮೋದಿ
ಸೋನಿಯಾ ಗಾಂಧಿ - ಪ್ರಧಾನಿ ಮೋದಿ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಸೋಮವಾರ ಸಂಜೆ ತೆರೆ ಬೀಳಲಿದ್ದು, ಮೈಕ್ ಗಳು ಆಫ್ ಆಗುವ ಮುನ್ನ ಪ್ರಮುಖ ಮೂರು ರಾಜಕೀಯ ಪಕ್ಷಗಳ ನಾಯಕರು ಭರ್ಜರಿ ಪ್ರಚಾರ ಮಾಡಲು ನಿರ್ಧರಿಸಿದ್ದಾರೆ.

ನಾಳೆ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯವಾಗಲಿದ್ದು, ಮಂಗಳವಾರ ಮನೆಮನೆ ಪ್ರಚಾರ ನಡೆಸಲಿದ್ದಾರೆ. ಬುಧವಾರದ ಮತದಾನದಕ್ಕೂ ಮುನ್ನ ಮತ್ತು ಮತದಾರರು ಮತಗಟ್ಟೆಗಳಿಗೆ ತೆರಳುವವರೆಗೂ ಮತದಾರರ ಓಲೈಕೆ ಪ್ರಯತ್ನಗಳು ಮತ್ತು ಬ್ಯಾಕ್‌ರೂಮ್ ಕಸರತ್ತುಗಳು ನಡೆಯಲಿವೆ.

ಕರ್ನಾಟಕ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಗೆ ಅತ್ಯಂತ ನಿರ್ಣಾಯಕವಾಗಿದ್ದು, ಬಿಜೆಪಿ ಸಹ ಮರಳಿ ಅಧಿಕಾರಕ್ಕೆ ಬರಲು ಎಲ್ಲಾ ರೀತಿಯ ಪ್ರತಯತ್ನಗಳನ್ನು ಮಾಡುತ್ತಿದೆ. ಇನ್ನು ಜೆಡಿಎಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿದೆ.

ಚುನಾವಣೆಯ ಕೊನೆಯ ವಾರದಲ್ಲಿ ಅಬ್ಬರದ ಪ್ರಚಾರ ಮಾಡುತ್ತಿರುವ ಬಿಜೆಪಿಯು, ಚುನಾವಣಾ ಪ್ರಚಾರದ ಅಂತಿಮ ಹಂತಕ್ಕೆ ಬರುತ್ತಿರುವಂತೆ ತೋರುತ್ತಿದೆ. ಮೇ 29 ರಂದು ಪ್ರಾರಂಭವಾದ ಪ್ರಧಾನಿ ನರೇಂದ್ರ ಮೋದಿಯವರ ರ್ಯಾಲಿಗಳು ಮತ್ತು ರೋಡ್‌ಶೋಗಳು ತಮ್ಮ ಕಾರ್ಯಕರ್ತರ ಹುರುಪು-ಹುಮ್ಮಸ್ಸು  ಹೆಚ್ಚಿಸಿದೆ ಮತ್ತು ಇದು ಪಕ್ಷದ ಗೆಲುವಿಗೆ ಸಹಾಯ ಮಾಡುತ್ತದೆ ಎಂದು ಕೇಸರಿ ನಾಯಕರು ನಂಬಿದ್ದಾರೆ.

ಶನಿವಾರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 26 ಕಿಮೀ ರೋಡ್‌ಶೋ ನಡೆಸಿದ ಮೋದಿ, ಭಾನುವಾರ ಬೆಳಗ್ಗೆ ಮತ್ತೆ ರೋಡ್ ಶೋ ನಡೆಸುತ್ತಿದ್ದಾರೆ. ಇದು 28 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಂಗಳೂರಿನಲ್ಲಿ ಹೆಚ್ಚು ಸ್ಥಾನಗಳನ್ನು ಪಡೆಯುವ ಬಿಜೆಪಿಯ ಕಾರ್ಯತಂತ್ರದ ನಿರ್ಣಾಯಕ ಭಾಗವಾಗಿದೆ.

ಈ ಬಾರಿ ಕೇಸರಿ ಪಕ್ಷ ಪ್ರಧಾನಿ ಮೋದಿ ಅವರನ್ನು ಹೆಚ್ಚು ನೆಚ್ಚಿಕೊಂಡಿದ್ದು, ಇಲ್ಲಿಯವರೆಗೆ 16 ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ ಮತ್ತು ಕರ್ನಾಟಕದಲ್ಲಿ ತಮ್ಮ ಪ್ರಚಾರವನ್ನು ಮುಗಿಸುವ ಮೊದಲು ಭಾನುವಾರ ಮತ್ತೆರಡು ಭಾಷಣ ಮಾಡಲಿದ್ದಾರೆ. ಮೋದಿಯವರ ಜನಪ್ರಿಯತೆಯ ಹೊರತಾಗಿ, ಪಕ್ಷವು ತನ್ನ ಸಾಮಾಜಿಕ ನ್ಯಾಯ, SC, ST ಮತ್ತು OBC ಗಳಿಗೆ ಮೀಸಲಾತಿ ಹೆಚ್ಚಳ, ಅಧಿಕಾರ-ವಿರೋಧಿ ಅಲೆ ಎದುರಿಸಲು ಹೊಸ ಮುಖಗಳಿಗೆ ಟಿಕೆಟ್ ಮತ್ತು "ಡಬಲ್-ಇಂಜಿನ್" ಸರ್ಕಾರದ ಪ್ರಯೋಜನಗಳ ಮೇಲೆ ಒತ್ತು ನೀಡುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com