ಕಾರವಾರ: ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಪರ ಜೆಡಿಎಸ್ ಮುಖಂಡ ಆನಂದ್ ಅಸ್ನೋಟಿಕರ್ ಪ್ರಚಾರ!

ಕಾರವಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಪರ ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಆನಂದ್ ಅಸ್ನೋಟಿಕರ್ ಪ್ರಚಾರ ನಡೆಸುತ್ತಿರುವುದು ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹವನ್ನು ಹೆಚ್ಚಿಸಿದೆ.
ಸತೀಶ್ ಸೈಲ್ ಮತ್ತು ಆನಂದ್ ಅಸ್ನೋಟಿಕರ್
ಸತೀಶ್ ಸೈಲ್ ಮತ್ತು ಆನಂದ್ ಅಸ್ನೋಟಿಕರ್

ಕಾರವಾರ: ಕಾರವಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಪರ ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಆನಂದ್ ಅಸ್ನೋಟಿಕರ್ ಪ್ರಚಾರ ನಡೆಸುತ್ತಿರುವುದು ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹವನ್ನು ಹೆಚ್ಚಿಸಿದೆ.

ಜೆಡಿಎಸ್ ನಾಯಕ ಅಸ್ನೋಟಿಕರ್ ತಮ್ಮ ತಾಯಿಯ ಅನಾರೋಗ್ಯದ ಕಾರಣದಿಂದ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದು ನಂಬಲಾಗಿತ್ತು. ಆದರೆ, ಎರಡು ಬಾರಿ ಶಾಸಕರಾಗಿದ್ದ ಅವರು ಇದೀಗ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ.

ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ಇಬ್ಬರು ನಾಯಕರು ಈಗ ಕೈಜೋಡಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಕೇಸರಿ ಮತ್ತು ಹಸಿರು ಶಾಲು ಧರಿಸಿರುವ ಅಸ್ನೋಟಿಕರ್ ಗ್ರಾಮೀಣ ಪ್ರದೇಶದ ಮತದಾರರ ಬಳಿ ಮತಯಾಚಿಸಿದರು.

ನಾನು ನನ್ನ ಬೆಂಬಲಿಗರೊಂದಿಗೆ ಸಮಾಲೋಚನೆ ನಡೆಸಿದ್ದೇನೆ, ಅವರು ರಾಷ್ಟ್ರೀಯ ಪಕ್ಷದೊಂದಿಗೆ ಹೋಗುವಂತೆ ನನಗೆ ಸಲಹೆ ನೀಡಿದ್ದಾರೆ. ಬಿಜೆಪಿ ಕೂಡ ನನಗೆ ಪರವಾಗಿಲ್ಲ, ಆದರೆ ನಾನು ಈ ಸ್ಥಳೀಯ ಶಾಸಕಿಯನ್ನು ಬೆಂಬಲಿಸುವುದಿಲ್ಲಎಂದು ಅವರು ಈ ಹಿಂದೆ ಹೇಳಿಕೆ ನೀಡಿದ್ದರು.

ಆದರೆ ಶಾಸಕಿ ರುಪಾಲಿ ನಾಯ್ಕ್  ಜನರನ್ನು ನಿರಾಶೆಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಕೊನೆಯ  ಗಳಿಗೆಯಲ್ಲಿ ಚುನಾವಣಾ ಕಣದಿಂದ ದೂರವಿರುವುದಾಗಿ ಘೋಷಿಸಿದರು. ಮತ್ತು ಶಾಸಕಿ ರುಪಾಲಿ ವಿರುದ್ಧ ಹಲವು ಆರೋಪ ಮಾಡಿದ್ದರು,

ಅವರು ಅತ್ಯಂತ ಭ್ರಷ್ಟ ಶಾಸಕಿಯಾಗಿದ್ದಾರೆ, ಅವರ ಭ್ರಷ್ಟಾಚಾರಕ್ಕೆ ಮಿತಿಯೇ ಇಲ್ಲ, ಗುತ್ತಿಗೆದಾರರಿಂದ ಕಮಿಷನ್ ಆರೋಪಗಳಿವೆ, ಕ್ಷೇತ್ರಕ್ಕೆ ಅವರು ಏನೂ ಕೊಡುಗೆ ನೀಡಿಲ್ಲ ಎಂದು ಅವರು ಆಗ ಹೇಳಿದ್ದರು. ರಾಜಕೀಯ ಲಾಭಕ್ಕಾಗಿ ರೂಪಾಲಿ ನಾಯಕ್ ಅವರನ್ನು ಸೋಲಿಸಲು ಅವರು ಬಯಸಿದ್ದರು ಎಂಬ ಆರೋಪಗಳು ಅಸ್ನೋಟಿಕರ್ ಮೇಲೆ ಇದ್ದವು,  ರುಪಾಲಿ  ಸೋಲು ಅವರನ್ನು ಇಲ್ಲಿ ಬಿಜೆಪಿಯ ಮುಂದಿನ ಅಭ್ಯರ್ಥಿಯನ್ನಾಗಿ ಮಾಡುತ್ತದೆ ಎಂಬ ಊಹಾಪೋಹಗಳು ಹರಿದಾಡಿದವು.

ಅಸ್ನೋಟಿಕರ್ ಅವರ ನಡೆಯನ್ನು ಕಾಂಗ್ರೆಸ್ ಅಭ್ಯರ್ಥಿ ಸೈಲ್ ಸ್ವಾಗತಿಸಿದ್ದಾರೆ. ಕಳೆದ ಬಾರಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ಅವರಿಗೆ ಸಹಾಯ ಮಾಡಿದ್ದೆ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಅವರ ಹೆಸರನ್ನು ಶಿಫಾರಸು ಮಾಡಿದ್ದೆ, ಈಗ ನನ್ನ ಬೆಂಬಲಕ್ಕೆ ನಿಂತಿದ್ದಾರೆ ಎಂದು ಹೇಳಿದ್ದಾರೆ.

ಈಗಾಗಲೇ ಅಂಕೋಲಾ, ಕಾರವಾರ, ಸದಾಶಿವಗಡ, ಅಮದಳ್ಳಿ, ಅವರ್ಸಾ ಸೇರಿದಂತೆ ನಾನಾ ಕಡೆ ಜೆಡಿಎಸ್ ಮುಖಂಡರು ಹಾಗೂ ಇತರರು ನನ್ನ ಪರ ಪ್ರಚಾರ ನಡೆಸಿದ್ದಾರೆ. ಇದರಿಂದ ಸಾಕಷ್ಟು ಬದಲಾವಣೆ ಆಗಲಿದೆ, ಸುಲಭವಾಗಿ ಗೆಲ್ಲುತ್ತೇನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com