ಉತ್ತರ ಕನ್ನಡ: ವಿಧಾನಸಭೆ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದ ಆನಂದ್ ಆಸ್ನೋಟಿಕರ್!
ಕಾರವಾರ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಜೆಡಿಎಸ್ ಮುಖಂಡ ಆನಂದ್ ಅಸ್ನೋಟಿಕರ್ ಹೇಳುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಅವರು,"ಚುನಾವಣೆಗೆ ಸಿದ್ಧರಾಗಲು ದೆಹಲಿ ಮೂಲದ ನಾಯಕರು ನನಗೆ ಹೇಳಿದರು. ನಾನು ಸಮೀಕ್ಷೆಯನ್ನು ನಡೆಸಿದ್ದೇನೆ, ನನ್ನ ತಾಯಿಯ ಆರೋಗ್ಯವು ನಿರಂತರವಾಗಿ ಹದಗೆಡುತ್ತಿರುವ ಕಾರಣ, ನಾನು ರಾಷ್ಟ್ರೀಯ ಪಕ್ಷದಿಂದ ಅಥವಾ ಸ್ವತಂತ್ರವಾಗಿ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ ಇತ್ತೀಚೆಗಷ್ಟೇ ಜೆಡಿಎಸ್ ಸೇರಿದ ಕಾಂಗ್ರೆಸ್ ನಾಯಕಿ ಚೈತ್ರಾ ಕೋಟಾರಕರ ಕಾರವಾರದಿಂದ ಸ್ಪರ್ಧಿಸುತ್ತಿದ್ದಾರೆ. ಚುನಾವಣೆಯಲ್ಲಿ ಚೈತ್ರಾ ಅವರ ಪರ ಪ್ರಚಾರ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಆಸ್ನೋಟಿಕರ್, ಅವರು ನನಗೆ ಆತ್ಮೀಯರಾಗಿದ್ದಾರೆ, ನನ್ನ ಜೊತೆ ಉತ್ತಮ ಸಂಬಂಧ ಹೊಂದಿರುವ ಅವರು ನನ್ನ ಹಿತೈಷಿ ಎಂದಿದ್ದಾರೆ.
ಹೀಗಾಗಿ ಅವರು ನನ್ನ ಸಹಾಯಕ್ಕೆ ಮನವಿ ಮಾಡಿದರೇ ಖಂಡಿತವಾಗಿ ಅವರ ಪರ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ. ಗಣನೀಯ ಸಂಖ್ಯೆಯ ಮತದಾರರನ್ನು ಹೊಂದಿರುವ ಪಡ್ತಿ ಸಮುದಾಯಕ್ಕೆ ಸೇರಿದ ಚೈತ್ರಾ ಕೋಟಾರಕರ್ ಅವರು ಏಪ್ರಿಲ್ 18 ರಂದು ನಾಮಪತ್ರ ಸಲ್ಲಿಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ