ಲೋಕಸಭೆ ಚುನಾವಣೆ: ಕರಾವಳಿ ಕರ್ನಾಟಕದಲ್ಲಿ ಹಿಂದುತ್ವ ಶಕ್ತಿಗಳ ಪ್ರಾಬಲ್ಯ ಕುಗ್ಗಿಸಲು ಹರಿಪ್ರಸಾದ್ ಹೆಗಲಿಗೆ ಜಿಲ್ಲಾ ಉಸ್ತುವಾರಿ?

ಶಾಸಕ ಯು.ಟಿ.ಖಾದರ್ ವಿಧಾನಸಭಾಧ್ಯಕ್ಷರಾಗಿ ಆಯ್ಕೆಯಾದ ನಂತರ, ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರಿಗೆ ಕರಾವಳಿ ಪ್ರದೇಶದಿಂದ ಸಚಿವ ಸ್ಥಾನ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಬಿ.ಕೆ ಹರಿಪ್ರಸಾದ್
ಬಿ.ಕೆ ಹರಿಪ್ರಸಾದ್
Updated on

ಮಂಗಳೂರು: ಶಾಸಕ ಯು.ಟಿ.ಖಾದರ್ ವಿಧಾನಸಭಾಧ್ಯಕ್ಷರಾಗಿ ಆಯ್ಕೆಯಾದ ನಂತರ, ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರಿಗೆ ಕರಾವಳಿ ಪ್ರದೇಶದಿಂದ ಸಚಿವ ಸ್ಥಾನ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

68 ವರ್ಷ  ವಯಸ್ಸಿನ ಹರಿಪ್ರಸಾದ್ ಪ್ರಾಬಲ್ಯ ಹೊಂದಿರುವ ಬಿಲ್ಲವ ಸಮುದಾಯದಿಂದ ಬಂದವರು. ಹಿರಿಯ ಕಾಂಗ್ರೆಸ್ ನಾಯಕ ಬಿಲ್ಲವರೂ ಆದ ಬಿ ಜನಾರ್ದನ ಪೂಜಾರಿ ಅವರು ರಾಜಕೀಯದಿಂದ ಹಿಂದೆ ಸರಿದ ನಂತರ, ಆ ಪ್ರದೇಶದಲ್ಲಿ ಬಲ ತುಂಬಲು ಯಾರೂ ಇರಲಿಲ್ಲ. ಬಿಜೆಪಿ ಮತ್ತು ಹಿಂದುತ್ವ ಶಕ್ತಿಗಳ ಬಲವನ್ನು ತನ್ನ ಭದ್ರಕೋಟೆಯಲ್ಲಿ ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿರುವ ಹರಿಪ್ರಸಾದ್‌ಗೆ ಉಸ್ತುವಾರಿ ನೀಡಲು ಇದು ಸರಿಯಾದ ಸಮಯ ಎಂದು ಪಕ್ಷದ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಹರಿಪ್ರಸಾದ್‌ಗೆ  ಅಧಿಕಾರ ನೀಡುವುದನ್ನು ಬಿಟ್ಟು ಕಾಂಗ್ರೆಸ್ ಗೆ ಬೇರೆ ದಾರಿಯಿಲ್ಲ ಎಂದು ಮೂಲಗಳು ತಿಳಿಸಿವೆ. ಜಿಲ್ಲೆಯಲ್ಲಿ ಪಕ್ಷದ ಕಳಪೆ ಪ್ರದರ್ಶನದ ನಂತರ, ಜಿಲ್ಲೆಯಲ್ಲಿ ಪಕ್ಷವನ್ನು ಮುನ್ನಡೆಸಲು ಬೇರೆ ಯಾರೂ ಕಾಂಗ್ರೆಸ್ ನಾಯಕರಿಲ್ಲ.

ಕಳೆದ ಹಲವು ವರ್ಷಗಳಿಂದ ದಕ್ಷಿಣ ಕನ್ನಡದಲ್ಲಿ ಸರ್ಕಾರ ಮತ್ತು ಪಕ್ಷದಲ್ಲಿ ಉತ್ತಮ ಹುದ್ದೆಗಳನ್ನು ಅಲಂಕರಿಸಿದ್ದ ಮಾಜಿ ಸಚಿವರಾದ ಬಿ.ರಮಾನಾಥ್ ರೈ ಮತ್ತು ಖಾದರ್ ಅವರ ಕಾರಣದಿಂದ ಪಕ್ಷವು ಬಂಟ್ಸ್ ಮತ್ತು ಮುಸ್ಲಿಮರ ಹಿಡಿತದಲ್ಲಿದೆ. ಇದು ಒಂದು ರೀತಿಯಲ್ಲಿ ಬಿಲ್ಲವರನ್ನು ಕಾಂಗ್ರೆಸ್‌ನಿಂದ ದೂರವಿಟ್ಟಿತು ಮತ್ತು ಅವರು ಹೀಗಾಗಿ ಅವರು ಬಿಜೆಪಿಗೆ ಪ್ರಮುಖ ಮತಬ್ಯಾಂಕ್ ಆದರು.

ಹರಿಪ್ರಸಾದ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿಯನ್ನಾಗಿ ಮಾಡುವ ಮೂಲಕ ಪಕ್ಷವು ಬಿಲ್ಲವರನ್ನು ಮರಳಿ ಸೆಳೆಯಬಹುದು ಎಂದು ಹಲವರು ಭಾವಿಸಿದ್ದಾರೆ. ಇದು 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕಠಿಣ ಹೋರಾಟ ನೀಡಲು ಕಾಂಗ್ರೆಸ್ ಗೆ ನೆರವಾಗಲಿದೆ.

2019 ರಲ್ಲಿ, ಜನಾರ್ದನ ಪೂಜಾರಿ ಅವರ ಸತತ ಸೋಲಿನ ನಂತರ, ಪಕ್ಷವು ಬಂಟ್ ಸಮುದಾಯದ ಮಿಥುನ್ ರೈ ಅವರನ್ನು ಕಣಕ್ಕಿಳಿಸಿತು, ಆದರೆ ಅವರು 2.73 ಲಕ್ಷ ಮತಗಳ ಅಂತರದಿಂದ ಸೋತರು. ಬಂಟ್ ಪ್ರಯೋಗ ವಿಫಲವಾದ ಕಾರಣ, ಪಕ್ಷವು ಪ್ರಬಲ ಪರ್ಯಾಯ ನಾಯಕನನ್ನು ಹುಡುಕುವ ಅನಿವಾರ್ಯತೆಗೆ ಸಿಲುಕಿತು.

ಹರಿಪ್ರಸಾದ್ ಉತ್ತಮ ಆಯ್ಕೆಯಾಗಬಹುದು ಎಂದು ಮೂಲಗಳು ತಿಳಿಸಿವೆ. ಆದರೆ ಅದಕ್ಕೂ ಮುನ್ನ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಅವರನ್ನು ಸಚಿವರನ್ನಾಗಿಸಬೇಕು. ಭೂಸುಧಾರಣಾ ಕಾಯ್ದೆಯಂತಹ ಕಾಂಗ್ರೆಸ್ ಸರ್ಕಾರದ ಮಹತ್ವದ ನಿರ್ಧಾರಗಳನ್ನು ಜನರಿಗೆ ತಲುಪಿಸುವ ಮೂಲಕ ಅವರು ಮತದಾರರೊಂದಿಗೆ, ವಿಶೇಷವಾಗಿ ಒಬಿಸಿ ಮತ್ತು ದಲಿತ ಸಮುದಾಯಗಳೊಂದಿಗೆ ಉತ್ತಮವಾಗಿ ಸಂಪರ್ಕ ಹೊಂದಿದ್ದಾರೆ, ಅದರಲ್ಲಿ ಕರಾವಳಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ಇದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com