ಜೆಡಿಎಸ್ ನಿಂದ ದೂರ ಸರಿದು ಬಿಜೆಪಿ ಪರ ಒಕ್ಕಲಿಗ ಸಮುದಾಯಗಳು ಒಲವು!

ಒಂದು ಕಾಲದಲ್ಲಿ ಜೆಡಿಎಸ್‌ಗೆ ಮೀಸಲಾಗಿದ್ದ ರಾಜ್ಯದ ಒಕ್ಕಲಿಗ ಸಮುದಾಯದ ಮತಗಳು ಈಗ ದೂರ ಸರಿಯುತ್ತಿವೆ. ಈ ಬಾರಿಯ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಮತಗಳಲ್ಲಿ ಒಂದಷ್ಟು ಮತಗಳು ಕಾಂಗ್ರೆಸ್ ಪಾಲಾದರೆ ಮತ್ತೊಂದಷ್ಟು ಮತಗಳು ಬಿಜೆಪಿಗೆ ಹೋಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಒಂದು ಕಾಲದಲ್ಲಿ ಜೆಡಿಎಸ್‌ಗೆ ಮೀಸಲಾಗಿದ್ದ ರಾಜ್ಯದ ಒಕ್ಕಲಿಗ ಸಮುದಾಯದ ಮತಗಳು ಈಗ ದೂರ ಸರಿಯುತ್ತಿವೆ. ಈ ಬಾರಿಯ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಮತಗಳಲ್ಲಿ ಒಂದಷ್ಟು ಮತಗಳು ಕಾಂಗ್ರೆಸ್ ಪಾಲಾದರೆ ಮತ್ತೊಂದಷ್ಟು ಮತಗಳು ಬಿಜೆಪಿಗೆ ಹೋಗಿದೆ. 

'ಜೆಡಿಎಸ್ ನ ಒಕ್ಕಲಿಗ ಮತ ಕರಗುತ್ತಿದೆ. ಒಕ್ಕಲಿಗ ಸಮುದಾಯದಿಂದ ಶೇ 15ರಷ್ಟು ಮತ ಪಡೆದರೆ ಮತ ಹಂಚಿಕೆಯಲ್ಲಿ ಶೇ 50ಕ್ಕಿಂತ ಹೆಚ್ಚು ಮತಗಳು ನಮ್ಮ ಪಾಲಾಗುತ್ತವೆ ಎಂದು ಮಾಜಿ ಡಿಸಿಎಂ ಹಾಗೂ ಮಲ್ಲೇಶ್ವರಂ ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಹೇಳುತ್ತಾರೆ. ಜೆಡಿಎಸ್ ಗೆ ಒಕ್ಕಲಿಗರ ಬೆಂಬಲ ಕಡಿಮೆಯಾಗುತ್ತಿದೆ ಹೊರತು ಒಕ್ಕಲಿಗ ಮತಗಳನ್ನು ಗಳಿಸಿರುವ ಬಿಜೆಪಿಗೆ ಅಲ್ಲ ಎನ್ನುತ್ತಾರೆ ಅವರು. ಸುಮಾರು ಶೇ.15ರಷ್ಟು ಜೆಡಿಎಸ್ ಮತಗಳು ನಮಗೆ ಸಿಕ್ಕಿವೆ. ನಾವು ಪರಿಣಾಮಕಾರಿಯಾಗಿ ಕೆಲಸ ಮಾಡಿದರೆ, ನಾವು ನಮ್ಮ ಮತ ಪಾಲನ್ನು ಶೇಕಡಾ 50ಕ್ಕೆ ಹೆಚ್ಚಿಸಬಹುದು ಎನ್ನುತ್ತಾರೆ. 

ಅಂಕಿಅಂಶಗಳನ್ನು ಪರಿಶೀಲಿಸಿದ ಟಿಎನ್ ಐಇ, 2018 ರಲ್ಲಿ ಹಳೆಯ ಮೈಸೂರಿನಲ್ಲಿ ಒಕ್ಕಲಿಗ ಹೃದಯಭಾಗದಲ್ಲಿ ಪಡೆದ ಮತಗಳಿಗೆ ಹೋಲಿಸಿದರೆ 2023 ರಲ್ಲಿ ಬಿಜೆಪಿಯ ಮತ ಹಂಚಿಕೆ ಸಂಖ್ಯೆಗಳು ಭಾರೀ ಏರಿಕೆ ಕಂಡಿದೆ. ಉದಾಹರಣೆಗೆ, ಮಂಡ್ಯ ಜಿಲ್ಲೆಯಲ್ಲಿ ಮತಗಳು 85,714 ರಿಂದ 1,79,469 ಕ್ಕೆ ಜಿಗಿದಿವೆ. ಕ್ಷೇತ್ರವಾರು, ಮದ್ದೂರಿನಲ್ಲಿ ಅತಿದೊಡ್ಡ ಹೆಚ್ಚಳವಾಗಿದೆ. ಅಲ್ಲಿ ಮತಗಳು 4,159 ರಿಂದ 28,996 ಕ್ಕೆ ಏರಿದೆ. ಅಂದರೆ ಏಳು ಪಟ್ಟು ಹೆಚ್ಚಳವಾಗಿದೆ. ಶ್ರೀರಂಗಪಟ್ಟಣ ನಾಲ್ಕು ಪಟ್ಟು ಏರಿಕೆ ಕಂಡಿದೆ -- 11,326 ರಿಂದ 42,306 ಕ್ಕೆ. ಕೆ.ಆರ್.ಪೇಟೆಯಲ್ಲಿ 9,819 ರಿಂದ 38,151 ಕ್ಕೆ ಮತಗಳು ಏರಿಕೆಯಾಗಿ ಮತ್ತೆ ನಾಲ್ಕು ಪಟ್ಟು ಅಧಿಕವಾಗಿದೆ. ಇದುವರೆಗೆ ಚುನಾವಣೆ ನಂತರ ಬಿಜೆಪಿ ಠೇವಣಿ ಕಳೆದುಕೊಂಡರೂ ಅಚ್ಚರಿಯಾಗುತ್ತಿರಲಿಲ್ಲ.

ಸಿಎಂ ಸಿದ್ದರಾಮಯ್ಯನವರ ವರುಣಾ ಕ್ಷೇತ್ರದಲ್ಲಿ ಬಿಜೆಪಿ ಮತಗಳು 37,819 ರಿಂದ 73,653ಕ್ಕೆ ದ್ವಿಗುಣಗೊಂಡಿದೆ. ತುಮಕೂರಿನ ಮಧುಗಿರಿಯಲ್ಲಿ ಬಿಜೆಪಿಯ ಮತಗಳು 2,911 ರಿಂದ 15,612 ಕ್ಕೆ ಏರಿದೆ - ಐದು ಪಟ್ಟು ಹೆಚ್ಚಳವಾಗಿದೆ.  ಪರಮೇಶ್ವರ ಸ್ಪರ್ಧಿಸಿದ್ದ ಕೊರಟಗೆರೆಯಲ್ಲಿ ಬಿಜೆಪಿಯ ಮತಗಳು ದ್ವಿಗುಣಗೊಂಡು 24,091ಕ್ಕೆ ಏರಿಕೆಯಾಗಿದೆ.

ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಇದೇ ಟ್ರೆಂಡ್ ಇತ್ತು. ರಾಮನಗರದಲ್ಲಿ ಬಿಜೆಪಿಯ ಮತಗಳು 4,871 ರಿಂದ 12,912 ಕ್ಕೆ ತ್ರಿಗುಣಗೊಂಡವು; ದೊಡ್ಡಬಳ್ಳಾಪುರವು ಮೂರು ಪಟ್ಟು ಹೆಚ್ಚಳವನ್ನು ತೋರಿಸಿದೆ, 27,612 ರಿಂದ 85144; ಮಾಗಡಿಯಲ್ಲಿ 4,419 ರಿಂದ 20197 ಮತಗಳಿಗೆ ಐದು ಪಟ್ಟು ಹೆಚ್ಚಿದೆ.

ಅಶ್ವಥ್ ನಾರಾಯಣ್ ಅವರ ವಿಶ್ಲೇಷಣೆಯನ್ನು ಬಿಜೆಪಿ ಮಾಜಿ ಎಂಎಲ್ ಸಿ ಅಶ್ವಥ್ ನಾರಾಯಣ ಗೌಡ ಒಪ್ಪುತ್ತಾರೆ. “ಅಚಾತುರ್ಯದಿಂದ ಬಿಜೆಪಿಯ ಒಕ್ಕಲಿಗ ಮತಗಳ ಹೆಚ್ಚಳವು ಕಾಂಗ್ರೆಸ್‌ಗೆ ಸಹಾಯ ಮಾಡಿದೆ, ಆದರೆ ಇದು ಗಂಭೀರ ಸಮಸ್ಯೆಯಲ್ಲ, ದೀರ್ಘಾವಧಿಯಲ್ಲಿ ನಾವು ಲಾಭ ಪಡೆಯುತ್ತೇವೆ. ಒಕ್ಕಲಿಗ ನಾಯಕರೊಬ್ಬರನ್ನು ಪಕ್ಷದ ಅಧ್ಯಕ್ಷ ಅಥವಾ ಪ್ರತಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡಲು ಬಿಜೆಪಿ ಗಂಭೀರವಾಗಿ ಚಿಂತಿಸುತ್ತಿದ್ದು, ಅಶ್ವತ್ಥನಾರಾಯಣ, ಶೋಭಾ ಕರಂದ್ಲಾಜೆ ಮತ್ತು ಆರ್.ಅಶೋಕ ಅವರ ಹೆಸರು ಕೇಳಿಬರುತ್ತಿದೆ. ಸಿ.ಟಿ.ರವಿ ವಿಧಾನಸಭಾ ಸ್ಥಾನ ಕಳೆದುಕೊಂಡಾಗಿನಿಂದ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಅವರ ಹೆಸರು ಕೇಳಿಬರುತ್ತಲೇ ಇತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com