CSR ಅಂದ್ರೆ ''ಕಮಿಷನ್ ಸಿದ್ದರಾಮಯ್ಯ''; ಪುತ್ರನನ್ನ ಸೇಫ್ ಮಾಡಲು ಸುಳ್ಳು ವಾದ: ಜೆಡಿಎಸ್ ವಾಗ್ದಾಳಿ

ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಮೊಬೈಲ್ ನಲ್ಲಿ ಮಾತನಾಡುವಾಗ ಸಿಎಸ್ ಆರ್ ಫಂಡಿಂಗ್ ಬಗ್ಗೆ ಪ್ರಸ್ತಾಪಿಸಿರುವುದಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ವಿರುದ್ಧ ವಾಗ್ದಾಳಿ ನಡೆಸಿರುವ ಜೆಡಿಎಸ್, CSR ಅಂದ್ರೆ ''ಕಮಿಷನ್ ಸಿದ್ದರಾಮಯ್ಯ, ಪುತ್ರನನ್ನ ಸೇಫ್ ಮಾಡಲು ಸುಳ್ಳು ವಾದ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದೆ.
ಸಿದ್ದರಾಮಯ್ಯ, ಕುಮಾರಸ್ವಾಮಿ ಸಾಂದರ್ಭಿಕ ಚಿತ್ರ
ಸಿದ್ದರಾಮಯ್ಯ, ಕುಮಾರಸ್ವಾಮಿ ಸಾಂದರ್ಭಿಕ ಚಿತ್ರ

ಬೆಂಗಳೂರು: ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಮೊಬೈಲ್ ನಲ್ಲಿ ಮಾತನಾಡುವಾಗ ಸಿಎಸ್ ಆರ್ ಫಂಡಿಂಗ್ ಬಗ್ಗೆ ಪ್ರಸ್ತಾಪಿಸಿರುವುದಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ವಿರುದ್ಧ ವಾಗ್ದಾಳಿ ನಡೆಸಿರುವ ಜೆಡಿಎಸ್, CSR ಅಂದ್ರೆ ''ಕಮಿಷನ್ ಸಿದ್ದರಾಮಯ್ಯ, ಪುತ್ರನನ್ನ ಸೇಫ್ ಮಾಡಲು ಸುಳ್ಳು ವಾದ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ಹೌದು ! ಅತೀಂದ್ರ ಶಕ್ತಿ ಯತೀಂದ್ರ ಸಿದ್ದರಾಮಯ್ಯ, ಸುಳ್ಳುರಾಮಯ್ಯನ ಬಳಿ ಮಾತನಾಡಿದ್ದು ಸಿ ಎಸ್ ಆರ್ ವಿಚಾರವನ್ನೆ. ಆದ್ರೆ ಸಿ ಎಸ್ ಆರ್ ಅಂದರೆ Commission Sidda Ramaiha ಅಂತ ಅರ್ಥ ಎಂದು ಹೇಳಿದೆ. 

ಹಲೋ ಅಪ್ಪ! ಈ ವರ್ಗಾವಣೆಗೆ ಎಷ್ಟು ಪರ್ಸೆಂಟ್ ಕಮಿಷನ್ ತಗೊಳೋಣ ಎಂದು ಕಮಿಷನ್ ಸಿದ್ದರಾಮಯ್ಯನವರತ್ರ ಮಾತನಾಡಿರಬೇಕು.ಅದನ್ನೆ ಸಿಎಸ್‌ಆರ್ ಫಂಡ್ ಎಂದು ವಾದಿಸುತ್ತಿರಬೇಕು. ಸಿದ್ದರಾಮಯ್ಯ ಅಕೌಂಟಿಗೆ ಹೋಗುವುದು CSR ಫಂಡ್. ಸರ್ಕಾರ ಆಡಳಿತಕ್ಕೆ ಹೊಸದೊಂದು ವ್ಯಾಖ್ಯಾನ ಸೇರಿಸುವ ಅನಿವಾರ್ಯತೆ ಇದೆ ಎಂದು ಹೇಳಿದೆ.

ಮತ್ತೊಂದು ಟ್ವೀಟ್ ನಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೇರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪುತ್ರ ವ್ಯಾಮೋಹದ ಪರಧಿಯೊಳಗೆ ಕಟ್ಟುಬಿದ್ದಂತಿದೆ. ತಮ್ಮ ಪುತ್ರನನ್ನ ಸೇಫ್ ಮಾಡಲು ಸತ್ಯ ಕಣ್ಣಿಗೆ ರಾಚುವಂತಿದ್ದರೂ ಸುಳ್ಳು ಎಂದು ವಾದ ಮಾಡುವ ಕೀಳುಮನಸ್ಥಿತಿಗೆ ಬಂದಿದ್ದಾರೆ ಎಂದು ಟೀಕಿಸಿದೆ.

ಸುಳ್ಳಿನ ಮೂಟೆ ತುಂಬಾ ದಿನ ಹೊರಲು ಸಾಧ್ಯವಿಲ್ಲ. ಸತ್ಯ ಅರಿವಾಗದಷ್ಟು ರಾಜ್ಯದ ಜನತೆ ದಡ್ಡರಲ್ಲ. ಈ ಇಡೀ ಪ್ರಕರಣದ ಸತ್ಯಾಸತ್ಯತೆಯನ್ನು ಮಾಧ್ಯಮಗಳೆ ಬಿಚ್ಚಿ ತೋರಿಸುತ್ತಿದೆ. ಮಾಧ್ಯಮಗಳ ಪ್ರಶ್ನೆಗೆ, ವಿಪಕ್ಷ ನಾಯಕರ ಪ್ರಶ್ನೆಗೆ ಉತ್ತರಿಸಬೇಕಾದ ಅನಿವಾರ್ಯತೆ ಇಲ್ಲ ಎಂಬ ನಿಮ್ಮ ದಾರ್ಷ್ಟ್ಯ, ದರ್ಪ, ದರ್ಬಾರು ಸರ್ವಾಧಿಕಾರ ಧೋರಣೆಯನ್ನು ತೋರುತ್ತದೆ ಎಂದು ಕಿಡಿಕಾರಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com