ಡಿಕೆಶಿ, ಜಾರಕಿಹೊಳಿಗೆ 'ಲಕ್ಷ್ಮಿ' ಕಂಟಕ: ಒಬ್ಬರ ಕಾಲು ಮತ್ತೊಬ್ಬರ ಕೈಯಲ್ಲಿ, ಕರ್ನಾಟಕದ ಭವಿಷ್ಯ ಕಾಂಗ್ರೆಸ್ ಕಾಲಡಿಯಲ್ಲಿ!

ಕಡುಭ್ರಷ್ಟ ಕಾಂಗ್ರೆಸ್ ಗೆ ಇಂದಿರಾ ಕ್ಯಾಂಟೀನ್‌ನಲ್ಲಿ ಭರ್ಜರಿ ಫುಲ್ ಮೀಲ್ಸ್! ಭ್ರಷ್ಟಾಚಾರ ಮಾಡುವ ಏಕೈಕ ಉದ್ದೇಶಕ್ಕಾಗಿ ಸಿದ್ದರಾಮಯ್ಯ ಆರಂಭಿಸಿದ ಇಂದಿರಾ ಕ್ಯಾಂಟೀನ್ ಅವರ ಪಾಲಿಗೆ ನಿತ್ಯ ಚಿನ್ನದ ಮೊಟ್ಟೆಯಿಡುವ ಕೋಳಿ.
ಬಿಜೆಪಿ ಮಾಡಿರುವ ಟ್ವೀಟ್
ಬಿಜೆಪಿ ಮಾಡಿರುವ ಟ್ವೀಟ್

ಬೆಂಗಳೂರು: ಬೆಳಗಾವಿ ವಿಚಾರದಲ್ಲಿ ಮೂಗು ತೂರಿಸುವುದನ್ನು ಮುಂದುವರೆಸಿರುವ ಡಿಸಿಎಂ ಡಿಕೆ ಶಿವಕುಮಾರ್ ಇದೀಗ ಮತ್ತೆ ಸಚಿವ ಸತೀಶ್ ಜಾರಕಿಹೊಳಿ ಅವರ ಆಪ್ತರನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೇವಲ "ಝಣ ಝಣ ಲಕ್ಷ್ಮಿ"ಯ ಬೆನ್ನು ಬಿದ್ದಿದ್ದಾರೆ ಎಂದು ಬಿಜೆಪಿ ಹೇಳಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಲಕ್ಷ್ಮಿಯ ಮುಂದೆ ಯಾರೂ ದೊಡ್ಡವರಲ್ಲ ಎನ್ನುವ ಭಾವನೆಯಲ್ಲಿರುವ ಕಾರಣದಿಂದ ಕಾಂಗ್ರೆಸ್‌ನಲ್ಲಿ ದಿನಕ್ಕೊಂದು ಬಣಗಳು ಹುಟ್ಟಿಕೊಳ್ಳುತ್ತಿವೆ. ಮನೆಯೊಂದು ಮೂರು ಬಾಗಿಲಾದರೆ, ಕೆಪಿಸಿಸಿ ಕಚೇರಿಯಲ್ಲಿ ನೂರೆಂಟು ಬಾಗಿಲುಗಳು ತೆರೆದಿವೆ. ಎಟಿಎಂ ಸರ್ಕಾರ ದ ಕಲೆಕ್ಷನ್, ಕಮಿಷನ್, ಲೂಟಿಯಷ್ಟೇ ಕಾಂಗ್ರೆಸ್‌ನಲ್ಲಿ ಬಣಗಳ ಕಾಳಗ ಕವಲು ಹೊಡೆದಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.

ಕಡುಭ್ರಷ್ಟ ಕಾಂಗ್ರೆಸ್ ಗೆ ಇಂದಿರಾ ಕ್ಯಾಂಟೀನ್‌ನಲ್ಲಿ ಭರ್ಜರಿ ಫುಲ್ ಮೀಲ್ಸ್! ಭ್ರಷ್ಟಾಚಾರ ಮಾಡುವ ಏಕೈಕ ಉದ್ದೇಶಕ್ಕಾಗಿ ಸಿದ್ದರಾಮಯ್ಯ ಆರಂಭಿಸಿದ ಇಂದಿರಾ ಕ್ಯಾಂಟೀನ್ ಅವರ ಪಾಲಿಗೆ ನಿತ್ಯ ಚಿನ್ನದ ಮೊಟ್ಟೆಯಿಡುವ ಕೋಳಿ. ಬಡವರ ಹೆಸರಿನಲ್ಲಿ ಕಾಂಗ್ರೆಸ್ಸಿಗರು ತಮ್ಮ ಜೇಬುಗಳನ್ನು ಶ್ರೀಮಂತಗೊಳಿಸಲು ಇಟ್ಟ ಇಂದಿರಾ ಎಂಬ ಹೆಸರಂತೂ ಈ ಯೋಜನೆಗೆ ಅತಿ ಸೂಕ್ತವಾಗಿ ಹೊಂದುತ್ತದೆ ಎಂಬುದಕ್ಕೆ ನಮ್ಮ ಪ್ರತಿವಾದವಿಲ್ಲ.

ವಿರೋಧ ಪಕ್ಷದಲ್ಲಿದ್ದಾಗ ಸುಳ್ಳು ಆರೋಪಗಳನ್ನು ಮಾಡಿ ನ್ಯಾಯಾಂಗ ತನಿಖೆ ಆಗಬೇಕೆಂದು ಆಗ್ರಹಿಸುತ್ತಿದ್ದ ಸಿದ್ದರಾಮಯ್ಯ ಅವರು ಇಂದು ನ್ಯಾಯಾಂಗ ತನಿಖೆಗೆ ಕೊಡಬೇಕಾದ ಪ್ರಕರಣಗಳ ಪಟ್ಟಿ:

 ಕಲೆಕ್ಷನ್‌ ಏಜೆಂಟ್‌ ಸುರ್ಜೇವಾಲಾ ವಿರುದ್ಧ ನ್ಯಾಯಾಂಗ ತನಿಖೆ ಆಗಬೇಕು..!
 ಶ್ಯಾಡೋ ಸಿಎಂ ವರ್ಗಾವಣೆ ದಂಧೆ ವಿರುದ್ಧ ನ್ಯಾಯಾಂಗ ತನಿಖೆ ಆಗಬೇಕು..!
 ಹಣ ಸಂಗ್ರಹಿಸಿ ಸಿಕ್ಕಿಬಿದ್ದಿರುವ #ATMSarkara ದ ಮೇಲೆ ನ್ಯಾಯಾಂಗ ತನಿಖೆ ಆಗಬೇಕು..!
 ಕಾಸಿಗಾಗಿ ಪೋಸ್ಟಿಂಗ್‌ ಮಾಡಿರುವ ಕಾಂಗ್ರೆಸ್‌ ಮೇಲೆ ನ್ಯಾಯಾಂಗ ತನಿಖೆ ಆಗಬೇಕು..!
ಚುನಾವಣೆ ವೇಳೆ ಕುಕ್ಕರ್‌, ಇಸ್ತ್ರಿ ಪಟ್ಟಿಗೆ ಹಂಚಿರುವ ಸಿದ್ದರಾಮಯ್ಯ ಅವರ ಮೇಲೆ ನ್ಯಾಯಾಂಗ ತನಿಖೆ ಆಗಬೇಕು..! ಸಿದ್ದರಾಮಯ್ಯ ಅವರು ಶುದ್ಧ ಹಸ್ತರು, ಸಾಚಾಗಳು ಎಂದು ಸಾಬೀತುಪಡಿಸಲೇ ಬೇಕಾದ ಸಮಯ ಬಂದಿದೆ.  ಕೈಯಲ್ಲಿ ಅಧಿಕಾರವಿದೆ ನ್ಯಾಯಾಂಗ ತನಿಖೆ ಕೊಟ್ಟು ನಾವು ಮಜವಾದಿಯಲ್ಲ ಸಮಾಜವಾದಿ ಎಂದಾದರೂ ತೋರಿಸಿ ಎಂದು ಬಿಜೆಪಿ ಹೇಳಿದೆ.

ಒಬ್ಬರ ಕಾಲು ಮತ್ತೊಬ್ಬರ ಕೈಯಲ್ಲಿ. ಕರ್ನಾಟಕದ ಭವಿಷ್ಯ ಕಾಂಗ್ರೆಸ್ ಕಾಲಿನ ಅಡಿಯಲ್ಲಿ ಎಂದು ಟ್ವೀಟ್ ಮಾಡಿರುವ ಬಿಜೆಪಿ ಫೋಟೋವೊಂದನ್ನು ಹಂಚಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com