ಜೆಪಿ ನಡ್ಡಾ ಭೇಟಿಗೆ ಸಿಗದ ಅವಕಾಶ: ಬೆಂಗಳೂರಿಗೆ ಡಿವಿ.ಸದಾನಂದ ಗೌಡ ವಾಪಸ್

ಪಂಚರಾಜ್ಯಗಳ ಚುನಾವಣಾ ವಿಚಾರದಲ್ಲಿ ಪಕ್ಷದ ಪರಿಷ್ಠರು ಬಿಡುವಿಲ್ಲದ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಕಾರಣ ಮೂರು ದಿನಗಳ ಕಾಲ ದೆಹಲಿಯಲ್ಲಿದ್ದರೂ ವರಿಷ್ಠರ ಭೇಟಿ ಸಾಧ್ಯವಾಗದೆ ಕೇಂದ್ರದ ಮಾಜಿ ಸಚಿವ ಡಿವಿ.ಸದಾನಂದ ಗೌಡ ಅವರು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.
ಡಿವಿ.ಸದಾನಂದ ಗೌಡ
ಡಿವಿ.ಸದಾನಂದ ಗೌಡ

ಬೆಂಗಳೂರು: ಪಂಚರಾಜ್ಯಗಳ ಚುನಾವಣಾ ವಿಚಾರದಲ್ಲಿ ಪಕ್ಷದ ಪರಿಷ್ಠರು ಬಿಡುವಿಲ್ಲದ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಕಾರಣ ಮೂರು ದಿನಗಳ ಕಾಲ ದೆಹಲಿಯಲ್ಲಿದ್ದರೂ ವರಿಷ್ಠರ ಭೇಟಿ ಸಾಧ್ಯವಾಗದೆ ಕೇಂದ್ರದ ಮಾಜಿ ಸಚಿವ ಡಿವಿ.ಸದಾನಂದ ಗೌಡ ಅವರು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ. ನಡ್ಡಾ ಅವರ ಆಹ್ವಾನದ ಮೇರೆಗೆ ಸದಾನಂದ ಗೌಡ ಅವರು ಅಕ್ಟೋಬರ್ 25 ರಂದು ರಾಷ್ಟ್ರ ರಾಜಧಾನಿ ನವದೆಹಲಿಗೆ ಭೇಟಿ ನೀಡಿದ್ದರು. ವರಿಷ್ಠಱ ಆಹ್ವಾನ ಹಿನ್ನೆಲೆಯಲ್ಲಿ ಸದಾನಂದ ಗೌಡ ಅವರು ಕೂಡಲೇ ದೆಹಲಿಗೆ ಭೇಟಿ ನೀಡಿದ್ದರು. ಆದರೆ, ಮೂರು ದಿನಗಳು ಕಾದರೂ ಭೇಟಿಗೆ ಅವಕಾಶ ಸಿಕ್ಕಿಲ್ಲ.

ಏತನ್ಮಧ್ಯೆ ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗೆ ಪಕ್ಷದ ಉಸ್ತುವಾರಿಯಾಗಿದ್ದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಸದಾನಂದ ಗೌಡ ಅವರು ಭೇಟಿ ಮಾಡಿದ್ದು, ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ.

ಬೆಂಗಳೂರು ಉತ್ತರ ಕ್ಷೇತ್ರದ ಸಂಸದರಾಗಿರುವ ಗೌಡ (70) ಅವರು 2024ರ ಲೋಕಸಭೆ ಚುನಾವಣೆಗೆ ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿರುವುದಕ್ಕೆ ಅಸಮಾಧಾನ ಹೊರಹಾಕಿದ್ದರು.

ಈ ನಡುವೆ ತಮಿಳುನಾಡು ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಹರಡಿದ ಕಾರಣಕ್ಕಾಗಿ ತಮಿಳುನಾಡು ಬಿಜೆಪಿಯ ಪಕ್ಷದವರನ್ನು ಬಂಧಿಸುವ ಕುರಿತು ತಮಿಳುನಾಡಿನಲ್ಲಿ ಬಿಜೆಪಿ ಮತ್ತು ಡಿಎಂಕೆ ನಡುವಿನ ಸಂಘರ್ಷ ನಡೆಯುತ್ತಿದೆ. ಹೀಗಾಗಿ ವಿಷಯದ ಸಂಪೂರ್ಣ ಮಾಹಿತಿಗಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ತಮಿಳುನಾಡು ರಾಜ್ಯಕ್ಕೆ ನಾಲ್ಕು ಸದಸ್ಯರ ನಿಯೋಗವನ್ನು ಕಳುಹಿಸಿದ್ದಾರೆ. ಈ ನಿಯೋಗದಲ್ಲಿ ಕರ್ನಾಟಕದ ಮಾಜಿ ಸಿಎಂ ಡಿವಿ ಸದಾನಂದ ಗೌಡ ಅವರನ್ನೂ ಸೇರ್ಪಡೆಗೊಳಿಸಿದ್ದಾರೆ.

ಆಂಧ್ರಪ್ರದೇಶ ಬಿಜೆಪಿ ಅಧ್ಯಕ್ಷೆ ಡಿ ಪುರಂದೇಶ್ವರಿ, ಮುಂಬೈನ ನಿವೃತ್ತ ಪೊಲೀಸ್ ಆಯುಕ್ತ ಡಾ ಸತ್ಯಪಾಲ್ ಸಿಂಗ್ ಮತ್ತು ಬಿಜೆಪಿ ಸಂಸದ ಪಿಸಿ ಮೋಹನ್, ಸದಾನಂದ ಗೌಡ ನೇತೃತ್ವದ ಈ ನಿಯೋಗ ಶೀಘ್ರದಲ್ಲೇ ತಮಿಳುನಾಡಿಗೆ ಭೇಟಿ ನೀಡುವ ಸಾಧ್ಯತೆಯಿದೆ.

ಇನ್ನು ನಡ್ಡಾ ಅವರ ಭೇಟಿಗೆ ಅವಕಾಶ ಸಿಗದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸದಾನಂದ ಗೌಡ ಅವರು, ‘ಒಂದು ದಿನ ಉಳಿಯಲು ನಡ್ಡಾ ಸೂಚಿಸಿದ್ದರು. ಆದರೆ, ಇವತ್ತು ಪಕ್ಷದ ಕೆಲಸದ ಮೇಲೆ ತಮಿಳುನಾಡಿಗೆ ಹೋಗಬೇಕಾಗಿದ್ದರಿಂದ ದೆಹಲಿಯಿಂದ ವಾಪಸ್‌ ಬಂದೆ. ನಾವು ಪಕ್ಷದ ವ್ಯವಸ್ಥೆಗೆ ಪೂರಕವಾಗಿರಬೇಕು. ಇದನ್ನು ನಕಾರಾತ್ಮಕ ದೃಷ್ಟಿಯಿಂದ ನೋಡಬೇಕಾಗಿಲ್ಲ’ ಎಂದು ಹೇಳಿದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸರ್ಕಾರದಿಂದ ರೈತರಿಗೆ ಯಾವುದೇ ನೆರವು ಸಿಗುತ್ತಿಲ್ಲ. ವಿರೋಧಿ ಪಕ್ಷಗಳ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್‌ನಲ್ಲಿ ಆಂತರಿಕ ಕಚ್ಚಾಟ ಆರಂಭವಾಗಿದೆ. ಶಾಮನೂರು ಶಿವಶಂಕರಪ್ಪ ಅವರ ಒಂದು ಗುಂಪು, ಸತೀಶ ಜಾರಕಿಹೊಳಿಯವರದ್ದು ಮತ್ತೊಂದು ಗುಂಪು. ಈ ಕಚ್ಚಾಟದಲ್ಲಿ ಆಡಳಿತ ಯಂತ್ರವೇ ಸ್ಥಗಿತಗೊಂಡಿದೆ ಎಂದು ಕಿಡಿಕಾರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com