ಅಯ್ಯಯ್ಯೋ..! ಬರಗಾಲ, ಕ್ಷಾಮ ರಾಜ್ಯದಲ್ಲಿ ತಾಂಡವವಾಡುತ್ತಿದೆ; ಸಿದ್ದರಾಮಯ್ಯ ಅವರೇ, ಏಳಿ ಎದ್ದೇಳಿ: ಬಿಜೆಪಿ ಲೇವಡಿ

ರಾಜ್ಯದಲ್ಲಿ ಬರಗಾಲ, ಕ್ಷಾಮ ತಾಂಡವವಾಡುತ್ತಿದೆ. ಸಿದ್ದರಾಮಯ್ಯ ಅವರೇ ಏಳಿ ಏದ್ದೇಳಿ ನಿದ್ದೆಯಿಂದ ಹೊರಬನ್ನಿ ಎಂದು ಪ್ರತಿಪಕ್ಷ ಬಿಜೆಪಿ ಲೇವಡಿ ಮಾಡಿದೆ. 
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಬರಗಾಲ, ಕ್ಷಾಮ ತಾಂಡವವಾಡುತ್ತಿದೆ. ಸಿದ್ದರಾಮಯ್ಯ ಅವರೇ ಏಳಿ ಏದ್ದೇಳಿ ನಿದ್ದೆಯಿಂದ ಹೊರಬನ್ನಿ ಎಂದು ಪ್ರತಿಪಕ್ಷ ಬಿಜೆಪಿ ಲೇವಡಿ ಮಾಡಿದೆ. 

ಬರಗಾಲ ವಿಚಾರ ಪ್ರಸ್ತಾಪಿಸಿ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಬಿಜೆಪಿ, ನಿಲ್ಲುತ್ತಿಲ್ಲ ಅನ್ನದಾತನ ಆತ್ಮಹತ್ಯೆ ಸರಣಿ, ಕಾಂಗ್ರೆಸ್ ಸರ್ಕಾರ ಬಂದ ದಿನದಿಂದ 70ಕ್ಕೂ ಹೆಚ್ಚು ರೈತರ ಸಾವು ಆಗಿದೆ. ಬೆಳೆ ಬೆಳೆದ ನಮ್ಮ ರೈತರಿಗಿಲ್ಲ ಕಾವೇರಿ ನೀರು ಇಲ್ಲ. ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯುಸೆಕ್ಸ್  ಹರಿಸಲಾಗುತ್ತಿದೆ ಎಂದು ಕಿಡಿಕಾರಿದೆ.

ಕುಡಿಯುವ ನೀರಿಗೂ ರಾಜ್ಯದಲ್ಲಿ ಹಾಹಾಕಾರ, ನಿಲ್ಲುತ್ತಿಲ್ಲ ಕಲುಷಿತ ನೀರು ಪೂರೈಕೆ, ಅಪಾರ ಸಾವು ನೋವು ಮುಂದುವರಿದಿದೆ. ಕೃಷಿ ಸಚಿವ ಚೆಲುವರಾಯಸ್ವಾಮಿ ಅವರ ದುರಾಡಳಿತಕ್ಕಿಲ್ಲ ಕಡಿವಾಣ. ಇಲ್ಲದಂತಾಗಿದೆ. ಮೊದಲೇ ಬೆಲೆ ಏರಿಕೆಗೆ ರೋಸಿ ಹೋಗಿದ್ದ ಜನರ ಮೇಲೆ ಇದೀಗ ಪ್ರತಿ ಕೆಜಿ ಅಕ್ಕಿ‌ ಬೆಲೆ 10 ರಿಂದ 20 ರೂ. ಏರಿಕೆಯ ಹೊರೆಯಾಗಿದೆ. 135 ತಾಲೂಕುಗಳಲ್ಲಿ ಬರ ಬಂದಿದ್ದರೂ, ಕಾಂಗ್ರೆಸ್ ಸರ್ಕಾರ ಬರಗಾಲ ಘೋಷಿಸದೆ ಮೊಂಡಾಟವಾಡುತ್ತಿದೆ. ಅಡಳಿತದ ಅನುಭವ ಹೊಂದಿರುವ ಸಿದ್ದರಾಮಯ್ಯ ಅವರು ಈ ಪರಿ ಮೌನಕ್ಕೆ ಶರಣಾಗಿರುವುದು ಕನ್ನಡಿಗರ ದುರಂತ ಎಂದು ಬಿಜೆಪಿ ಟೀಕಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com