ಅಶೋಕ್ ಟಾರ್ಗೆಟ್: ಪದ್ಮನಾಭನಗರದ ಮಾಜಿ ಬಿಜೆಪಿ, ಜೆಡಿಎಸ್ ಕಾರ್ಪೋರೇಟರ್ ಗಳು ಕಾಂಗ್ರೆಸ್ ಸೇರ್ಪಡೆ

ಮುಂಬರುವ ಲೋಕಸಭಾ ಹಾಗೂ ಬಿಬಿಎಂಪಿ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲುವಿನ ಗುರಿ ಹೊಂದಿರುವ ಕೆಪಿಸಿಸಿ ಅಧ್ಯಕ್ಷರು ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇದೀಗ ಬಿಜೆಪಿಯ ಪ್ರಭಾವಿ ನಾಯಕ ಆರ್.ಅಶೋಕ್ ಅವರ ಕ್ಷೇತ್ರದಲ್ಲಿಯೇ 'ಆಪರೇಷನ್ ಹಸ್ತ' ಆರಂಭಿಸಿದ್ದಾರೆ.
ಹಲವು ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಹಲವು ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಬೆಂಗಳೂರು: ಮುಂಬರುವ ಲೋಕಸಭಾ ಹಾಗೂ ಬಿಬಿಎಂಪಿ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲುವಿನ ಗುರಿ ಹೊಂದಿರುವ ಕೆಪಿಸಿಸಿ ಅಧ್ಯಕ್ಷರು ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇದೀಗ ಬಿಜೆಪಿಯ ಪ್ರಭಾವಿ ನಾಯಕ ಆರ್.ಅಶೋಕ್ ಅವರ ಕ್ಷೇತ್ರದಲ್ಲಿಯೇ 'ಆಪರೇಷನ್ ಹಸ್ತ' ಆರಂಭಿಸಿದ್ದಾರೆ. ಪದ್ಮನಾಭನಗರದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಹಲವು ಮಾಜಿ ಕಾರ್ಪೋರೇಟರ್ ಗಳು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಕ್ವೀನ್ಸ್‌ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ನೂತನ ಸದಸ್ಯರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, 2028ರ ವಿಧಾನಸಭಾ ಚುನಾವಣೆಗೆ ಪದ್ಮನಾಭನಗರದಿಂದ ಕಾಂಗ್ರೆಸ್ ಪಕ್ಷದ ಶಾಸಕರಾಗಿ ಆಯ್ಕೆಯಾಗುವ ಸುಸಂದರ್ಭಕ್ಕೆ ಇಂದು ಪೀಠಿಕೆ ಪ್ರಾರಂಭವಾಗಿದೆ. ಕಾಲ ಬದಲಾವಣೆ ಆಗುತ್ತಿದೆ. ಸರಿಯಾದ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡಾಗ ಬೆಟ್ಟದಷ್ಟು ಬದಲಾವಣೆ ಆಗುತ್ತದೆ ಎಂದರು. 

ಇತ್ತೀಚಿಗೆ ನಡೆದ  ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ 136 ಕ್ಷೇತ್ರವನ್ನು ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದೆ. ಅದೇ ರೀತಿ ಈಗ ಲೋಕಸಭಾ ಹಾಗೂ ಬಿಬಿಎಂಪಿ ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ನಾವು ಗೆಲ್ಲುತ್ತೇವೆ ಎಂಬ ಭರವಸೆ ನೀಡುತ್ತೇನೆ. ರಾಜ್ಯ ಬಿಜೆಪಿಯಲ್ಲಿ ಪರಿಸ್ಥಿತಿ ಏನಾಗಿದೆ ಎಂಬುದನ್ನು ನಾನು ವಿವರಿಸುವ ಅಗತ್ಯವಿಲ್ಲ. ರಾಜ್ಯದಲ್ಲಿ ಅವರಿಗೆ ವಿಪಕ್ಷ ನಾಯಕವನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ. ಕೇಂದ್ರದಲ್ಲೂ ಉಳಿಯಲು ಹೋರಾಟ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು. 

ಪದ್ಮನಾಭನಗರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆದ್ದೆ ಗೆಲ್ತಾರೆ ಎಂದು ಪ್ರಜಾಪ್ರಭುತ್ವ ದಿನದಂದು ಹೇಳುತ್ತಿದ್ದೇನೆ. ಪದ್ಮನಾಭನಗರದ ಸ್ಥಳೀಯ ಚುನಾವಣೆಯಿಂದ ವಿಧಾನಸಭೆ ಚುನಾವಣೆವರೆಗೂ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸುವ ಗುರಿ ನಮ್ಮ ಕಾರ್ಯಕರ್ತರಲ್ಲಿ ಇರಬೇಕು. ಕಾಂಗ್ರೆಸ್‌ ಪಕ್ಷ ನಿಮ್ಮೊಂದಿಗೆ ಜೊತೆಗಿದೆ ಎಂದು ಅವರು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com