ಚುನಾವಣಾ ನೀತಿಸಂಹಿತೆ ಉಲ್ಲಂಘನೆ: ಬಿಜೆಪಿ ಶಾಸಕರಾದ ಅಪ್ಪಚ್ಚು ರಂಜನ್, ಬೋಪಯ್ಯಾಗೆ ನೋಟಿಸ್
ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿದ ಕೊಡಗಿನ ಇಬ್ಬರು ಬಿಜೆಪಿ ಶಾಸಕರಾದ ಅಪ್ಪಚ್ಚುರಂಜನ್ ಮತ್ತು ಕೆಜಿ ಬೋಪಯ್ಯಾ ಅವರಿಗೆ ಶನಿವಾರ ಚುನಾವಣಾ ಅಧಿಕಾರಗಳು ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.
Published: 01st April 2023 04:48 PM | Last Updated: 01st April 2023 05:49 PM | A+A A-

ಅಪ್ಪಚ್ಚು ರಂಜನ್, ಬೋಪಯ್ಯಾ
ಕೊಡಗು: ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿದ ಕೊಡಗಿನ ಇಬ್ಬರು ಬಿಜೆಪಿ ಶಾಸಕರಾದ ಅಪ್ಪಚ್ಚು ರಂಜನ್ ಮತ್ತು ಕೆಜಿ ಬೋಪಯ್ಯಾ ಅವರಿಗೆ ಶನಿವಾರ ಚುನಾವಣಾ ಅಧಿಕಾರಗಳು ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.
ಶಾಸಕ ಅಪ್ಪಚ್ಚು ರಂಜನ್ ಅವರು ಡಾ. ಶಿವಕುಮಾರ ಸ್ವಾಮೀಜಿ ಜನ್ಮದಿನಕ್ಕೆ ಶುಭಾಶಯ ಕೋರಿದ್ದರು. ಅದೇ ರೀತಿ ಕೆಜಿ ಬೋಪಯ್ಯ ಅವರು ಎಸ್ಎಸ್ ಎಲ್ ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಶುಭ ಕೋರಿದ್ದರು.
ಇದನ್ನು ಓದಿ: ಮಾದರಿ ನೀತಿ ಸಂಹಿತೆ ಜಾರಿಯಾದರೂ ಸಚಿವರ ಪಿ.ಎ, ಕಾರ್ಯದರ್ಶಿಗಳಿಂದ ಸರ್ಕಾರಿ ಸೌಲಭ್ಯಗಳ ಬಳಕೆ
ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ ಈ ಇಬ್ಬರು ಬಿಜೆಪಿ ಶಾಸಕರಿಗೆ ನೋಟಿ ನೀಡಲಾಗಿದೆ.