ಖರ್ಗೆ ಪ್ರತಿನಿಧಿಸಿದ್ದ ಚಿತ್ತಾಪುರ ಕಾಂಗ್ರೆಸ್ ಗೆ ಪ್ರತಿಷ್ಠೆಯ ಕಣ: ಬಿಜೆಪಿಗೆ ನೆರವಾಗಲಿದ್ಯಾ ಜಾತಿ ಸಮೀಕರಣ!

ಬಿಜೆಪಿ ಜಾತಿ ಸಮೀಕರಣ ಮತ್ತು ಡಬಲ್ ಎಂಜಿನ್ ಸರ್ಕಾರದ ಅಭಿವೃದ್ಧಿ ಕೆಲಸಗಳು ಕಾಂಗ್ರೆಸ್ ನಿಂದ ಸ್ಥಾನ ಕಸಿದುಕೊಳ್ಳಲು ಬಿಜೆಪಿಗೆ ಸಹಾಯ ಮಾಡಲಿದೆ.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸಿದ್ದ ಚಿತ್ತಾಪುರ (ಎಸ್‌ಸಿ-ಮೀಸಲು) ಕ್ಷೇತ್ರವನ್ನು ಗೆಲ್ಲುವುದು ಕಾಂಗ್ರೆಸ್‌ಗೆ ಪ್ರತಿಷ್ಠೆಯ ವಿಷಯವಾಗಿದೆ.

ಎಐಸಿಸಿ ಅಧ್ಯಕ್ಷ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುತ್ತಿರುವ ಕ್ಷೇತ್ರವನ್ನು ಕಾಂಗ್ರೆಸ್ ಗೆಲ್ಲುವ ವಿಶ್ವಾಸದಲ್ಲಿದೆ, ಆದರೆ ಬಿಜೆಪಿ ಜಾತಿ ಸಮೀಕರಣ ಮತ್ತು ಡಬಲ್ ಎಂಜಿನ್ ಸರ್ಕಾರದ ಅಭಿವೃದ್ಧಿ ಕೆಲಸಗಳು ಕಾಂಗ್ರೆಸ್ ನಿಂದ ಸ್ಥಾನ ಕಸಿದುಕೊಳ್ಳಲು ಬಿಜೆಪಿಗೆ ಸಹಾಯ ಮಾಡಲಿದೆ. ಆದರೆ, ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಿಸಿದ ನಂತರವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

ಪ್ರಿಯಾಂಕ್ ಖರ್ಗೆ ಕಳೆದ 10 ವರ್ಷಗಳಿಂದ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ ಮತ್ತು ಪ್ರಸ್ತುತ ಕೆಪಿಸಿಸಿಯ ಸಂವಹನ ಮತ್ತು ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿದ್ದಾರೆ. 2008ರಲ್ಲಿ ಮೀಸಲು ಕ್ಷೇತ್ರವಾಗಿ ಘೋಷಣೆಯಾಗುವ ಮೊದಲು ಚಿತ್ತಾಪುರ ಸಾಮಾನ್ಯ ಕ್ಷೇತ್ರವಾಗಿದ್ದು, 1989, 1994 ಮತ್ತು 1999ರಲ್ಲಿ ಕಾಂಗ್ರೆಸ್‌ನ ಕೋಲಿ-ಕಬ್ಬಲಿಗ ನಾಯಕ ಬಾಬುರಾವ್ ಚಿಂಚನಸೂರ್ ಪ್ರತಿನಿಧಿಸುತ್ತಿದ್ದರು.

2008 ರಲ್ಲಿ ಡಿಲಿಮಿಟೇಶನ್ ನಂತರ, 1972 ರಿಂದ 2004 ರವರೆಗೆ ಎಂಟು ಅವಧಿಗೆ ಗುರ್ಮಿಟ್ಕಲ್ (ಇದು ಎಸ್‌ಸಿ-ಮೀಸಲು ಕ್ಷೇತ್ರ ಮತ್ತು ಅವಿಭಜಿತ ಗುಲ್ಬರ್ಗಾ ಜಿಲ್ಲೆಯ ಭಾಗವಾಗಿತ್ತು) ಪ್ರತಿನಿಧಿಸಿದ್ದ ಮಲಿಕಾರ್ಜುನ್ ಖರ್ಗೆ,  ಚಿತ್ತಾಪುರ ಎಸ್ ಸಿ ಮೀಸಲು ಕ್ಷೇತ್ರಕ್ಕೆ ನೆಲೆ ಬದಲಾಯಿಸಿದರು.

2009ರಲ್ಲಿ ನಡೆದ ಉಪಚುನಾವಣೆಯಲ್ಲಿ (ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಮಲ್ಲಿಕಾರ್ಜುನ ಖರ್ಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ) ಬಿಜೆಪಿಯ ದಿವಂಗತ ವಾಲ್ಮೀಕಿ ಕಮಲು ನಾಯಕ್ ವಿರುದ್ಧ ಪ್ರಿಯಾಂಕ್  ಸೋಲು  ಅನುಭವಿಸಬೇಕಾಯಿತು. ನಂತರ 2013ರ ಚುನಾವಣೆಯಲ್ಲಿ ಪ್ರಿಯಾಂಕ್, ನಾಯಕ್ ಅವರನ್ನು 31,191 ಮತಗಳ ಅಂತರದಿಂದ ಮತ್ತು 2018ರ ಚುನಾವಣೆಯಲ್ಲಿ 4,393 ಮತಗಳ ಅಂತರದಿಂದ ಸೋಲಿಸಿದ್ದರು.

ಚಿಂಚನಸೂರ್ ಬಿಜೆಪಿಯಿಂದ ಕಾಂಗ್ರೆಸ್‌ಗೆ ಮರಳಿದ್ದು, ಚಿತ್ತಾಪುರದಲ್ಲಿ 35,000 ಮತದಾರರು ಅವರ ಕೋಲಿ-ಕಬ್ಬಲಿಗ-ಕುರುಬ ಸಮುದಾಯಕ್ಕೆ ಸೇರಿರುವುದರಿಂದ  ಕಾಂಗ್ರೆಸ್ ಗೆ ಮತ್ತಷ್ಟು ಬಲ ಬಂದಂತಿದೆ.  ಕ್ಷೇತ್ರದಲ್ಲಿ ತಲಾ 30,000 ಲಂಬಾಣಿ ಮತ್ತು ಎಸ್‌ಸಿ/ಎಸ್‌ಟಿ ಮತದಾರರು, 40,000 ಲಿಂಗಾಯತ ಮತದಾರರು ಇರುವುದರಿಂದ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಬಂಜಾರ ಸಮುದಾಯದ ಮುಖಂಡ ಮಾಜಿ ಸಚಿವ ರೇವು ನಾಯಕ್ ಬೆಳಮಗಿ ಕೂಡ ಪ್ರಿಯಾಂಕ್‌ಗೆ ಸಹಾಯ ಮಾಡುತ್ತಾರೆ.

ಮತ್ತೊಂದೆಡೆ ಜಾತಿ ಲೆಕ್ಕಾಚಾರದ ಮೇಲೆ ಈ ಬಾರಿ ಚಿತ್ತಾಪುರ ಗೆಲ್ಲುವ ಭರವಸೆಯಲ್ಲಿ ಬಿಜೆಪಿ ಇದೆ. ಬಿಜೆಪಿಯ ಪ್ರಬಲ ಮತಬ್ಯಾಂಕ್ ಎಂದು ಪರಿಗಣಿಸಲ್ಪಟ್ಟಿರುವ ಲಿಂಗಾಯತರು ಸುಮಾರು 40,000 ಸಂಖ್ಯೆಯಲ್ಲಿದ್ದಾರೆ. ಆಂತರಿಕ ಮೀಸಲಾತಿಯ ಇತ್ತೀಚಿನ ಆದೇಶದಿಂದಾಗಿ ಎಸ್‌ಸಿ/ಎಸ್‌ಟಿ ಮತದಾರರು ಸಹ ಬಿಜೆಪಿ ಪರವಾಗಿ ಮತ ಚಲಾಯಿಸಬಹುದು ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. 'ಬಂಜಾರ ಸಮುದಾಯಕ್ಕೆ ಸೇರಿದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಮೊದಲಿನಿಂದಲೂ ಬಿಜೆಪಿಯನ್ನು ಬೆಂಬಲಿಸುತ್ತಲೇ ಬಂದಿರುವ ವಡ್ಡರ ಸಮುದಾಯದ ಸುಮಾರು 15 ಸಾವಿರ ಮತದಾರರಿದ್ದಾರೆ ಎಂದು ಜಿಲ್ಲಾ ಬಿಜೆಪಿ ಚುನಾವಣಾ ಸಮಿತಿ ಸಂಚಾಲಕ ಅಮರನಾಥ ಪಾಟೀಲ ಹೇಳಿದರು. ಚಿತ್ತಾಪುರದಲ್ಲಿ ಡಬಲ್ ಇಂಜಿನ್ ಸರ್ಕಾರ ಜಾರಿಗೆ ತಂದಿರುವ ಅಭಿವೃದ್ಧಿ ಕಾರ್ಯಗಳು ಬಿಜೆಪಿಗೆ ಸಹಾಯ ಮಾಡುತ್ತವೆ ಎಂದು ಅವರು ಹೇಳಿದ್ದಾರೆ.

ಕ್ಷೇತ್ರದಲ್ಲಿ ಅಭಿವೃದ್ಧಿ ನಡೆದಿದೆ,  ಆದರೆ ಯಾರಿಗೆ ಕ್ರೆಡಿಟ್ ನೀಡಬೇಕೆಂದು ನಮಗೆ ತಿಳಿದಿಲ್ಲ. ನಮಗೆ ಸ್ಥಿರ ಸರ್ಕಾರ ಬೇಕು, ಯಾರಿಗೆ ಮತ ಚಲಾಯಿಸಬೇಕು ಎಂದು ಇನ್ನೂ ನಿರ್ಧರಿಸಿಲ್ಲ  ಎಂದು ನಿವಾಸಿಯೊಬ್ಬರು ಹೇಳಿದರು.

ಕ್ಲೀನ್ ಇಮೇಜ್ ಸೀಟು ಗೆಲ್ಲಲು ಸಹಾಯ ಮಾಡುತ್ತದೆ ಎಂದು ಹೇಳಿದರು. ನನ್ನ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪ ಇಲ್ಲ ಎಂದರು. ಕಳೆದ 10 ವರ್ಷಗಳಿಂದ ಚಿತ್ತಾಪುರದಲ್ಲಿ ಯಾವುದೇ ಕೋಮುಗಲಭೆ ನಡೆದಿಲ್ಲ. ನಾನು ವಾಡಿಯಲ್ಲಿ ಟೌನ್‌ಶಿಪ್ ಅಭಿವೃದ್ಧಿಪಡಿಸಿದ್ದೇನೆ ಮತ್ತು 1,000 ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಿದ್ದೇನೆ. ಎಲ್ಲಾ ಹಳ್ಳಿಗಳು ಮತ್ತು ನಗರಗಳು ಉತ್ತಮ ರಸ್ತೆಗಳೊಂದಿಗೆ ಸಂಪರ್ಕ ಹೊಂದಿವೆ. ನಾಗಾವಿಯಲ್ಲಿ ಶಿಕ್ಷಣ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಶಾಸಕ ಪ್ರಿಯಾಂಕ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com