ಭವಾನಿಗೆ ಟಿಕೆಟ್ ಕೊಡಿಸಲು ಅಂತಿಮ ದಾಳ ಉರುಳಿಸಿದ ಹೆಚ್ ಡಿ ರೇವಣ್ಣ

ಹಾಸನ ಜೆಡಿಎಸ್ ಟಿಕೆಟ್ ವಿಷಯ ಜಿಲ್ಲೆಯಲ್ಲಿ ಹೆಚ್ಚು ಚರ್ಚೆಯಾಗುತ್ತಿದ್ದು, ತಮ್ಮ ಪತ್ನಿಯ ಪರವಾಗಿ ಹೆಚ್ ಡಿ ರೇವಣ್ಣ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಲು ಅಂತಿಮ ದಾಳ ಉರುಳಿಸಿದ್ದಾರೆ. 
ಜೆಡಿಎಸ್ ನಾಯಕ ರೇವಣ್ಣ
ಜೆಡಿಎಸ್ ನಾಯಕ ರೇವಣ್ಣ

ಹಾಸನ: ಹಾಸನ ಜೆಡಿಎಸ್ ಟಿಕೆಟ್ ವಿಷಯ ಜಿಲ್ಲೆಯಲ್ಲಿ ಹೆಚ್ಚು ಚರ್ಚೆಯಾಗುತ್ತಿದ್ದು, ತಮ್ಮ ಪತ್ನಿಯ ಪರವಾಗಿ ಹೆಚ್ ಡಿ ರೇವಣ್ಣ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಲು ಅಂತಿಮ ದಾಳ ಉರುಳಿಸಿದ್ದಾರೆ. 

ರೇವಣ್ಣ ಒಂದು ವೇಳೆ ತಮ್ಮ ಬೇಡಿಕೆ ಈಡೇರದೇ ಇದ್ದರೆ ಭವಾನಿ ಪಕ್ಷೇತರರಾಗಿ ಸ್ಪರ್ಧಿಸುತ್ತಾರೆ ಎಂಬ ಬೆದರಿಕೆ ಹಾಕಿದ್ದು, ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. 

ಭವಾನಿ ರೇವಣ್ಣಗೆ ಟಿಕೆಟ್ ನೀಡದೇ ಇದ್ದಲ್ಲಿ, ಕೊನೆಯ ಅಸ್ತ್ರವಾಗಿ ರೇವಣ್ಣ ದಂಪತಿ, ಹಾಸನ ಹಾಗೂ ಹೊಳೆನರಸಿಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವ ಯೋಜನೆ ಹೊಂಡಿದ್ದಾರೆ. 

ಹೆಚ್ ಡಿ ಕುಮಾರಸ್ವಾಮಿ ಹಾಸನ ಕ್ಷೇತ್ರದ ಟಿಕೆಟ್ ನ್ನು ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ನೀಡುವುದಾಗಿ ಪದೇ ಪದೇ ಹೇಳಿಕೆ ನೀಡುತ್ತಿದ್ದರೂ ರೇವಣ್ಣ ಮೌನವಹಿಸಿಲ್ಲ. ಬದಲಾಗಿ ಪಕ್ಷದ ವಿವಿಧ ಹಂತಗಳ ಕಾರ್ಯಕರ್ತರೊಂದಿಗೆ ಸರಣಿ ಸಭೆ ನಡೆಸಿದ್ದು, ಭವಾನಿಗೆ ಟಿಕೆಟ್ ನೀಡದೇ ಇದ್ದರೆ ಕೈಗೊಳ್ಳಬೇಕಿರುವ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ. 

ಹಲವು ಹಿರಿಯ ನಾಯಕರು ರೇವಣ್ಣಗೆ, ರೇವಣ್ಣ ಹಾಗೂ ಭವಾನಿಗೆ ಪಕ್ಷೇತರರಾಗಿಯೇ ಸ್ಪರ್ಧಿಸುವಂತೆ ಸಲಹೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com