ಹಾಸನದಲ್ಲಿ ಭವಾನಿ ರೇವಣ್ಣಗೆ ಜೆಡಿಎಸ್ ಟಿಕೆಟ್ ನೀಡಿದರೂ ಗೆಲ್ಲೋದಿಲ್ಲ: ಕುಮಾರಸ್ವಾಮಿ

ಹಾಸನದಲ್ಲಿ ಭವಾನಿ ರೇವಣ್ಣ ಅವರಿಗೆ ಜೆಡಿಎಸ್ ಟಿಕೆಟ್‌ ನೀಡಿದರೂ ಅವರು ಗೆಲ್ಲೋದಿಲ್ಲ. ಸೋಲುತ್ತಾರೆ ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಂಗಳವಾರ ಹೇಳಿದ್ದಾರೆ.
ಕುಮಾರಸ್ವಾಮಿ - ಭವಾನಿ
ಕುಮಾರಸ್ವಾಮಿ - ಭವಾನಿ

ಹುಬ್ಬಳ್ಳಿ: ಹಾಸನದಲ್ಲಿ ಭವಾನಿ ರೇವಣ್ಣ ಅವರಿಗೆ ಜೆಡಿಎಸ್ ಟಿಕೆಟ್‌ ನೀಡಿದರೂ ಅವರು ಗೆಲ್ಲೋದಿಲ್ಲ. ಸೋಲುತ್ತಾರೆ ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಂಗಳವಾರ ಹೇಳಿದ್ದಾರೆ.

ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರಾಜ್ಯ ಹಾಗೂ ಹಾಸನಲ್ಲಿ ಕೆಲವು ಶಕುನಿಗಳು, ದೇವೆಗೌಡರ ಕುಟುಂಬವನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ. ಹಾಸನ ಟಿಕೆಟ್ ಕಾರ್ಯಕರ್ತರಿಗೆ ನೀಡೋದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಕಳೆದ ಒಂದೂವರೆ ವರ್ಷದ ಹಿಂದೆಯೇ ಅವರಿಗೆ ಹೇಳಿದ್ದೇನೆ. ಭವಾನಿ ರೇವಣಗೆ ಟಿಕೆಟ್ ಕೊಟ್ಟರೆ ಸೋಲ್ತಾರೆ. ಅವರು ಗೆಲ್ಲೋದಿಲ್ಲ. ಯಾರ ಮಾತು ಕೇಳಿ ಅವರು ಟಿಕೆಟ್ ಗೆ ಪಟ್ಟು ಹಿಡಿದ್ದಾರೆ ಎಲ್ಲವೂ ಗೊತ್ತಿದೆ. ಬೆಳಗ್ಗೆಯಿಂದ ಸಂಜೆವರೆಗೆ ಯಾರು ಅವರ ಮೈಂಡ್ ವಾಶ್ ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಪಕ್ಷ ಕಟ್ಟಿ, ಅಧಿಕಾರಕ್ಕೆ ತರಲು ನಾನು ಹಗಲು ರಾತ್ರಿ ಓಡಾಡುತ್ತಿದ್ದೇನೆ. ಆದರೆ, ನಮ್ಮವರು ಒಂದು ಕ್ಷೇತ್ರದ ಟಿಕೆಟ್‌ಗಾಗಿ ಚಿಂತೆ ಮಾಡುತ್ತಿದ್ದಾರೆ. ಬೇರೆ ಪಕ್ಷಗಳಿಗೆ ನೂರಾರು ಕ್ಷೇತಗಳ ಚಿಂತೆಯಿದೆ. ಆದರೆ ನಮಗೆ ಹಾಸನದ ಒಂದೇ ಕ್ಷೇತ್ರದ ಚಿಂತೆಯಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com