ಬಿಜೆಪಿಯ 23 ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ: ಮಾಡಾಳ್, ಕುಮಾರಸ್ವಾಮಿ ಸೇರಿ 7 ಶಾಸಕರಿಗೆ ಕೈ ತಪ್ಪಿದ ಟಿಕೆಟ್!
ವಿಧಾನಸಭಾ ಚುನಾವಣೆಗೆ ಬಿಜೆಪಿಯ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾದ 24 ಗಂಟೆಗಳಲ್ಲೇ 2 ನೇ ಪಟ್ಟಿ ದಿಢೀರ್ ಬಿಡುಗಡೆಯಾಗಿದೆ.
Published: 12th April 2023 11:33 PM | Last Updated: 13th April 2023 03:27 PM | A+A A-

ಮಾಡಾಲ್ ವಿರೂಪಕ್ಷಪ್ಪ- ಎಂಪಿ ಕುಮಾರಸ್ವಾಮಿ
ನವದೆಹಲಿ: ವಿಧಾನಸಭಾ ಚುನಾವಣೆಗೆ ಬಿಜೆಪಿಯ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾದ 24 ಗಂಟೆಗಳಲ್ಲೇ 2 ನೇ ಪಟ್ಟಿ ದಿಢೀರ್ ಬಿಡುಗಡೆಯಾಗಿದೆ.
ಬಿಜೆಪಿಯ 2 ನೇ ಪಟ್ಟಿ ಏ.13 ರಂದು ಬಿಡುಗಡೆಯಾಗುವ ನಿರೀಕ್ಷೆ ಇತ್ತು. ಆದರೆ ಇಂದು ರಾತ್ರಿ 11:00 ಗಂಟೆಗೆ 2 ನೇ ಪಟ್ಟಿ ಬಿಡುಗಡೆಯಾಗಿದೆ. ಮೊದಲ ಪಟ್ಟಿಯಲ್ಲಿ 189 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದರೆ, 2 ನೇ ಪಟ್ಟಿಯಲ್ಲಿ 23 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಲಾಗಿದೆ.
ಬಿಜೆಪಿಯ ಅಭ್ಯರ್ಥಿಗಳ 2 ನೇ ಪಟ್ಟಿ ಬಿಡುಗಡೆ #KarnatakaElections2023 #BJPcandidatesList #BJP2ndList @BJP4Karnataka pic.twitter.com/kK5BalnE5X
— kannadaprabha (@KannadaPrabha) April 12, 2023
ಇತ್ತೀಚೆಗೆ ಹಗರಣವೊಂದರಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಟಿಕೆಟ್ ತಪ್ಪಿದ್ದು, ಆ ಕ್ಷೇತ್ರದಿಂದ ಶಿವಕುಮಾರ್ ಎಂಬುವವರಿಗೆ ಟಿಕೆಟ್ ನೀಡಲಾಗಿದೆ.
ಇದನ್ನೂ ಓದಿ: 189 ಅಭ್ಯರ್ಥಿಗಳ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ: ಟಿಕೆಟ್ ವಂಚಿತರು & ಸ್ಪರ್ಧಿಸಲು ಅವಕಾಶ ಪಡೆದ ಅಭ್ಯರ್ಥಿಗಳು ಇವರು
ಇನ್ನು ಮೂಡಿಗೆರೆ ಹಾಲಿ ಶಾಸಕ ಎಂಪಿ ಕುಮಾರಸ್ವಾಮಿಗೂ ಟಿಕೆಟ್ ಕೈತಪ್ಪಿದ್ದು, ದೀಪಕ್ ದೊಡ್ಡಯ್ಯ ಅವರಿಗೆ ಟಿಕೆಟ್ ನೀಡಲಾಗಿದೆ.
2 ನೇ ಪಟ್ಟಿಯಲ್ಲಿ ಟಿಕೆಟ್ ಕಳೆದುಕೊಂಡ 5 ಹಾಲಿ ಶಾಸಕರು!
- ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ
- ಚೆನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ
- ಕಲಘಟಗಿ ಶಾಸಕ ನಿಂಬಣ್ಣನವರ್ ಲಿಂಗಣ್ಣ
- ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ
- ಹಾವೇರಿ ಶಾಸಕ ನೆಹರು ಓಲೆಕಾರ್
- ಮಾಯಕೊಂಡ ಶಾಸಕ ಎನ್ ಲಿಂಗಣ್ಣ
- ಗುರ್ಮಿಠಲ್ ಶಾಸಕ ನಾಗನಗೌಡ ಕಂದಕೂರ್
2 ನೇ ಪಟ್ಟಿಯಲ್ಲಿ ಟಿಕೆಟ್ ಪಡೆದ ಅಭ್ಯರ್ಥಿಗಳ ವಿವರ
- ದೇವರಹಿಪ್ಪರಗಿ-ಸೋಮನಗೌಡ ಪಾಟೀಲ್
- ಬಸವನಬಾಗೇವಾಡಿ -ಎಸ್ .ಕೆ.ಬೆಳ್ಳುಬ್ಬಿ
- ಇಂಡಿ-ಕಾಸಗೌಡ ಬಿರಾದಾರ್
- ಗುರುಮಿಠಕಲ್-ಲಲಿತ ಅನಪೂರ್
- ಬೀದರ್-ಈಶ್ವರ್ ಸಿಂಗ್ ಠಾಕೂರ್
- ಭಾಲ್ಕಿ -ಪ್ರಕಾಶ್ ಖಂಡ್ರೆ
- ಗಂಗಾವತಿ -ಪರಣ್ಣ ಮುನವಳ್ಳಿ
- ಕಲಘಟಗಿ-ನಾಗರಾಜ್ ಛಬ್ಬಿ
- ಹಾನಗಲ್-ಶಿವರಾಜ್ ಸಜ್ಜನರ್
- ಹಾವೇರಿ -ಗವಿಸಿದ್ದಪ್ಪ ದ್ಯಾಮಣ್ಣ ನವರ್
- ಹರಪನಹಳ್ಳಿ-ಕರುಣಾಕರ ರೆಡ್ಡಿ
- ದಾವಣಗೆರೆ ಉತ್ತರ-ಲೋಕೀಕೆರೆ ನಾಗರಾಜ್
- ದಾವಣಗೆರೆ ದಕ್ಷಿಣ-ಅಜಯ್ ಕುಮಾರ್
- ಮಾಯಕೊಂಡ -ಬಸವರಾಜ್ ನಾಯ್ಕ್
- ಚನ್ನಗಿರಿ-ಶಿವಕುಮಾರ್
- ಬೈಂದೂರು -ಗುರುರಾಜ್ ಗಂಟಿಹೊಳೆ
- ಮೂಡಿಗೆರೆ-ದೀಪಕ್ ದೊಡ್ಡಯ್ಯ
- ಗುಬ್ಬಿ -ಎಸ್.ಡಿ.ದಿಲೀಪ್ ಕುಮಾರ್
- ಶಿಡ್ಲಘಟ್ಟ- ರಾಮಚಂದ್ರ ಗೌಡ
- ಕೆಜಿಎಫ್ -ಅಶ್ವಿನಿ ಸಂಪಂಗಿ
- ಶ್ರವಣಬೆಳಗೊಳ -ಚಿದಾನಂದ
- ಅರಸೀಕೆರೆ-ಜಿ.ಬಿ.ಬಸವರಾಜು
- ಹೆಗ್ಗಡದೇವನಕೋಟೆ-ಕೃಷ್ಣ ನಾಯ್ಕ್