ಸಂಘದ ಸಂಸ್ಕಾರ, ಸಿದ್ಧಾಂತದಲ್ಲಿ ಮಿಂದೆದ್ದವರು ಕಾಂಗ್ರೆಸ್ ತೆಕ್ಕೆಗೆ: ಬಿಜೆಪಿಯ ಪ್ರಶ್ನಾತೀತ ನಾಯಕರ, ಶಿಸ್ತಿನ ಸಿಪಾಯಿಗಳ ಪಯಣ ಎಲ್ಲಿಗೆ?

 ಚುನಾವಣಾ ಸಮಯದಲ್ಲಿ ಪಕ್ಷಾಂತರ ಪರ್ವ ಮಾಮೂಲು, ಕಾಂಗ್ರೆಸ್ ನಾಯಕರು ಬಿಜೆಪಿ ಸೇರುವುದು ಹೆಚ್ಚಿನ ಮಟ್ಟದ ಸುದ್ದಿಯಲ್ಲ, ಆದರೆ ಆರ್ ಎಸ್ ಎಸ್ ನ ತತ್ವ ಸಿದ್ಧಾಂತಗಳಲ್ಲಿ ಮಿಂದೆದ್ದವರು ಕಾಂಗ್ರೆಸ್ ಸೇರುತ್ತಿರುವುದು ಹಲವು  ಪ್ರಶ್ನೆಗಳನ್ನು ಮೂಡಿಸಿದೆ.
ಬಿಜೆಪಿಯ ಪ್ರಶ್ನಾತೀತ ನಾಯಕರ, ಶಿಸ್ತಿನ ಸಿಪಾಯಿಗಳ ಪಯಣ ಎಲ್ಲಿಗೆ
ಬಿಜೆಪಿಯ ಪ್ರಶ್ನಾತೀತ ನಾಯಕರ, ಶಿಸ್ತಿನ ಸಿಪಾಯಿಗಳ ಪಯಣ ಎಲ್ಲಿಗೆ
Updated on

ಬೆಂಗಳೂರು:  ಚುನಾವಣಾ ಸಮಯದಲ್ಲಿ ಪಕ್ಷಾಂತರ ಪರ್ವ ಮಾಮೂಲು, ಕಾಂಗ್ರೆಸ್ ನಾಯಕರು ಬಿಜೆಪಿ ಸೇರುವುದು ಹೆಚ್ಚಿನ ಮಟ್ಟದ ಸುದ್ದಿಯಲ್ಲ, ಆದರೆ ಆರ್ ಎಸ್ ಎಸ್ ನ ತತ್ವ ಸಿದ್ಧಾಂತಗಳಲ್ಲಿ ಮಿಂದೆದ್ದವರು ಕಾಂಗ್ರೆಸ್ ಸೇರುತ್ತಿರುವುದು ಹಲವು  ಪ್ರಶ್ನೆಗಳನ್ನು ಮೂಡಿಸಿದೆ.

ಶಿಸ್ತಿನ ಪಕ್ಷವೆಂದು ಕರೆಯಲ್ಪಡುವ ಬಿಜೆಪಿಯು ಹಲವಾರು ಪ್ರಬಲ ನಾಯಕರು ಪಕ್ಷದಿಂದ ಶೀಘ್ರವಾಗಿ ನಿರ್ಗಮಿಸಿದ ನಂತರ ಬಿಜೆಪಿ ಕರಗುತ್ತಿರುವಂತೆ ಕಾಣುತ್ತಿದೆ. ಕೇಸರಿ ಪಕ್ಷ ಹಿಂದೆಂದೂ ಈ ರೀತಿಯ ಮುಜುಗರಕ್ಕೊಳಗಾಗಿರಲಿಲ್ಲ.

ಬುಧವಾರ ಎಂಎಲ್ಸಿ ಆಯನೂರು ಮಂಜುನಾಥ್ ಬಿಜೆಪಿ ತೊರೆದು ಜೆಡಿಎಸ್ ಸೇರಿ ಶಿವಮೊಗ್ಗದಿಂದ ಸ್ಪರ್ಧಿಸಿದ್ದಾರೆ.  ಹಿಂದುಳಿದ ವರ್ಗಗಳ ಮುಖಂಡ ಅಡಗೂರು ವಿಶ್ವನಾಥ್ ಅವರು ಬಿಜೆಪಿ ತೊರೆಯುವ ನಿರೀಕ್ಷೆಯಿತ್ತು, ಕಾಂಗ್ರೆಸ್ ಸೇರಲು ಕೆಪಿಸಿಸಿ ಕಚೇರಿಯಲ್ಲಿ ಕಾಣಿಸಿಕೊಂಡಿದ್ದರು, ಆದರೆ ತಾಂತ್ರಿಕ ದೋಷದಿಂದ ರಾಜೀನಾಮೆ ನೀಡಲಿಲ್ಲ.

ಬಿಜೆಪಿ ನಾಯಕರು ತಮಗೆ ಸಚಿವ ಸ್ಥಾನದ ಭರವಸೆ ನೀಡಿದ್ದರು, ಆದರೆ ಬಿಜೆಪಿ ಕೊಟ್ಟ ಮಾತಿನಿಂದ ಹಿಂದೆ ಸರಿಯಿತು ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ, ಕಾನೂನು ತಜ್ಞರ ಸಲಹೆ ಮೇರೆಗೆ ವಿಶ್ವನಾಥ್ ಸದ್ಯಕ್ಕೆ ಬಿಜೆಪಿ ತೊರೆಯದೇ ಇರಬಹುದು ಆದರೆ ಮುಂದೊಂದು ದಿನ ಗುಡ್ ಬೈ ಹೇಳಲಿದ್ದಾರೆ. ರಾಣೆಬೆನ್ನೂರಿನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು 14 ತಿಂಗಳ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ಮತ್ತೊಬ್ಬ ಹಿಂದುಳಿದ ವರ್ಗಗಳ ಮುಖಂಡ ಹಾಗೂ ಮಾಜಿ ಶಾಸಕ ಆರ್.ಶಂಕರ್ ಅವರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಲಾಗಿತ್ತಾದರೂ ನಂತರ ಎಂಎಲ್ಸಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಬಿಜೆಪಿಯಿಂದ ಹೊರಬಂದವರ ಪಟ್ಟಿ ದೊಡ್ಡದಿದೆ - ಮಾಜಿ ಡಿಸಿಎಂ ಜಗದೀಶ್ ಶೆಟ್ಟರ್ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಲ್ಲದೆ, ಜೆಡಿಯು ಅಧ್ಯಕ್ಷ ಬಿ ಸೋಮಶೇಖರ್ ಮತ್ತು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಕಾಂಗ್ರೆಸ್ ಸೇರಿದ್ದಾರೆ. ಇವರ ಜೊತೆಗೆ ಎಂಎಲ್ ಸಿ ಪುಟ್ಟಣ್ಣ ಕೂಡ ಪಟ್ಟಿಯಲ್ಲಿದ್ದಾರೆ.

ಲಿಂಗಾಯತ ಬೆಂಬಲವನ್ನು ಹೇಗೆ ಹಿಂಪಡೆಯಬೇಕು ಎಂಬುದನ್ನು ನಿರ್ಧರಿಸಲು ಸಭೆ ನಡೆಸುವುದಕ್ಕಿಂತ ಪ್ರಾಯೋಗಿಕವಾಗಿ ಏನಾದರೂ ಮಾಡುವ ಸಮಯ ಇದು ಎಂದು ಕೆಲವು ಬಿಜೆಪಿ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ.

ಕೆಲವರಷ್ಟೇ ಬಿಟ್ಟು ಹೋಗಿದ್ದಾರೆ, ಆದರೆ ಹಲವರು ಬಿಜೆಪಿ ಸೇರಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿ ಕುಮಾರ್ ಹೇಳಿದ್ದಾರೆ. ಇತ್ತೀಚೆಗೆ ಎಟಿ ರಾಮಸ್ವಾಮಿ ಮತ್ತು ಸಿಂಧನೂರಿನ ಕೆ ಕರಿಯಪ್ಪ ಮತ್ತು ಮಾನ್ವಿಯಿಂದ ಬಿ ವಿ ನಾಯಕ್ ಪಕ್ಷ ಸೇರಿದ್ದಾರೆ ಎಂದಿದ್ದಾರೆ.

ಹಲವು ಕ್ಷೇತ್ರಗಳಲ್ಲಿ ಟಿಕೆಟ್ ಸಿಗದ ಕಾರಣ ಬಿಜೆಪಿಯಲ್ಲೇ ಮುಂದುವರಿದವರೂ ಇದ್ದಾರೆ. ನಮ್ಮಲ್ಲಿ ಅರ್ಧ ಡಜನ್‌ಗಿಂತಲೂ ಹೆಚ್ಚು ಗಂಭೀರ ಆಕಾಂಕ್ಷಿಗಳು ಟಿಕೆಟ್ ಸಿಗದಿದ್ದರೂ ಉಳಿದುಕೊಂಡಿದ್ದಾರೆ. 30ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಭಿನ್ನಮತವಿದೆ ಎಂದು ಹೇಳಿರುವ ರವಿಕುಮಾರ್, ಯಡಿಯೂರಪ್ಪ ಅವರ ನಿರ್ಗಮನದಿಂದ ಪಕ್ಷದಲ್ಲಿ ಹಿರಿಯ ವ್ಯಕ್ತಿ ಅಥವಾ ತಂದೆಯ ಗೈರುಹಾಜರಿಯಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com