'ಮುನಿ' ಓಟಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ತಂತ್ರ: 'ರಾಜರಾಜೇಶ್ವರಿ' ಆಶೀರ್ವಾದ ಕಮಲಕ್ಕೋ, ಕುಸುಮಾಗೋ?
ಮೈಸೂರು ರಸ್ತೆಯಿಂದ ಮಾಗಡಿ ರಸ್ತೆ ಮೂಲಕ ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುವ ದೊಡ್ಡ ಕ್ಷೇತ್ರವಾದ ರಾಜರಾಜೇಶ್ವರಿನಗರದಲ್ಲಿ ಮುನಿರತ್ನ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ.
Published: 25th April 2023 12:50 PM | Last Updated: 25th April 2023 08:12 PM | A+A A-

ಮುನಿರತ್ನ ಮತ್ತು ಕುಸುಮಾ
ಬೆಂಗಳೂರು: ಪ್ರತಿಷ್ಠಿತ ಕಣವೆಂದೇ ಪರಿಗಣಿಸಲ್ಪಟ್ಟಿರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ
ಮೈಸೂರು ರಸ್ತೆಯಿಂದ ಮಾಗಡಿ ರಸ್ತೆ ಮೂಲಕ ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುವ ದೊಡ್ಡ ಕ್ಷೇತ್ರವಾದ ರಾಜರಾಜೇಶ್ವರಿನಗರದಲ್ಲಿ ಮುನಿರತ್ನ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಮರು ಆಯ್ಕೆ ಬಯಸಿರುವ ಸಚಿವ ಮುನಿರತ್ನ ಹಾಗೂ 2020ರಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಕುಸುಮಾ ಎಚ್ ಅವರ ನಡುವೆ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ.
2018-19ರ ಚುನಾವಣೆಯಲ್ಲಿ ನಕಲಿ ವೋಟರ್ ಐಡಿಗಳ ಆರೋಪಗಳು ಪುನರಾವರ್ತನೆಯಾಗದಂತೆ ನಿಷ್ಪಕ್ಷಪಾತ ಚುನಾವಣೆಗಾಗಿ ಚುನಾವಣಾ ಆಯೋಗ, ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಪೊಲೀಸರು ಎಲ್ಲಾ ರೀತಿಯ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ಬಿಪಿಎಲ್ ಮತದಾರರು ಮುನಿರತ್ನ ಅವರತ್ತ ಒಲವು ತೋರಿದ್ದರೂ ಸಹ, ಕಾಂಗ್ರೆಸ್ ಕಠಿಣ ಪ್ರಬಲ ಪೈಪೋಟಿ ನೀಡುತ್ತಿದೆ. ಕಳೆದ ಚುನಾವಣೆಯಲ್ಲಿ ಮುನಿರತ್ನ ಅವರಿಗೆ ಮಣೆ ಹಾಕಿದ್ದ ಮಧ್ಯಮ ವರ್ಗದ ಹಾಗೂ ಕೆಳವರ್ಗದ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಶ್ರಮಿಸುತ್ತಿದೆ. ಕಾಂಗ್ರೆಸ್‌ಗೆ, 14 ವಾರ್ಡ್‌ಗಳ ಕ್ಷೇತ್ರವು ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರ ಸಂಸದೀಯ ಕ್ಷೇತ್ರವಾದ ಬೆಂಗಳೂರು ಗ್ರಾಮಾಂತರದ ವ್ಯಾಪ್ತಿಗೆ ಬರುವುದರಿಂದ ಡಿ.ಕೆ ಸುರೇಶ್ ಗೆ ಪ್ರತಿಷ್ಠೆಯ ವಿಷಯವಾಗಿದೆ.
ಇದನ್ನೂ ಓದಿ: ಕೊನೆಕ್ಷಣದಲ್ಲಿ ನಾಮಪತ್ರ ಹಿಂಪಡೆದ ಜೆಡಿಎಸ್ ಅಭ್ಯರ್ಥಿ: ಗೋಕಾಕದಲ್ಲಿ ರಮೇಶ ಜಾರಕಿಹೊಳಿ ಸೋಲಿಸಲು ಕಾಂಗ್ರೆಸ್ ಜೊತೆ ಮೈತ್ರಿ
ದಿವಂಗತ ಐಎಎಸ್ ಅಧಿಕಾರಿ ಡಿಕೆ ರವಿ ಪತ್ನಿ ಕುಸುಮಾ ಹನುಮಂತರಾಯಪ್ಪ 2020ರ ವಿಧಾನಸಭೆ ಉಪಚುನಾವಣೆಯಲ್ಲಿ ಸೋತ ನಂತರ, ಕ್ಷೇತ್ರದಲ್ಲಿ ತಮ್ಮ ಕೆಲಸ ಮುಂದುವರಿಸಿಕೊಂಡು ಬಂದಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ತಟಸ್ಥ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿವೆ. ಹಾಗೂ ಮತದಾನದ ಪ್ರಮಾಣವನ್ನು ಹೆಚ್ಚಿಸುವತ್ತ ಗಮನಹರಿಸುತ್ತಿವೆ. ಕಳೆದ ಬಾರಿ ಕಡಿಮೆ ಮತದಾನವನ್ನು ದಾಖಲಿಸಿದ ಬೆಂಗಳೂರಿನ ಕ್ಷೇತ್ರಗಳಲ್ಲಿ ಆರ್ ಆರ್ ನಗರ ಕೂಡ ಒಂದಾಗಿದೆ. ಕೇವಲ 45.40 ರಷ್ಟು, ಮಾತ್ರ ಮತದಾನವಾಗಿತ್ತು.
ದಿವಂಗತ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಪತ್ನಿ ಕುಸುಮಾ ಅವರು ಉಪಚುನಾವಣೆಯಲ್ಲಿ ಸೋತ ನಂತರ 2020 ರಿಂದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿ ನಾರಾಯಣಸ್ವಾಮಿ ಕೂಡ ಮತದಾರರೊಂದಿಗೆ ಸಂಪರ್ಕ ಸಾಧಿಸುವ ಪ್ರಯತ್ನ ನಡೆಸುತ್ತಿದ್ದಾರೆ.
ಮಿಶ್ರ ಜನಸಂಖ್ಯೆಯ 4,57,935 ಮತದಾರರನ್ನು ಕ್ಷೇತ್ರ ಹೊಂದಿದೆ. ಹಲವು ಸ್ಲಂಗಳು, ಜ್ಞಾನಭಾರತಿ ಕ್ಯಾಂಪಸ್, ಗ್ಲೋಬಲ್ ಟೆಕ್ ವಿಲೇಜ್ ಮತ್ತು ಸಿಟಿ ಮುನ್ಸಿಪಲ್ ಕಾರ್ಪೊರೇಷನ್ (CMC) ಗ್ರಾಮಗಳು ಸೇರಿದಂತೆ ಪ್ರಸಿದ್ಧ ಶಿಕ್ಷಣಸಂಸ್ಥೆಗಳನ್ನು ಹೊಂದಿದೆ, ಇವುಗಳು ಈಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಯ ಭಾಗವಾಗಿದೆ. ಪ್ರತಿಯೊಂದಕ್ಕೂ ತನ್ನದೇ ಆದ ಬೇಡಿಕೆಗಳಿವೆ.
ಲಗ್ಗೆರೆ ಮತ್ತು ಯಶವಂತಪುರದಂತಹ ಪ್ರದೇಶಗಳಲ್ಲಿ, ನಾಗರಿಕರು ಸರಿಯಾದ ರಸ್ತೆಗಳು, ನೀರು ವಿತರಣಾ ಘಟಕಗಳು ಮತ್ತು ನಾಗರಿಕ ಮೂಲಸೌಕರ್ಯಗಳನ್ನು ನೀಡಿದ ಅಭ್ಯರ್ಥಿಗೆ ಆದ್ಯತೆ ನೀಡುವಂತೆ ಕಾಣುತ್ತಿದೆ. ಆರ್‌ಆರ್ ನಗರ, ಉಳ್ಳಾಲ, ಕೆಂಗೇರಿ, ಎಚ್‌ಎಂಟಿ ಲೇಔಟ್ ನಲ್ಲಿ ವಾಸಿಸುವ ಮತದಾರರು ಪರಿಸರ ಕಾಳಜಿ ಬಗ್ಗೆ ಗಮನ ಹರಿಸಿದ್ದಾರೆ.
ಇದನ್ನೂ ಓದಿ: ಖರ್ಗೆ ತವರಲ್ಲಿ ಕೇಸರಿ ಕಲಿಗಳ ಬಲ ಪ್ರದರ್ಶನ: ಎಐಸಿಸಿ ಅಧ್ಯಕ್ಷರ ಶಕ್ತಿ ಕುಂದಿಸಲು ಘಟಾನುಘಟಿಗಳ ರಂಗ ಪ್ರವೇಶ!
ನಗರ ಪ್ರದೇಶದ ಗಣ್ಯರು ಮತದಾನದಿಂದ ದೂರ ಉಳಿದ ಕಾರಣ 2020 ರ ಉಪಚುನಾವಣೆಯಲ್ಲಿ, ಕ್ಷೇತ್ರದಲ್ಲಿ ಶೇಕಡಾ 45.40 ರಷ್ಟು ಮತದಾನವಾಗಿತ್ತು. ಬಿಜೆಪಿ ಪಡೆದ ಮತಗಳಲ್ಲಿ ಸುಮಾರು 30 ಪ್ರತಿಶತದಷ್ಟು ಮತಗಳು ಆರ್ಥಿಕವಾಗಿ ದುರ್ಬಲ ವರ್ಗಗಳಿಂದ ಬಂದವಾಗಿದವು. ಉಪ ಚುನಾವಣೆಯಲ್ಲಿ ಮುನಿರತ್ನ , ಕುಸುಮಾ ಅವರನ್ನು 58,113 ಮತಗಳಿಂದ ಸೋಲಿಸಿದರು.
2018 ರ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ 54.34 ರಷ್ಟು ಮತದಾನವಾದಾಗಿತ್ತು, ಆಗ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುನಿರತ್ನ ಬಿಜೆಪಿಯ ಮುನಿರಾಜು ಗೌಡ ಪಿಎಂ ಅವರನ್ನು 25,492 ಮತಗಳಿಂದ ಸೋಲಿಸಿದ್ದರು.
ಈ ಬಾರಿ ಮುನಿರತ್ನ ವಿರುದ್ಧ ಆಡಳಿತ ವಿರೋಧಿ ಅಲೆ ಇದ್ದಂತೆ ತೋರುತ್ತಿದೆ. ವೃಷಭಾವತಿ ಕಣಿವೆಯ ಉದ್ದಕ್ಕೂ ಇರುವ ಪ್ರದೇಶಗಳು ಪದೇ ಪದೇ ಪ್ರವಾಹ ಕಂಡಿವೆ, ಆದರೆ ಇದುವರೆಗೂ ಅದನ್ನು ಸರಿಪಡಿಸಲು ಹೆಚ್ಚಿನ ಕ್ರಮ ಕೈಗೊಂಡಿಲ್ಲ.
ಇದನ್ನೂ ಓದಿ: ವಿಧಾನಸಭೆ ಚುನಾವಣೆ: ಮೋದಿ, ಯೋಗಿ, ಬೊಮ್ಮಾಯಿಯಿಂದ 'ವಿಶೇಷ ಮಹಾಪ್ರಚಾರ ಅಭಿಯಾನ'
ಉತ್ತಮ ರಸ್ತೆಗಳನ್ನು ನಿರ್ಮಿಸಲು ಮರಗಳನ್ನು ದೊಡ್ಡ ಪ್ರಮಾಣದಲ್ಲಿ ಕತ್ತರಿಸಲಾಯಿತು. ಕೆರೆಗಳನ್ನು ಕಾಂಕ್ರಿಟೀಕರಣಗೊಳಿಸಲಾಗಿದೆ. ಅಲ್ಲದೆ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಮಧ್ಯಪ್ರವೇಶದ ನಂತರವೂ ಕಸದ ಮಾಫಿಯಾ ಆತಂಕ ಮುಂದುವರೆಸಿದೆ, ಎಂದು ನಿವಾಸಿ ಭಾರತಿ (ಹೆಸರು ಬದಲಾಯಿಸಲಾಗಿದೆ) ಹೇಳಿದರು.