ಸುಮಲತಾ ಅಂಬರೀಷ್
ಸುಮಲತಾ ಅಂಬರೀಷ್

ಒಂದು ಕುಟುಂಬ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ಬರಲಿ ಎಂದು ಕಾಯುತ್ತಾ ಕುಳಿತಿದೆ: ಹೆಚ್ ಡಿಕೆಗೆ ಸುಮಲತಾ ಟಾಂಗ್

ಸ್ವಾಭಿಮಾನಿ ಹೆಸರಿನಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ವಿರುದ್ಧ ಗೆದ್ದು ಸಂಸದೆಯಾಗಿ ಇತ್ತೀಚೆಗೆ ಬಿಜೆಪಿಗೆ ಬಾಹ್ಯ ಬೆಂಬಲ ನೀಡಿರುವ ಸುಮಲತಾ ಅಂಬರೀಷ್ ಇಂದು ಬುಧವಾರ ಮಂಡ್ಯದಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಮಂಡ್ಯ: ಸ್ವಾಭಿಮಾನಿ ಹೆಸರಿನಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ವಿರುದ್ಧ ಗೆದ್ದು ಸಂಸದೆಯಾಗಿ ಇತ್ತೀಚೆಗೆ ಬಿಜೆಪಿಗೆ ಬಾಹ್ಯ ಬೆಂಬಲ ನೀಡಿರುವ ಸುಮಲತಾ ಅಂಬರೀಷ್ ಇಂದು ಬುಧವಾರ ಮಂಡ್ಯದಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಮತ್ತೆ ಜೆಡಿಎಸ್ ಶಾಸಕರು ಮತ್ತು ಹೆಚ್ ಡಿ ಕುಮಾರಸ್ವಾಮಿ ಕುಟುಂಬದ ಮೇಲೆ ಹರಿಹಾಯ್ದಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರ ಜೆಡಿಎಸ್ ಪಾಲಾದರೂ, ಮೂವರು ಸಚಿವರುಗಳು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಆದರೂ ಜಿಲ್ಲೆಗೆ ಅವರ ಕೊಡುಗೆಗಳು ಶೂನ್ಯ. ಮೈ ಶುಗರ್ ಫ್ಯಾಕ್ಟರಿ ಸಮಸ್ಯೆ ನಾನು ಸಂಸದೆಯಾದ ನಂತರ ನನ್ನ ಪ್ರಯತ್ನದಿಂದ ಬಗೆಹರಿಯಿತು ಎಂದರು.

ಮಂಡ್ಯದಲ್ಲಿ ಬದಲಾವಣೆ ಬೇಕಿದೆ. ಈ ಭಾಗದ ಜೆಡಿಎಸ್ ಶಾಸಕರು ಯಾವ ಕೆಲಸ ಮಾಡಿದ್ದಾರೆ ಒಂದನ್ನ ತೋರಿಸಿ. ಯಾರೊ ಕನಸು ಕಾಣುತ್ತಿದ್ದಾರೆ ಅತಂತ್ರ ಪರಿಸ್ಥಿತಿ ಬರಲಿ ಅಂತ. ನಾನೇ ಸಿಎಂ ಆಗಬೇಕು ಅಂತ ಕನಸನ್ನು ಕಾಣುತ್ತಿದ್ದಾರೆ, ಆ ಒಂದೇ ಕುಟುಂಬದ ಸುತ್ತ ಅಧಿಕಾರ ಸುತ್ತುತ್ತಿರಬೇಕು ಎಂದು ಬಯಸುತ್ತಿದ್ದಾರೆ ಎಂದು ಪರೋಕ್ಷವಾಗಿ ಹೆಚ್ ಡಿ ಕುಮಾರಸ್ವಾಮಿಗೆ ಟಾಂಗ್ ನೀಡಿದರು.

ಈ ಹಿಂದೆ ಉತ್ತರಪ್ರದೇಶ ಗೂಂಡಾ ರಾಜ್ಯ ಎಂದು ಕುಖ್ಯಾತಿಯಾಗಿತ್ತು. ಯೋಗಿಯವರು ಬಂದ ಮೇಲೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಜನ ತಾವು ಸಂಪಾದಿಸಿದ ಹಣವನ್ನು ರೌಡಿಗಳಿಗೆ ಹಫ್ತಾ ನೀಡಬೇಕಿತ್ತು. ಯೋಗಿ ಸರ್ಕಾರ ಬಂದ ಮೇಲೆ ರೌಡಿಗಳು ಓಡಿ ಹೋಗಿದ್ದಾರೆ. ಉತ್ತರ ಪ್ರದೇಶದಲ್ಲಿ ಜನರು ಈಗ ನಿರ್ಭಯವಾಗಿ ಒಡಾಡುತ್ತಿದ್ದಾರೆ, ಕರ್ನಾಟಕದಲ್ಲಿಯೂ ಅಬಿವೃದ್ಧಿಪರ ಕೆಲಸವಾಗಬೇಕೆಂದರೆ ಬಿಜೆಪಿಗೆ ಮತ ನೀಡಿ, ಮಂಡ್ಯದಲ್ಲಿ ಕಮಲ ಚಿಹ್ನೆಗೆ ಈ ಬಾರಿ ನಿಮ್ಮ ಮತಗಳನ್ನು ಹಾಕಿ ಎಂದು ಸಂಸದೆ ಸುಮಲತಾ ಅಂಬರೀಷ್ ಮತದಾರರಿಗೆ ಮನವಿ ಮಾಡಿಕೊಂಡರು.

Related Stories

No stories found.

Advertisement

X

Advertisement

X
Kannada Prabha
www.kannadaprabha.com