ಬಿಜೆಪಿಯ 'ಟೆಂಗಿನಕಾಯಿ' ನನ್ನ ಶಿಷ್ಯ ಅಲ್ಲ, ಅವರ ಗುರು ದೆಹಲಿಯಲ್ಲಿದ್ದಾರೆ: ಶೆಟ್ಟರ್ ಟಾಂಗ್

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ವಿರುದ್ಧ ಕಣಕ್ಕಿಳಿದಿದ್ದಾರೆ, ಇದನ್ನು 'ಗುರು-ಶಿಷ್ಯ' ಸ್ಪರ್ಧೆ ಎಂದು ಪರಿಗಣಿಸಲಾಗಿದೆ.
ಜಗದೀಶ್ ಶೆಟ್ಟರ್ ಮತ್ತು ಮಹೇಶ್ ಟೆಂಗಿನಕಾಯಿ
ಜಗದೀಶ್ ಶೆಟ್ಟರ್ ಮತ್ತು ಮಹೇಶ್ ಟೆಂಗಿನಕಾಯಿ

ಹುಬ್ಬಳ್ಳಿ:  ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ವಿರುದ್ಧ ಕಣಕ್ಕಿಳಿದಿದ್ದಾರೆ, ಇದನ್ನು 'ಗುರು-ಶಿಷ್ಯ' ಸ್ಪರ್ಧೆ ಎಂದು ಪರಿಗಣಿಸಲಾಗಿದೆ.

ಆದರೆ  ಮಾಜಿ ಮುಖ್ಯಮಂತ್ರಿ ಶೆಟ್ಟರ್ ಈ ಹೇಳಿಕೆ ತಿರಸ್ಕರಿಸುತ್ತಾರೆ, ಮಹೇಶ್ ಟೆಂಗಿನಕಾಯಿ ನನ್ನ ಶಿಷ್ಯನಲ್ಲ, ಆತನ ಗುರುಗಳು ದೆಹಲಿಯಲ್ಲಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.

ಇತ್ತೀಚೆಗಷ್ಟೇ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಹಿರಿಯ ಬಿಜೆಪಿ ನಾಯಕ ಶೆಟ್ಟರ್, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ ಎಲ್ ಸಂತೋಷ್ ಅವರು ಟಿಕೆಟ್‌ಗಾಗಿ ಮಾಡಿದ ಮನವಿಯನ್ನು ತಿರಸ್ಕರಿಸಿದ್ದಾರೆ , ನನ್ನ ಬದಲು ಟೆಂಗಿನಕಾಯಿ ಅವರನ್ನು ಕಣಕ್ಕಿಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಶೆಟ್ಟರ್ ಅವರು ಕಾಂಗ್ರೆಸ್ ಟಿಕೆಟ್‌ನಲ್ಲಿ ತಮ್ಮ ಸಾಂಪ್ರದಾಯಿಕ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಅವರನ್ನು ಸೋಲಿಸಲು ಮತ್ತು ಸಂಘಟನೆಯೇ ಸರ್ವೋಚ್ಚ ಎಂಬ ಸಂದೇಶವನ್ನು ರವಾನಿಸಲು ಬಿಜೆಪಿ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸಲಿದೆ ಎಂದು ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿಯವರು ನನಗೆ ಅಗೌರವ ತೋರಿದ್ದಾರೆ, ನನ್ನ ಆತ್ಮಗೌರವಕ್ಕೆ ಧಕ್ಕೆಯಾಗಿದೆ ಮತ್ತು ಆ ಕಾರಣಕ್ಕಾಗಿ ನಾನು ಕಾಂಗ್ರೆಸ್‌ಗೆ ಹೋಗಿದ್ದೇನೆ. ನನಗೆ ಕಾಂಗ್ರೆಸ್ ಪಕ್ಷದಿಂದ ಯಾವುದೇ ನಿರೀಕ್ಷೆಯಿಲ್ಲ. ನಾನು ಸ್ವಾಭಿಮಾನ ಮತ್ತು ಗೌರವವನ್ನು ಮಾತ್ರ ನಿರೀಕ್ಷಿಸುತ್ತೇನೆ. ನನ್ನ ಸ್ಥಾನವು ಕೇವಲ ಒಂದು ಶಾಸಕ, ನಾನು ಜನರಿಗಾಗಿ ಕೆಲಸ ಮಾಡುತ್ತೇನೆ ಎಂದು ಶೆಟ್ಟರ್ ತಿಳಿಸಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪ್ರಮುಖ ರಾಜಕೀಯ ವ್ಯಕ್ತಿಗಳಲ್ಲಿ ಶೆಟ್ಟರ್ ಒಬ್ಬರು. ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ಜತೆಗಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದ್ದು, ಸುದೀರ್ಘ ಕಾಲ ಬಿಜೆಪಿಯಲ್ಲಿದ್ದ ಅವರು ಪಕ್ಷ ತ್ಯಜಿಸಿದ್ದಾರೆ.

'ನನಗೆ ಟಿಕೆಟ್ ನಿರಾಕರಿಸಿದ್ದಕ್ಕೆ ಕಾರಣ ನೀಡುವಂತೆ ಹೈಕಮಾಂಡ್ ಮತ್ತು ರಾಜ್ಯ ನಾಯಕರಿಗೆ ಹಲವು ಬಾರಿ ಕೇಳಿದ್ದೇನೆ. ವಯಸ್ಸಿನ ಕಾರಣವೋ, ಸಮೀಕ್ಷಾ ವರದಿಯೋ ಅಥವಾ ಭ್ರಷ್ಟಾಚಾರದ ಆರೋಪವೋ, ಆರೋಪವೋ, ಹಗರಣವೋ, ಅಪರಾಧ ಹಿನ್ನೆಲೆ ಇದೆಯೇ ನನಗೆ. ಆದರೆ ಅವರು ಯಾವುದೇ ಕಾರಣವನ್ನು ಅವರು ನೀಡಿಲ್ಲ ಎಂದಿದ್ದಾರೆ.

ನಡ್ಡಾ ಮತ್ತು ಧರ್ಮೇಂದ್ರ ಪ್ರಧಾನ್ ಕೂಡ ನನಗೆ ಕರೆ ಮಾಡಿದ್ದಾರೆ. ನನ್ನ ಜನಪ್ರಿಯತೆ ಕಡಿಮೆಯಾಗಿದೆಯೇ ಎಂದು ನಾನು ಅವರನ್ನು ಕೇಳಿದೆ? ಸಮೀಕ್ಷೆಯ ವರದಿ ಏನು? ಸಮೀಕ್ಷೆಯಲ್ಲಿ 'ನಿಮ್ಮ ವರದಿ ತುಂಬಾ ಸಕಾರಾತ್ಮಕವಾಗಿದೆ ಎಂದು ಇಬ್ಬರೂ ಹೇಳಿದ್ದಾರೆ. ಜನಪ್ರಿಯ ನಾಯಕ ಮತ್ತು ನೀವು ಆಯ್ಕೆಯಾಗುತ್ತೀರಿ ಎಂದು ಹೇಳಿದ್ದಾಗಿ ಶೆಟ್ಟರ್ ತಿಳಿಸಿದ್ದಾರೆ.

ಇತ್ತೀಚೆಗೆ ಮಹೇಶ್ ಟೆಂಗಿನಕಾಯಿ ಅವರನ್ನು ‘ಗುರು’ ಎಂದು ಕರೆದಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಉತ್ತರಿಸಿದ ಅವರು, ನಾನು ಅವರ ಗುರು ಎಂದು ಹೇಳುತ್ತಿದ್ದಾರೆ, ಅವರ ಗುರುಗಳು ದೆಹಲಿಯಲ್ಲಿದ್ದಾರೆ, ಅವರು ನನ್ನ ಶಿಷ್ಯನಲ್ಲ ಎಂದು ಹೇಳಿದರು.

ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೆ ಟಿಕೆಟ್ ನಿರಾಕರಿಸಿದ್ದಕ್ಕೆ ಶೆಟ್ಟರ್ ವ್ಯಂಗ್ಯವಾಡಿದ್ದಾರೆ. ಅವರಿಗೆ ಅನೇಕ 'ಮಾನಸ ಪುತ್ರರು' (ಮಗನಂತಿರುವ ವ್ಯಕ್ತಿ) ಇದ್ದಾರೆ ಎಂದು ಶೆಟ್ಟರ್ ಕಾಂಗ್ರೆಸ್ ಸೇರಿದ ನಂತರ ಸಂತೋಷ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

2018 ರಲ್ಲಿ ಅವರು ಕಲಘಟಗಿಯಿಂದ ಟಿಕೆಟ್ ಪಡೆದು ನಾಮಪತ್ರ ಸಲ್ಲಿಸಿದ ನಂತರ ಪಕ್ಷವು ಹಿಂತೆಗೆದುಕೊಳ್ಳುವಂತೆ ಹೇಳಿತು, ಆಗನ ನಾನು ಯಾವುದೇ ಮುಜುಗರವಿಲ್ಲದೇ ವಾಪಸ್ ತೆಗೆದುಕೊಂಡೆ ಎಂದು ಮಹೇಶ್ ಟೆಂಗಿನಕಾಯಿ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಅವರ ನಿರ್ಧಾರವನ್ನು ನಾನು ಪ್ರಶ್ನಿಸಲಿಲ್ಲ, ಪಕ್ಷ ಏನು ಹೇಳಿದರೂ ನಾನು ಮೌನವಾಗಿ ಅನುಸರಿಸುತ್ತೇನೆ, ನಾನು ಪಕ್ಷದ ಸೂಚನೆಗಳನ್ನು ಪಾಲಿಸುವ ಕಾರ್ಯಕರ್ತ" ಎಂದು ಅವರು ಹೇಳಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಟೆಂಗಿನಕಾಯಿ, "ಚುನಾವಣೆಯಲ್ಲಿ ರಾಹುಲ್ ಗಾಂಧಿ ಏನು ಹೇಳುತ್ತಾರೆಂದು ಯಾರಿಗೂ ತಿಳಿದಿಲ್ಲ, ಯಾರು ಭ್ರಷ್ಟರು, ಯಾರು ಅಲ್ಲ ಎಂದು ಎಲ್ಲರಿಗೂ ತಿಳಿಯುತ್ತದೆ. ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುತ್ತದೆ ಎಂದರು.

ಶೆಟ್ಟರ್ ಅವರ ಸಾಮರ್ಥ್ಯವನ್ನು ಪ್ರಶ್ನಿಸಿದ ಟೆಂಗಿನಕಾಯಿ, "ಈ ಬಾರಿ ಚುನಾವಣೆಯಲ್ಲಿ ನನ್ನ ಗುರುಗಳಾದ ಜಗದೀಶ್ ಶೆಟ್ಟರ್ ವಿರುದ್ಧ ಗೆಲ್ಲುವ ವಿಶ್ವಾಸವಿದೆ, ಜಗದೀಶ್ ಶೆಟ್ಟರ್ ಸಾಹೇಬರು ತಮ್ಮ ಶಿಷ್ಯರನ್ನು ಗೆಲ್ಲಿಸುತ್ತಾರೆ" ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com