ಸೋನಿಯಾ ವಿಷಕನ್ಯೆ: ಮೋದಿ ಸಮ್ಮುಖದಲ್ಲಿ ಹೇಳಿಕೆ ಸಮರ್ಥಿಸಿಕೊಂಡ ಯತ್ನಾಳ್!
ವಿಜಯಪುರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷೆ 'ಸೋನಿಯಾ ಗಾಂಧಿ ವಿಷಕನ್ಯೆ' ಎಂದು ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
Published: 29th April 2023 10:12 PM | Last Updated: 02nd May 2023 06:36 PM | A+A A-

ಬಸನಗೌಡ ಪಾಟೀಲ್ ಯತ್ನಾಳ್
ವಿಜಯಪುರ: ವಿಜಯಪುರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷೆ 'ಸೋನಿಯಾ ಗಾಂಧಿ ವಿಷಕನ್ಯೆ' ಎಂದು ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಯತ್ನಾಳ್, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು "ದೇಶದ ಮೊದಲ ಪ್ರಧಾನಿ" ಎಂದು ಉಲ್ಲೇಖಿಸಿದರು.
“ನಮ್ಮ ಸನಾತನ ಧರ್ಮ, ನಮ್ಮ ತಾಯಿ ಮತ್ತು ನಮ್ಮ ಭಾರತ ಮಾತೆ ನಮಗೆ ಸರ್ವಸ್ವ, ಭಾರತ ಮಾತೆಯ ವಿರುದ್ಧ ಯಾರಾದರೂ ಮಾತನಾಡಲು ಧೈರ್ಯ ಮಾಡಿದರೆ ನಾವು ಸಹಿಸುವುದಿಲ್ಲ. ಇದರೊಂದಿಗೆ ನಮ್ಮ ವಿಶ್ವ ನಾಯಕ ನರೇಂದ್ರ ಮೋದಿಯವರ ಬಗ್ಗೆ ಯಾರಾದರೂ ಕೆಟ್ಟದಾಗಿ ಮಾತನಾಡಿದರೆ, ಭಾರತೀಯರಾದ ನಾವು ಸಹಿಸುವುದಿಲ್ಲ ಎಂದು ಅವರು ಹೇಳಿದರು.
ಇದನ್ನೂ ಓದಿ: ಪ್ರಧಾನಿ ಮೋದಿಯವರಿಗೆ ವಿಷಸರ್ಪ ಎಂದಿದ್ದಕ್ಕೆ ವಿಷಕನ್ಯೆ ಎಂದಿದ್ದೇನೆ, ಕ್ಷಮೆ ಕೇಳಲ್ಲ: ಯತ್ನಾಳ್
ವಿರೋಧ ಪಕ್ಷದ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಅವರು, "ನಿಮ್ಮ ಕೊಳಕು ನಾಲಿಗೆ ಹರಿಯಬಿಡಲು ಪ್ರಯತ್ನಿಸಿದರೆ, ನಾವು ಅದೇ ಪಿಚ್‌ನಲ್ಲಿ ಉತ್ತರಿಸುತ್ತೇವೆ, ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಭಾರತವು 'ವಿಶ್ವ ಗುರು' ಆಗಿದೆ. ಅವರು ನಮ್ಮ ಮೊದಲ ಪ್ರಧಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿರೂಪ. ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂದು ಹೇಳಿದರು.