ಬೆಂಗಳೂರು: ರಾಹುಲ್ ಗಾಂಧಿಯವರ ಸಂಸತ್ ಸದಸ್ಯತ್ವವನ್ನು ಪುನಃಸ್ಥಾಪಿಸಿರುವುದಕ್ಕೆ ರಾಜ್ಯ ಕಾಂಗ್ರೆಸ್ ಸಂತಸ ವ್ಯಕ್ತಪಡಿಸಿದೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಯಾವ ಯಾವ ಬಗೆಯಲ್ಲಿ ತುಳಿಯಲು ಯತ್ನಿಸಿದರೂ ರಾಹುಲ್ ಗಾಂಧಿ ಪುಟಿದು ಮೇಲೆದ್ದು ಬರುತ್ತಾರೆಂದು ಹೇಳಿದೆ.
ಸತ್ಯಕ್ಕೆ ಹಿನ್ನೆಡೆ ಇರಬಹುದು, ಸತ್ಯಕ್ಕೆ ಅಂತ್ಯವಿರುವುದಿಲ್ಲ. ರಾಹುಲ್ ಗಾಂಧಿಯವರನ್ನು ಅವರನ್ನು ಯಾವ ಯಾವ ಬಗೆಯಲ್ಲಿ ತುಳಿಯಲು ಯತ್ನಿಸಿದರೂ ಪುಟಿದು ಮೇಲೆದ್ದು ಬರುತ್ತಾರೆ. ಏಕೆಂದರೆ ಅವರೊಂದಿಗೆ ನ್ಯಾಯವಿದೆ, ಸತ್ಯವಿದೆ. ಭ್ರಷ್ಟರಿಗೆ ದುಃಸ್ವಪ್ನವಾಗಿ ಮತ್ತೊಮ್ಮೆ ಸಂಸತ್ತಿಗೆ ಸಿಂಹದಂತೆ ಕಾಲಿಡುತ್ತಿದ್ದಾರೆಂದು ತಿಳಿಸಿದೆ.
ಮೋದಿ ಉಪನಾಮ ಟೀಕೆ ಪ್ರಕರಣಕ್ಕೆ ಸಂಬಂಧಿಸಿ ಸೂರತ್ ನ್ಯಾಯಾಲಯವು ಕಾಂಗ್ರೆಸ್ ಮುಖಂಡ ರಾಹುಲ್‌ಗಾಂಧಿ ಅವರಿಗೆ ವಿಧಿಸಿದ್ದ 2 ವರ್ಷಗಳ ಜೈಲು ಶಿಕ್ಷೆ ಪ್ರಕರಣಕ್ಕೆ ಸುಪ್ರಿಂಕೋರ್ಟ್ ತಡೆಯಾಜ್ಞೆ ವಿಧಿಸಿದ ಬೆನ್ನಲ್ಲೇ, ರಾಹುಲ್ ಗಾಂಧಿಯವಲ ಸಂಸತ್ತ ಸದಸ್ಯತ್ವವನ್ನು ಪುನಃಸ್ಥಾಪಿಸಿದ್ದಾರೆ.
ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಸಂಸತ್ ಸ್ಥಾನದಿಂದ ಅನರ್ಹಗೊಳಿಸಲಾಗಿದ್ದ ಆದೇಶವನ್ನು ವಾಪಸ್ ಪಡೆಯಲಾಗಿದ್ದು, ಅವರ ಸದಸ್ಯತ್ವವನ್ನು ಮರುಸ್ಥಾಪಿಸಲಾಗಿದೆ ಎಂದು ಲೋಕಸಭೆ ಸೆಕ್ರೆಟರಿಯೇಟ್ ಅಧಿಸೂಚನೆ ಹೊರಡಿಸಿದೆ.
Advertisement